ದರ್ಶನ್ ಕೇಸಲ್ಲಿ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿದ್ರಾ..?
ಬೆಂಗಳೂರು: ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್ ಸೇರಿ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಲಾಗಿದೆ. ಇದೇ ಕೊಲೆಯ ಕೇಸಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್ ಮಾಡಲಾಗಿದೆ. ಈಗಾಗಲೇ ತನಿಖೆ ಕೂಡ ನಡೆಸುತ್ತಿದೆ ಪೊಲೀಸ್ ತಂಡ. ಇನ್ನು ಆರು ದಿನಗಳ ಕಾಲ ದರ್ಶನ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆದರೆ ದರ್ಶನ್ ಅವರನ್ನು ಅರೆಸ್ಟ್ ಮಾಡಿದ ಕ್ಷಣದಿಂದ ಒತ್ತಡಗಳು ಕೇಳಿ ಬರುತ್ತಿವೆ, ರಾಜಕಾರಣಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ಮಾತುಗಳೆಲ್ಲಾ ಓಡಾಡುತ್ತಿವೆ. ಇದರ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಹತ್ತಿರ ಯಾರೂ ಕೂಡ ಈ ಕೇಸಿನ ಬಗ್ಗೆ ಮಾತನಾಡಿಲ್ಲ. ಅರೆಸ್ಟ್ ಆದ 24 ಗಂಟೆಗಳ ಬಳಿಕ ವಿಚಾರ ಗೊತ್ತಾಗಿದೆ. ನನ್ನ ಜೊತೆಗೆ ದರ್ಶನ್ ಸಂಪರ್ಕದಲ್ಲಿ ಇಲ್ಲ ಎಂದಿದ್ದಾರೆ. ಈ ಮೂಲಕ ಪ್ರಭಾವಿ ರಾಜಕಾರಣಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದಾರೆ ಎಂಬ ವಿಚಾರಕ್ಕೆ ತೆರೆ ಎಳೆದಿದ್ದಾರೆ.
ಇನ್ನು ದರ್ಶನ್ ಕೇಸ್ ನಲ್ಲಿ ತನಿಖೆ ನಡೆಯುತ್ತಿದ್ದು, ಸ್ಟೇಷನ್ ಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಜೊತೆಗೆ ಶಾಮಿಯಾನ ಹಾಕಿ ಏನನ್ನು ಕಾಣದ ರೀತಿ ಮುಚ್ಚಿದ್ದಾರೆ. ಮಾಧ್ಯಮದವರಿಗೂ ಒಳಗೆ ನಿಷೇಧ ಏರಿದ್ದಾರೆ. ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಒಮ್ಮೊಮ್ಮೆ ಹೀಗೆ ಆಗುತ್ತೆ. ನನ್ನನ್ನು ಸ್ಟೇಷನ್ ಗೆ ಕರೆದುಕೊಂಡು ಹೋಗುವಾಗ ದಾರಿ ಬದಲಾವಣೆ ಮಾಡ್ತಾ ಇದ್ದರು. ಅಭಿಮಾನಿಗಳು ಬಂದು ಗಲಾಟೆ ಮಾಡಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದಿದ್ದಾರೆ.