Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರಜ್ವಲ್ ರೇವಣ್ಣನಿಗೆ ಶರಣಾಗುವಂತೆ ದೇವೇಗೌಡ್ರು ಪತ್ರ : ರೇವಣ್ಣ ಹೇಳಿದ್ದೇನು..?

01:08 PM May 27, 2024 IST | suddionenews
Advertisement

ಮಂಗಳೂರು: ಜೈಲಿನಿಂದ ಹೊರ ಬಮನದ ಮೇಲೆ ಮಾಜಿ ಸಚಿವ ಹಡಚ್.ಡಿ ರೇವಣ್ಣ ಅವರು ದೇವಸ್ಥಾನಗಳನ್ನು ತಿರುಗುವ ಕೆಲಸ ಮಾಡುತ್ತಿದ್ದಾರೆ. ಇಂದು ಧರ್ಮಸ್ಥಳದ ಶ್ರೀ ಮಂಜುನಾಥ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಮಂಜುನಾಥನಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಅಂಕಷ್ಟಗಳನ್ನು ನಿವಾರಿಸುವುದಕ್ಕೆ ದೇವರ ಬಳಿ ಪ್ರಾರ್ಥಿಸಿದ್ದಾರೆ. ಮಂಜುನಾಥ ದೇವಸ್ಥಾನವಲ್ಲದೆ ಇತರೆ ದೇವಸ್ಥಾನಗಳಿಗೂ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.

Advertisement

 

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಸುಮಾರು ನಾಲ್ಕು ದಶಕಗಳಿಂದ ನಾನು ರಾಜಕಾರಣದಲ್ಲಿ ಇದ್ದೇನೆ. 25 ವರ್ಷಗಳ ಕಾಲ ಹೊಳೆನರಸೀಪುರ ಶಾಸಕನಾಗಿ ಜನರ ಸೇವೆ ಸಲ್ಲಿಸಿದ್ದೇನೆ. ನನಗೆ ಕಾನೂನಿನ ಮೇಲೆ ಗೌರವವಿದೆ ಮತ್ತು ಮಂಜುನಾಥನ ಮೇಲೆ ನಂಬಿಕೆ ಇದೆ. ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿರುವಾಗ ಮಾತನಾಡುವುದಿ, ಕಮೆಂಟ್ ಮಾಡುವುದು ಸರಿಯಲ್ಲ ಎಂದು ತಮ್ಮ ಹಾಗೂ ಮಗ ಪ್ರಜ್ವಲ್ ಬಗ್ಗೆ ಇರುವ ಆರೋಪಗಳ ಬಗ್ಗೆ ಮಾತನಾಡುವುದಕ್ಕೆ ಹೋಗಲಿಲ್ಲ.

Advertisement

ಇದೇ ವೇಳೆ ಮಾಜಿ ಪ್ರಧಾನಿ, ರೇವಣ್ಣ ಅವರ ತಂದೆ ಹೆಚ್.ಡಿ.ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರಿಗೆ ಶರಣಾಗುವಂತೆ ಪತ್ರ ಬರೆದಿದ್ದರು. ಅದರಲ್ಲೂ ಕಡೆಯ ಎಚ್ಚರಿಕೆ ಎಂದು ಹೇಳಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಪತ್ರದ ಬಗ್ಗೆಯೆಲ್ಲಾ ನನಗೇನು ಗೊತ್ತಿಲ್ಲ ಎಂದು ಹೇಳಿ ಮುಂದೆ ಸಾಗಿದರು.

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿ ಇಂದಿಗೆ ಸರಿಯಾಗಿ ಒಂದು ತಿಂಗಳು. ಎಷ್ಟೇ ನೋಟೀಸ್ ಕೊಟ್ಟರು ದೇಶಕ್ಕೆ ಬಂದು ಎಸ್ಐಟಿ ತನಿಖೆಯನ್ನು ಎದುರಿಸುತ್ತಿಲ್ಲ. ಇನ್ನೊಂದು ವಾರ ಕಳೆದರೆ ಲೋಕಸಭಾ ಚುನಾವಣೆಯ ಫಲಿತಾಂಶವೂ ಬರಲಿದೆ. ಫಲಿತಾಂಶದ ಬಳಿಕ ಪ್ರಜ್ವಲ್ ದೇಶಕ್ಕೆ ಬರುವ ಸಾಧ್ಯತೆ ಇದೆ.

Advertisement
Tags :
bengaluruHD Devegowdahd revannaMangaloreprajwal revannasuddionesuddione newsಎಚ್ ಡಿ ರೇವಣ್ಣದೇವೇಗೌಡ್ರು ಪತ್ರಪ್ರಜ್ವಲ್ ರೇವಣ್ಣಬೆಂಗಳೂರುಮಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article