ಮಾರ್ಟಿನ್ ಸಿನಿಮಾ ತಂಡಕ್ಕೆ ನಿರ್ದೇಶಕರೇ ಮೋಸ ಮಾಡಿದರಾ..? ಏನಿದು ಆರೋಪ-ಪ್ರತ್ಯಾರೋಪ..?
ಬೆಂಗಳೂರು: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಯೇ ಇದೆ. ಧ್ರುವ ಸರ್ಜಾ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಅಕ್ಟೋಬರ್ 11ಕ್ಕೆ ದೇಶದಾದ್ಯಂತ ರಿಲೀಸ್ ಆಗಲಿದೆ. ಆದರೆ ಇದರ ನಡುವೆ ನಿರ್ದೇಶಕ ಎ.ಪಿ.ಅರ್ಜುನ್ ಮೇಲೆ ಕಮಿಷನ್ ಆರೋಪ ಬಂದಿದೆ.
ಧ್ರುವ ಸರ್ಜಾ ಹಾಗೂ ಎ.ಪಿ.ಅರ್ಜುನ್ ಕಾಂಬಿನೇಷನ್ ಅದಾಗಲೇ ಹಿಟ್ ಆಗಿದೆ. ಈಗ ಮತ್ತೊಂದು ಸಕ್ಸಸ್ ಸಿಕ್ಕೆ ಸಿಗುವ ನಿರೀಕ್ಷೆ ಇದೆ. ಇದರ ಬೆನ್ನಲ್ಲೇ ಇಂಥದ್ದೊಂದು ಆರೋಪ ಬಂದಿದೆ. ಸಿಜಿ ವರ್ಕ್ ಗಾಗಿ ನೀಡಿದ್ದ ಹಣದಲ್ಲಿ ಕಮೀಷನ್ ಪಡೆದಿದ್ದಾರೆಂದು ಸತೀಶ್ ರೆಡ್ಡಿ ಎಂಬಾತ ಆರೋಪ ಮಾಡಿದ್ದಾರೆ.
ಮಾರ್ಟಿನ್ ಸಿನಿಮಾ ದೊಡ್ಡಮಟ್ಟದಲ್ಲಿ ಸಿದ್ದವಾಗುತ್ತಿದೆಮ ಇದರಲ್ಲಿ ಸಿಜಿ ವರ್ಕ್ ಕೂಡ ಅಷ್ಟೇ ದೊಡ್ಡಮಟ್ಟದಲ್ಲಿ ಇದೆ. ಸಿಜಿ ವರ್ಕ್ ಮಾಡಿಕೊಡಲು ಡಿಜಿಟಲ್ ಟೆರೆನ್ ಕಂಪನಿಗೆ ನೀಡಲಾಗಿತ್ತು. ಈ ಸಿನಿಮಾ ನಿರ್ಮಾಪಕರಾದ ಉದಯ್ ಮೆಹ್ತಾ ಡಿಜಿಟೆಲ್ ಟೆರೆನ್ ಸಂಸ್ಥೆಯ ವಿರುದ್ಧ ದೂರು ನೀಡಿದ್ದರು. ಹಣ ಪಡೆದಿದ್ದರು, ಕೆಲಸ ಮಾಡದೆ ವಂಚಿಸಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಸುನಿಲ್ ರೆಡ್ಡಿ ಹಾಗೂ ಸತ್ಯಾ ರೆಡ್ಡಿ ವಿರುದ್ಧ ಪೊಲೀಸರಿಗೆ ದೂರು ನಿಡೀದ್ದರು. ಇದೀಗ ಈ ಕೇಸ್ ಗೆ ಸತ್ಯಾ ರೆಡ್ಡಿ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಸಿಜಿ ವರ್ಕ್ ಮಾಡಿಕೊಡಲು ನಿರ್ದೇಶಕ ಎಪಿ ಅರ್ಜುನ್ ಲಕ್ಷಲಕ್ಷ ಕಮೀಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ನಿರ್ದೇಶಕರೆ ಉತ್ತರಿಸಬೇಕಿದೆ. ಈ ಮೊದಲು ನಿರ್ಮಾಪಕ ಉದಯ್ ಮೆಹ್ತಾ ಹಾಗೂ ಅರ್ಜುನ್ ನಡುವೆ ಏನು ಸರಿ ಇಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಅದೆಲ್ಲದಕ್ಕೂ ನಿರ್ಮಾಪಕ ಉದಯ್ ಮೆಹ್ತಾ ಅವರೇ ವಿಡಿಯೋ ಮೂಲಕ ಕ್ಲಾರಿಟಿ ನೀಡಿದ್ದರು.