For the best experience, open
https://m.suddione.com
on your mobile browser.
Advertisement

ರಿಲೀಸ್ ಗೆ ರೆಡಿಯಾಯ್ತು ಪ್ರತೀಕ್ ನಿರ್ದೇಶನದ 'ಧ್ರುವತಾರೆ

03:01 PM Aug 08, 2024 IST | suddionenews
ರಿಲೀಸ್ ಗೆ ರೆಡಿಯಾಯ್ತು ಪ್ರತೀಕ್ ನಿರ್ದೇಶನದ  ಧ್ರುವತಾರೆ
Advertisement

ಬೆಂಗಳೂರು : ಪ್ರತೀಕ್ ಅಂಡ್ ಮೌಲ್ಯ ಯಾರಿಗೆ ಗೊತ್ತಿಲ್ಲ ಹೇಳಿ. ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಕಪಲ್. ತಮಾಷೆ ಮಾಡೋದು, ಒಳ್ಳೊಳ್ಳೆ ಕಂಟೆಂಟ್ ಕೊಡುವುದರಲ್ಲಿ ಮುಂದು. ಇತ್ತಿಚೆಗಷ್ಟೇ ಈ ದಂಪತಿ ಮುದ್ದಾದ ಮಗುವಿನ ಜನನವಾಗಿದೆ. ಇದೇ ಖುಷಿಯಲ್ಲಿ ತಮ್ಮ ನಿರ್ದೇಶನ ಹಾಗೂ ಅಭಿನಯದ ಧ್ರುವ ತಾರೆ ಸಿನಿಮಾ ರಿಲೀಸ್ ಗೆ ಪ್ಲ್ಯಾನ್ ಮಾಡಿದ್ದಾರೆ.

Advertisement
Advertisement

ಧ್ರುವತಾರೆ ಸಿನಿಮಾವನ್ನು ಪ್ರತೀಕ್ ನಿರ್ದೇಶನ ಮಾಡಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮ ಕಥೆ ಹೊಂದಿರುವಂತ ಸಿನಿಮಾ ಜಿ ಪಿ ಫಿಲಂ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಗಣೇಶ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಪೋಸ್ಟರ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. 70 ದಿನಗಳ ಕಾಲ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರೀಕರಣವನ್ನು ಬೆಂಗಳೂರು ಮತ್ತು ಸಕ್ಲೇಶಪುರ ಸುತ್ತಮುತ್ತ ನಡೆಸಲಾಗಿದೆ.

ಚಿತ್ರಕ್ಕೆ ಸೂರಜ್ ಜೋಯ್ಸ್ ಸಂಗೀತವನ್ನು ನೀಡುತ್ತಿದ್ದಾರೆ. ಜೀಚನ್ ರವರು ಕ್ಯಾಮರಾ ಹಿಡಿದಿದ್ದಾರೆ. ಪಿ ಜಿ ಫಿಲಂ ಸ್ಟುಡಿಯೋಸ್ನ ಮೊದಲನೇ ಸಿನಿಮಾ ಇದಾಗಿದೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದ್ದು, ಪ್ರೇಕ್ಷಕರಿಗೆ ಒಂದು ಹೊಸ ಕಥೆ ಹೇಳಲು ಮುಂದಿನ ಸೆಪ್ಟೆಂಬರ್ ಹೊತ್ತಿಗೆ ತೆರೆಗೆ ಬರಲು ಸಿದ್ಧವಾಗಿದೆ. ಮುಖ್ಯ ತಾರಾಗಣದಲ್ಲಿ ಪ್ರತೀಕ್ ಮತ್ತು ಮೌಲ್ಯ ಕಾಣಿಸಿಕೊಂಡಿದ್ದು ಉಳಿದಂತೆ ರಮೇಶ್ ಭಟ್, ಮೂಗ್ ಸುರೇಶ್, ಸುಮನ್ ನಗರ್ಕರ್, ಅಶ್ವಿನ್ ರಾವ್ ಪಲ್ಲಕ್ಕಿ, ಪಿ ಡಿ ಸತೀಶ್, ಸಂಗೀತ ನಾರಾಯಣ್, ಮತ್ತು ನೆಗೆಟಿವ್ ಶೇಡ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. ತಮ್ಮ ಕನಸಿನ ಸಿನಿಮಾವನ್ನು ತೆರೆಗೆ ತರಲು ಪ್ರತೀಕ್ ಉತ್ಸುಕರಾಗಿದ್ದಾರೆ.

Advertisement
Advertisement

Advertisement
Tags :
Advertisement