For the best experience, open
https://m.suddione.com
on your mobile browser.
Advertisement

KAS ಪರೀಕ್ಷೆ ಮುಂದೂಡಲು ಆಗ್ರಹ : ಹಲವರು ಪೊಲೀಸರ ವಶಕ್ಕೆ..!

01:45 PM Aug 25, 2024 IST | suddionenews
kas ಪರೀಕ್ಷೆ ಮುಂದೂಡಲು ಆಗ್ರಹ   ಹಲವರು ಪೊಲೀಸರ ವಶಕ್ಕೆ
Advertisement

ಬೆಂಗಳೂರು: ಆಗಸ್ಟ್ 27ಕ್ಕೆ KAS ಪರೀಕ್ಷೆಯನ್ನು ನಿಗಧಿ ಮಾಡಲಾಗಿದೆ. ಕೆಎಎಸ್ ಪ್ರಿಮಿನರಿ ಪರೀಕ್ಷೆಯ ಬಗ್ಗೆ ಹಲವು ಗೊಂದಲಗಳಿದ್ದು, ಪರೀಕ್ಷೆ ಮುಂದೂಡುವಂತೆ ನಿನ್ನೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆದಿದೆ. ಇಂದು ಬೆಳಗ್ಗೆ ಬೇರೆ ಬೆಳವಣಿಗೆ ನಡೆದಿದ್ದು, ವಿಜಯನಗರ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.

Advertisement

ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಿದ್ದ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕಾಂತಕುಮಾರ್ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ. ಆದರಿವತ್ತು ರಾಜ್ಯಪಾಲರನ್ನ ಭೇಟಿ ವಿದ್ಯಾರ್ಥಿಗಳು ತಯಾರಿ ನಡೆಸಿದ್ದರು. ರಾಜ್ಯಪಾಲರು ಕಾಲಾವಕಾಶ ಕೂಡ ನೀಡಿದ್ದರು. ಜೊತೆಗೆ ವಿಜಯನಗರದಲ್ಲಿ ಸಿಎಂ ಭೇಟಿಗೆ ನಿರ್ಧರಿಸಿದ್ದರು. ಸಂಜೆ ವಿಜಯನಗರದಲ್ಲಿ ಸಿಎಂ ಪಾಲಿಕೆ ಬಜಾರ್ ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ಸಿಎಂ‌ ಭೇಟಿ ಮಾಡುವ ಪ್ರಯತ್ನದಲ್ಲಿದ್ದ ಅಭ್ಯರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂಜಾಗೃತ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

Advertisement
Advertisement

ಇನ್ನು ಈ ಸಂಬಂಧ ಪರೀಕ್ಷೆ ನಿಗಧಿತ ಸಮಯದಂದೇ ನಡೆಯಲಿದೆ ಎಂದು ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಎಲ್.ಕೆ.ಅತೀಕ್ ಸ್ಪಷ್ಟನೆ ನೀಡಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೆಎಎಸ್ ಆಕಾಂಕ್ಷಿಗಳ ಸಣ್ಣದೊಂದು ಗುಂಪು ಆ. 27ಕ್ಕೆ ನಿಗದಿಯಾಗಿರುವ ಕೆಎಎಸ್ ಪರೀಕ್ಷೆಯನ್ನು ಮುಂದೂಡಲು ಲಾಬಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಆ ಗುಂಪು ಎಲ್ಲಾ ತರದ ಒತ್ತಡ ತಂತ್ರ ಬಳಸುತ್ತಿದ್ದಾರೆ. ಆ ಗುಂಪು ಕೆಪಿಎಸ್​​ಸಿ, ಡಿಪಿಎಆರ್ ಮತ್ತು ಸಿಎಂ ಕಚೇರಿಯ ಅಧಿಕಾರಿಗಳಿಗೆ ಕರೆಗಳು ಹಾಗೂ ವಾಟ್ಸ್ ಆ್ಯಪ್ ಮೆಸೇಜ್​​ಗಳನ್ನು ಹರಿ ಬಿಡುತ್ತಿದ್ದಾರೆ. ಹೀಗಾಗಿ ನಾನು ಕೆಲವೊಮ್ಮೆ ನನ್ನ ಮೊಬೈಲನ್ನು ಎರೊಪ್ಲೇನ್ ಮೋಡ್​​ಗೆ ಇಡುವಂತಾಗಿದೆ ಎಂದು ತಿಳಿಸಿದ್ದಾರೆ.

ಕೆಪಿಸಿಎಸ್ ಸುತ್ತ ಅನುಮಾನದ ಹುತ್ತ ಎಂದು ಹೇಳುವ ಮೂಲಕ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಈ 1500 ಗುಂಪಿನ ವಿದ್ಯಾರ್ಥಿಗಳ ಗುಂಪಿನ ಒತ್ತಡಕ್ಕೆ ಮಣಿದರೆ 2.5 ಲಕ್ಷ ಪರೀಕ್ಷಾರ್ಥಿಗಳಿಗೆ ಅನ್ಯಾಯ ಮಾಡಿದಂತೆ ಆಗಲಿದೆ. ಅವರೆಲ್ಲರೂ ಪರೀಕ್ಷೆಗೆ ತಯಾರಿ ನಡೆಸಿದ್ದು, ಪರೀಕ್ಷಾ ಕೇಂದ್ರಗಳಿಗೆ ತಮ್ಮ ಪ್ರವೇಶ ಪತ್ರವನ್ನು ನೋಂದಾಯಿಸಿದ್ದಾರೆ ಎಂದು ಹೇಳಿದ್ದಾರೆ.

Tags :
Advertisement