For the best experience, open
https://m.suddione.com
on your mobile browser.
Advertisement

ದೀಪಿಕಾ ಪಡುಕೋಣೆಗೆ ಹೆಣ್ಣು ಮಗು ಜನನ..!

06:23 PM Sep 08, 2024 IST | suddionenews
ದೀಪಿಕಾ ಪಡುಕೋಣೆಗೆ ಹೆಣ್ಣು ಮಗು ಜನನ
Advertisement

Advertisement

ಬಾಲಿವುಡ್ ನಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದ ಜೊತೆಗೆ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮನೆಯಲ್ಲಿ ಡಬ್ಬಲ್ ಸಂತಸ ಹೆಚ್ಚಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಈ ಸ್ಟಾರ್ ಜೋಡಿಗೆ ಹಬ್ಬದ ದಿನವೇ ಸಂಭ್ರಮದ ಮಗುವನ್ನು ಬರ ಮಾಡಿಕೊಂಡಿದ್ದಾರೆ. ದೀಪಿಕಾ ಹಾಗೂ ರಣವೀರ್ ಸಿಂಗ್ ದಂಪತಿಗೆ ಹೆಣ್ಣು ಮಗು ಜನಿಸಿದೆ.

ಇಂದು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮಗು ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಿವುಡ್ ನ ಸೆಲೆಬ್ರೆಟಿಗಳು ತಾಯಿ ಮಗುವಿಗಾಗಿ ಶುಭ ಹಾರೈಸಿದ್ದಾರೆ. ನಿನ್ನೆಯಷ್ಟೇ ಡೆಲಿವರಿ ನೋವಿನಿಂದ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗೌರಿ ಹಬ್ಬದ ಬೆನ್ನಲ್ಲೇ ರಣವೀರ್ ಸಿಂಗ್ ಹಾಗೂ ದೀಪಿಕಾ ಪುಟ್ಟ ಗೌರಿಯನ್ನು ಬರ ಮಾಡಿಕೊಂಡಿದ್ದಾರೆ.

Advertisement

ಮುಂಬೈನ ಪ್ರತಿಷ್ಠಿತ ಆಸ್ಪತ್ರೆ ಹೆಚ್ ಎನ್ ರಿಲಯನ್ಸ್ ನಲ್ಲಿ ದೀಪಿಕಾ ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಸಂಜೆ ಏಕಾಏಕಿ ದೀಪಿಕಾ ಪಡುಕೋಣೆ ಈ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿಯೇ ಅಡ್ಮಿಟ್ ಕೂಡ ಆದರೂ. ಇದೆಲ್ಲವು ಅಭಿಮಾನಿಗಳ ಕಣ್ಣಿಗೂ ಬಿದ್ದಿತ್ತು. ಡೆಲಿವರಿಗಾಗಿಯೇ ದೀಪಿಕಾ ಬಂದಿದ್ದಾರೆ ಎನ್ನಲಾಗಿತ್ತು. ದೀಪಿಕಾಗೆ ಹೆಣ್ಣಾಗಬಹುದು ಅಂತ ಕೆಲವರು ಊಹೆ ಮಾಡಿದರೆ ಇನ್ನು ಕೆಲವರು ಗಂಡಾಗಬಹುದು ಎಂದು ಊಹೆ ಮಾಡಿದ್ದರು. ಇದಕ್ಕೂ ಮುನ್ನ ದೀಪಿಕಾ ಬಗ್ಗೆ ಒಂದಷ್ಟು ಗಾಸಿಪ್ ಸುದ್ದಿ ಹಬ್ಬಿತ್ತು. ದೀಪಿಕಾ ಪಡುಕೋಣೆ ಗರ್ಭಿಣಿಯೇ ಅಲ್ಲ ಎಂದಿದ್ದರು. ಅದಕ್ಕೆ ಫೋಟೋಶೂಟ್ ಮಾಡಿಸುವ ಮೂಲಕ ತಕ್ಕ ಉತ್ತರ ಕೂಡ ನೀಡಿದ್ದರು ನಟಿ. ಇದೀಗ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.

Advertisement

Advertisement
Tags :
Advertisement