ವ್ಯಾಕ್ಸಿನ್ ಹಾಕಿಸಿಕೊಂಡಿದ್ದಕ್ಕೆ ಅಪ್ಪುಗೆ ಹಾರ್ಟ್ ಅಟ್ಯಾಕ್ ಆಯ್ತಾ..? ವೈರಲ್ ಆಗ್ತಿದೆ ಪುನೀತ್ ಫೋಟೋ..!
ಕೊರೊನಾ ವೈರಸ್ ಕೊಟ್ಟ ಕಾಟ ಅಷ್ಟಿಷ್ಟಲ್ಲ. ನಷ್ಟದ ಜೊತೆಗೆ ಸಾವು ನೋವುಗಳಾಗಿವೆ. ಈಗಲೂ ಅದೆಷ್ಟೋ ಕುಟುಂಬಗಳು ಕೊರೋನಾದಿಂದ ನೋವು ಅನುಭವಿಸುತ್ತಿವೆ. ಕೊರೋನಾ ಎಂದರೆ ಸಾಕು ಒಂದು ಕ್ಷಣ ಹಾರ್ಟ್ ನಿಂತೇ ಹೋಗುತ್ತದೆ. ಇದರ ನಡುವೆ ಅಪ್ಪು ಸಾವಿನ ವಿಚಾರ ಈಗ ಸಾಕಷ್ಟು ಸುದ್ದಿಯಾಗುತ್ತಿದೆ. ಕೋವಿಶೀಲ್ಡ್ ಹಾಕಿಸಿಕೊಂಡವರಿಗೆ ಸೈಡ್ ಎಫೆಕ್ಟ್ ಆಗುತ್ತಿದ್ದು, ಆ ಲಸಿಕೆಯೇ ಅಪ್ಪು ಸಾವಿಗೆ ಕಾರಣವಾಯ್ತಾ ಎಂದೆಲ್ಲಾ ಚರ್ಚೆಗಳು ಶುರುವಾಗಿವೆ.
ಅಪ್ಪು ಲಸಿಕೆ ಹಾಕಿಸಿಕೊಂಡಿದ್ದ ಫೋಟೋ ಜೊತೆಗೆ ಅಂದಿನ ಕಮೆಂಟ್ ಗಳು ವೈರಲ್ ಆಗುತ್ತಿವೆ. ಪುನೀತ್ ರಾಜ್‍ಕುಮಾರ್ ಅಂದು ಮಾಡಿದ್ದ ಪೋಸ್ಟ್ ಇಂದು ವೈರಲ್ ಆಗುತ್ತಿದೆ. 2021ರ ಏಪ್ರಿಲ್ 7ರಂದು ಪುನೀತ್ ರಾಜ್‍ಕುಮಾರ್ ಅವರು ಮೊದಲ ವ್ಯಾಕ್ಸಿನ್ ತೆಗೆದುಕೊಂಡರು. ಅದರ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಾಕಲಾಗಿತ್ತು. ನಾನು ಮೊದಲ ವ್ಯಾಕ್ಸಿನ್ ತೆಗೆದುಕೊಂಡಿದ್ದೇನೆ. 45 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ತೆಗೆದುಕೊಳ್ಳಬಹುದು ಎಂದು ಕ್ಯಾಪ್ಶನ್ ಕೂಡ ಹಾಕಿದ್ದರು ಪುನೀತ್ ರಾಜ್‍ಕುಮಾರ್. ಅಪ್ಪು ಮಾಡಿದ್ದ ಆ ಪೋಸ್ಟ್ ಗೆ ಬೃಂದಾವನ ಎಂಬುವವರು ಅಂದೇ ಪ್ರತಿಕ್ರಿಯೆ ನೀಡಿದ್ದರು. ಕೋವಿಶೀಲ್ಡ್ ತೆಗೆದುಕೊಳ್ಳಬೇಡಿ. 45 ವರ್ಷ ಮೇಲ್ಪಟ್ಟವರಿಗೆ ಅದು ಒಳ್ಳೆಯದಲ್ಲ ಎಂದಿದ್ದರು.
ಆ ಪೋಸ್ಟ್ ಈಗ ವೈರಲ್ ಆಗುತ್ತಿದ್ದು, ಕೋವೀಶಿಲ್ಡ್ ಲಸಿಕೆಯಿಂದಾನೇ ನಮ್ಮ ಅಪ್ಪು ಅವರನ್ನ ಕಳೆದುಕೊಂಡ್ವಾ ಎಂದು ಅಭಿಮಾನಿಗಳು ಪ್ರಶ್ನೆ ಹಾಕಿಕೊಳ್ಳುತ್ತಿದ್ದಾರೆ. ಕೋವೀಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುತ್ತದೆ, ರಕ್ತ ಹೆಪ್ಪುಗಟ್ಟುವಿಕೆಯಂತ ಸಮಸ್ಯೆ ಕಾಡುತ್ತದೆ ಎಂದು ಲಸಿಕೆ ತಯಾರಿಸಿದ್ದ ಆಸ್ಟ್ರಾಜೆನೆಕ್ ಕಂಪನಿಯೇ ಒಪ್ಪಿಕೊಂಡಿದೆ. ಇದರಿಂದ ಭಾರತದ ಜನತೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.