Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿಪಿ ಯೋಗೀಶ್ವರ್ ಗೆ ಕಾಂಗ್ರೆಸ್ ನಿಂದ ಆಫರ್ ಬಂದಿದ್ಯಾ..? ಸ್ವತಃ ಸಿಪಿವೈ ಹೇಳಿದ್ದೇನು..?

06:04 PM Oct 22, 2024 IST | suddionenews
Advertisement

ರಾಮನಗರ: ಚನ್ನಪಟ್ಟಣ ಕ್ಷೇತ್ರ ಸದ್ಯ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಎರಡು ಪಕ್ಷಗಳಿಂದ ಯಾರು ನಿಲ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯ ಕಾಂಗ್ರೆಸ್ ನಿಂದ ಸಿಪಿ ಯೋಗೀಶ್ವರ್ ಗೆ ಆಫರ್ ಹೋಗಿದೆ ಎನ್ನಲಾಗಿದೆ. ಝ ಎಲ್ಲಾ ಬೆಳವಣಿಗೆಯ ಬಗ್ಗೆ ಸಿಪಿ ಯೋಗೀಶ್ವರ್ ಹೇಳಿದ್ದು ಹೀಗೆ, ಗುರುವಾರ ನಾಮಪತ್ರವನ್ನ ಸಲ್ಲಿಕೆ ಮಾಡ್ತೀನಿ. ಅಂತಿಮವಾಗಿ ಯಾವ ಚಿಹ್ನೆಯಿಂದ ಸ್ಪರ್ಧಿಸಬೇಕು ಎಂಬುದನ್ನು ಇಂದು ಸಂಜೆಯೊಳಗೆ ತೀರ್ಮಾನ ಮಾಡುತ್ತೇನೆ.

Advertisement

ಚುನಾವಣೆ ಎಂದ ಮೇಲೆ ರಾಜಕೀಯ ಪಕ್ಷಗಳು ಆಫರ್ ಕೊಡ್ತವೆ. ಈಗ ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಎಲ್ಲಾ ಮುಖಂಡರ ಜೊತೆಗೆ ಕೂತು, ಚರ್ಚಿಸಿ ಒಂದು ತೀರ್ಮಾನಕ್ಕೆ ಬರ್ತೇನೆ. ನಮ್ಮ ಮುಖಂಡರು ಯಾವ ಪಕ್ಷದಿಂದ ಅಂತ ಹೇಳ್ತಾರೋ ಆ ಪಕ್ಷದಿಂದ ನಿಲ್ತೇನೆ. ನಾನಂತು ಈಗಾಗಲೇ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೇನೆ ಅಂತ ಹೇಳಿದ್ದೀನಿ. ಚರ್ಚೆ ಬಳಿಕ, ಇಂದು ಸಂಜೆಯೊಳಗೆ ಚಿಹ್ನೆಯ ಗುರುತನ್ನು ತಿಳಿಸುತ್ತೇನೆ.

ಎಲ್ಲಾ ಥರದ ಊಹಾಪೋಹಗಳಿವೆ. ಆದರೆ ಸಂಜೆ ವೇಳೆಗೆ ಎಲ್ಲಾ ವಿಚಾರಗಳು ತಿಳಿಸುತ್ತೇನೆ. ದುಡಿಕಿನ ತೀರ್ಮಾನ ಇಲ್ಲ. ಮುಂಖಂಡರು ತಮ್ಮ ಅಭಿಪ್ರಾಯವನ್ನ ಮುಕ್ತವಾಗಿ ಹೇಳಿಕೊಳ್ಳಬೇಕು.ಮುಖಂಡರ ಅಭಿಪ್ರಾಯದ ಮೇರೆಗೆ ನಾನು ನಿಲ್ಲುತ್ತೇನೆ.

Advertisement

ನಾನು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಪಕ್ಷದ ಮುಖಂಡರ ಜೊತೆಗೆ ಕೂತು ಚರ್ಚೆ ಮಾಡುತ್ತೇನೆ. ಇವತ್ತು ಕಾಯ್ತೀನಿ. ಬಿಜೆಪಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು. ನಾನು ಯಾರನ್ನೂ ಸಂಪರ್ಕ ಕೂಡ ಮಾಡಿಲ್ಲ. ನನಗೂ ಯಾರೂ ಸಂಪರ್ಕ ಮಾಡಿಲ್ಲ. ಬೇರೆ ಬೇರೆ ಸ್ನೇಹಿತರು ಅಲ್ಲಿ ಇಲ್ಲಿ ಬಂದು ಹೇಳ್ತಾರೆ. ನಮ್ಮ ಮುಖಂಡರೆ ಅಂತಿಮ. ಅವರು ಏನು ಹೇಳ್ತಾರೆ ನೋಡೋಣಾ. ಸಿದ್ದರಾಮಯ್ಯ ಅವರು ಹೇಳಿದ ಹೇಳಿಕೆ ಅವರ ದೊಡ್ಡ ಗುಣ. ನಾನು ಈ ಹಿಂದೆ ಕಾಂಗ್ರೆಸ್ ನಲ್ಲಿದ್ದವನು. ಸದ್ಯಕ್ಕೆ ನನಗೇನು ಉತ್ತರ ಕೊಡುವುದಕ್ಕೆ ಆಗ್ತಿಲ್ಲ. ಸಂಜೆ ಮಾತಾಡ್ತೀನಿ ಎಂದಿದ್ದಾರೆ.

Advertisement
Tags :
bengaluruchitradurgaCongressCP Yogeeshwarsuddionesuddione newsಕಾಂಗ್ರೆಸ್ಚಿತ್ರದುರ್ಗಬೆಂಗಳೂರುಸಿಪಿ ಯೋಗೀಶ್ವರ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article