For the best experience, open
https://m.suddione.com
on your mobile browser.
Advertisement

ಗಡಿಭಾಗದ ಒಳಗಿನ ಮತ್ತು ಹೊರಭಾಗದ ಕಲೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸದಾ ಸಿದ್ಧ : ಎಸ್.ಕೆ.ಮಲ್ಲಿಕಾರ್ಜುನ

07:45 PM Dec 22, 2023 IST | suddionenews
ಗಡಿಭಾಗದ ಒಳಗಿನ ಮತ್ತು ಹೊರಭಾಗದ ಕಲೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸದಾ ಸಿದ್ಧ   ಎಸ್ ಕೆ ಮಲ್ಲಿಕಾರ್ಜುನ
Advertisement

ಸುದ್ದಿಒನ್, ಚಿತ್ರದುರ್ಗ, ಡಿ.22 : ಕನ್ನಡನಾಡಿನ ವೈಭವವನ್ನು ಸಾಂಸ್ಕೃತಿಕವಾಗಿ ಉಳಿಸಿ ಬೆಳೆಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರ ಶ್ರಮಿಸುತ್ತಿದೆ. ಮರೆಯಾಗುತ್ತಿರುವ ಕಲೆಗಳಿಗೆ ಉತ್ತೇಜನ, ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿದೆ ಎಂದು ಹಿರಿಯೂರು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.

Advertisement
Advertisement

ಹಿರಿಯೂರು ತಾಲ್ಲೂಕಿನ ಯಲ್ಲದಕೆರೆ ಗ್ರಾಮದಲ್ಲಿನ ಜ್ಞಾನಜ್ಯೋತಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಚಿಗುರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳಿಗೆ ಇಲಾಖೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದೆ. ಜೀವನ ಪರ್ಯಂತ ಮರೆಯಲಾಗದ ಉಜ್ವಲ ಭವಿಷ್ಯ ರೂಪಿಸುತ್ತಿದೆ. ಕಲೆಗೆ ಸಾವಿಲ್ಲ, ಕಲೆಯನ್ನು ನಂಬಿದವರಿಗೆ ನಿಜವಾದ ಶಾಂತಿ, ನೆಮ್ಮದಿ ಇರುವುದಿಲ್ಲ. ಬದಲಿಗೆ ತೃಪ್ತಿದಾಯಕರಾಗಿರುತ್ತಾರೆ. ಕಲೆಯನ್ನು ಆಸ್ವಾದಿಸುವ ಪೋಷಕರು ಕಲೆಯನ್ನು ಮತ್ತು ಕಲಾವಿದರನ್ನು ಪೋಷಿಸಬೇಕು ಹಾಗೂ ಸಹಕರಿಸಬೇಕು ಆಗ ಮಾತ್ರ ಸಾರ್ಥಕತೆಯ ಬದುಕು ಕಟ್ಟಿಕೊಟ್ಟ ಪುಣ್ಯ ಕಲಾ ಉಪಾಸಕರಿಗೆ ಸಲ್ಲುತ್ತದೆ ಎಂದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಮಾತನಾಡಿ ಇಲಾಖೆಯಿಂದ ಜಿಲ್ಲೆಯ ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಗಡಿಭಾಗದ ಸಂಸ್ಕೃತಿ ಆಚಾರ, ವಿಚಾರಗಳು, ಸಾಂಸ್ಕೃತಿಕವಾಗಿ ವಿನಿಮಯ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ. ಗಡಿಭಾಗದ ಒಳಗಿನ ಮತ್ತು ಹೊರಭಾಗದ ಕಲೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಇಲಾಖೆ ಸದಾ ಸಿದ್ಧವಾಗಿರುತ್ತದೆ ಎಂದರು.

ಯಲ್ಲದಕೆರೆ ಗ್ರಾ.ಪಂ. ಅಧ್ಯಕ್ಷೆ ನಯನ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಗಿರೀಶ್, ರಂಗಸೌರಭ ಕಲಾ ಸಂಘದ ಕಾರ್ಯದರ್ಶಿ ಹಾಗೂ ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ, ಗ್ರಾ.ಪಂ ಸದಸ್ಯ ಧರ್ಮರಾಜ್, ಜ್ಞಾನಜ್ಯೋತಿ ಪ್ರೌಢಶಾಲೆಯ ಆಡಳಿತಾಧಿಕಾರಿ ಮನೋಹರ್, ಡಾ.ರಘುನಂದನ್, ಪರಮೇಶ್ವರಭಟ್, ಗೀತಾ ಮತ್ತು ನಾಗಶ್ರೀ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.

ಶಾಲೋಂ ಆರ್ ಮತ್ತು ತಂಡದವರು ಕರ್ನಾಟಕ ಶಾಸ್ತ್ರೀಯ ಸಂಗೀತ, ಕೆ.ಪಿ.ಎಂ.ಗುರುದೇವ್ ಮತ್ತು ತಂಡದವರು ಸುಗಮ ಸಂಗೀತ, ಗ್ರೀಷ್ಮ ಮತ್ತು ಸಂಗಡಿಗರಿಂದ ಜಾನಪದ ಗೀತೆಗಳು, ಶ್ರೇಯಂಕ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, ಸುವೀಕ್ಷ ಆರ್.ಎಸ್ ಮತ್ತು ಸಂಗಡಿಗರಿಂದ ನಾಟಕ ಪ್ರದರ್ಶನ, ಭುವನ್ಯರಾವ್ ಇವರು ಏಕಪಾತ್ರಾಭಿನಯ, ಜ್ಞಾನಜ್ಯೋತಿ ಪ್ರೌಢಶಾಲೆಯ ಮಕ್ಕಳು ಜಾನಪದ ನೃತ್ಯ ಮತ್ತು ಕೋಲಾಟ ಪ್ರದರ್ಶನ ನೀಡಿದರು.

Advertisement
Tags :
Advertisement