Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಾಂಗ್ರೆಸ್ ನವರು ಗೆಲ್ಲುತ್ತಾರೆ ಎಂಬ ಕಾರಣಕ್ಕೆ ಮೈತ್ರಿ ಮಾಡಿಕೊಂಡ್ರಾ..? : ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ದೇವೇಗೌಡ್ರು ಹೇಳಿದ್ದೇನು..?

08:16 PM Oct 09, 2023 IST | suddionenews
Advertisement

 

Advertisement

ದಕ್ಷಿಣ ಕನ್ನಡ : ಜೆಡಿಎಸ್ ತತ್ವ ಸಿದ್ದಾಂತವೇ ಬೇರೆ, ಬಿನೆಪಿಯ ತತ್ವ ಸಿದ್ಧಂತವೇ ಬೇರೆ. ಉತ್ತರ ಧ್ರುವ‌ಮತ್ತು ದಕ್ಷಿಣ ಧ್ರುವ ಒಟ್ಟಾಗುವುದಕ್ಕೆ ಹೊರಟಿದೆ. ಅಂದ್ರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ‌ ಮಾಡಿಕೊಂಡು ಚುನಾವಣೆ ಎದುರಿಸಲು ಹೊರಟಿದೆ. ಈ ಮೈತ್ರಿ ಸಂಬಂಧ ಸ್ವತಃ ಎರಡು ಪಕ್ಷದ ಕಾರ್ಯಕರ್ತರು, ಶಾಸಕರಿಗೇನೆ ಇಷ್ಟವಿಲ್ಲ. ವಿರೋಧದ ನಡುವೆಯೂ ಮೈತ್ರಿ‌ ಮಾಡಿಕೊಂಡಿದ್ದು ಯಾಕೆ ಎಂಬುದನ್ನು ಹೇಳಿದ್ದಾರೆ.

ಇಂದು ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ. ಬಳಿಕ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಕ್ಷೇತ್ರಗಳ ಟಿಕೆಟ್ ಇನ್ನು ಹಂಚಿಕೆಯಾಗಬೇಕು ಅಷ್ಟೇ. ಈಗಾಗಲೇ ಅಮಿತ್ ಷಾ ಜೊತೆಗೆ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ. ದಸರಾ ಹಬ್ಬ ಮುಗಿದ ಬಳಿಕ ಸೀಟು ಹಂಚಿಕೆಯ ಚರ್ಚೆ ನಡೆಯುತ್ತದೆ. ಮಂಡ್ಯ ಸೇರಿದಂತೆ ಬೇರೆ ಯಾವುದೇ ಕ್ಷೇತ್ರಗಳ ಬಗ್ಗೆ ಇನ್ನು ಯಾವುದೇ ಚರ್ಚೆಯಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು ಇರುವ 28 ಕ್ಷೇತ್ರಗಳನ್ನು ಗೆದ್ದು ಬಿಡುತ್ತೀವಿ ಎಂಬ ಉತ್ಸಾಹದಲ್ಲಿದ್ದಾರೆ. ಅದಕ್ಕೆ ನಾವೂ ಬಿಜೆಒಇ ಜೊತೆಗೆ ಮೈತ್ರಿ ಮಾಡಿಕೊಂಡೆವು ಎಂದಿದ್ದಾರೆ.

Advertisement

ಸದ್ಯಕ್ಕೆ ನನ್ನ ಆರೋಗ್ಯ ಸುಧಾರಿಸಿದರೆ ನಾನು, ಕುಮಾರಸ್ವಾಮಿ ಮತ್ತೆ ಕೇಂದ್ರ ಗೃಹಮಂತ್ರಿಗಳ ಜೊತೆಗೆ ಚರ್ಚೆ ನಡೆಸಲಿದ್ದೇವೆ. ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಜೊತೆಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದೇವೆ. ಅದಾದ ಬಳಿಕ ಕುಮಾರಸ್ವಾಮಿ ಅವರು ಕೇಂದ್ರ ಗೃಹ ಮಂತ್ರಿಯವರನ್ನು ಭೇಟಿ ಮಾಡಿದ್ದಾರೆ. ಹಿಂದಿನ ಚುನಾವಣೆಯ ಮತಗಳನ್ನು ಇಟ್ಟುಗೂಡಿಸಿ ಒಂದು ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.

Advertisement
Tags :
allianceBjpCongressDevegowdafeaturedjdsmangalurusuddioneಕಾಂಗ್ರೆಸ್ಜೆಡಿಎಸ್ದೇವೇಗೌಡರುಬಿಜೆಪಿಮಂಗಳೂರುಮೈತ್ರಿಸುದ್ದಿಒನ್
Advertisement
Next Article