ರಾಜ್ಯಾದ್ಯಂತ ಹೆಚ್ಚಾಗುತ್ತಿದೆ ಡೆಂಗ್ಯೂ : 20 ದಿನದಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇವಲ 20 ದಿನದಲ್ಲೇ 1404 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಸಾಮಾನ್ಯ ಜ್ವರ ಕಾಣಿಸಿಕೊಂಡರು ಜನರಿಗೆ ಆತಂಕ ಶುರುವಾಗಿದೆ. ಡೆಂಗ್ಯೂ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈಗ ಒಟ್ಟು 5,571 ಪ್ರಕರಣಗಳು ಇದೆ.
ಈ ಮೊದಲೆಲ್ಲಾ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಜಾಸ್ತಿಯಾಗಿದ್ದವು. ಆದರೆ ಸದ್ಯಕ್ಕೆ ಬೆಂಗಳೂರಿನಲ್ಲಿ ಪ್ರಕರಣ ಕಡಿಮೆಯಾಗಿದ್ದು, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪ್ರಕರಣಗಳು ಜಾಸ್ತಿಯಾಗಿವೆ. ಡೆಂಗ್ಯೂ ಪ್ರಕರಣದಲ್ಲಿ ಜನ ಕೂಡ ಎಚ್ಚರಿಕೆ ವಹಿಸಬೇಕೆಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಡೆಂಗ್ಯೂ ಜ್ವರ ಆರಂಭದಲ್ಲಿ ಹೆಚ್ಚೇನು ಗುಣಲಕ್ಷಣಗಳನ್ನು ತೋರಿಸುವುದಿಲ್ಲ. ಬದಲಿಗೆ ನಾಲ್ಕೈದು ದಿನ ಕಳೆದರೆ ರೋಗ ಲಕ್ಷಣಗಳು ಕಂಡು ಬರುತ್ತವೆ. ಅದರಲ್ಲಿ ತಲೆನೋವು, ಮೈಕೈ ನೋವು, ಕೀಲು ನೋವು, ವಾಕರಿಕೆ, ವಾಂತಿ, ಕಣ್ಣುಗಳ ಹಿಂಭಾಗದಲ್ಲಿ ಊದಿಕೊಂಡ ಫೀಲ್ ಇರುತ್ತದೆ. ಹೀಗಾಗಿ ಸಣ್ಣಮಟ್ಟದ ಜ್ವರ ಕಾಣಿಸಿಕೊಂಡರು ಮೊದಲು ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ. ಸರಿಯಾದ ಔಷಧಿ ತೆಗೆದುಕೊಳ್ಳಿ. ಡೆಂಗ್ಯೂ ಬಂದ ಕೂಡಲೇ ಪ್ಲೇಟ್ ಲೇಟ್ಸ್ ಕಡಿಮೆಯಾಗುತ್ತದೆ. ಅದರ ಕಡೆಗೂ ಗಮನ ಹರಿಸಿ.