For the best experience, open
https://m.suddione.com
on your mobile browser.
Advertisement

ದೀಪಿಕಾ ದಾಸ್ ಅದ್ದೂರಿ ಆರತಕ್ಷತೆ : ಯಾರೆಲ್ಲಾ ಬಂದಿದ್ರು..? ಗುಟ್ಟಾಗಿ ಆದ ಮದುವೆ ಬಗ್ಗೆ ಹೇಳಿದ್ದೇನು..?

07:19 PM Mar 10, 2024 IST | suddionenews
ದೀಪಿಕಾ ದಾಸ್ ಅದ್ದೂರಿ ಆರತಕ್ಷತೆ   ಯಾರೆಲ್ಲಾ ಬಂದಿದ್ರು    ಗುಟ್ಟಾಗಿ ಆದ ಮದುವೆ ಬಗ್ಗೆ ಹೇಳಿದ್ದೇನು
Advertisement

ಬೆಂಗಳೂರು: ನಾಗಿಣಿ ಧಾರಾವಾಹಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಇಂದು ಅದ್ದೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಯಾರಿಗೂ ಮಾಹಿತಿಯೇ ತಿಳಿಸದೆ ಮದುವೆಯಾಗಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಷ್ಟೇ ಮದುವೆ ನಡೆದಿತ್ತು. ದೀಪಿಕಾ ದಾಸ್ ಈ ರೀತಿ ಗುಟ್ಟಾಗಿ ಮದುವೆಯಾಗಿದ್ದೇಕೆ ಎಂಬುದು ಎಲ್ಲರಿಗೂ ಪ್ರಶ್ನೆಯಾಗಿ ಕಾಡಿತ್ತು. ಹುಡುಗ ದುಬೈ ಎಂದೇ ಹೇಳಲಾಗಿತ್ತು. ಕನ್ನಡ ಬರುತ್ತಾ ಎಂಬೆಲ್ಲಾ ಚರ್ಚೆಗಳು ಹುಟ್ಟುಕೊಂಡಿದ್ದವು‌. ಇದೀಗ ದೀಪಿಕಾ ದಾಸ್ ಪತಿಯ ಬಗ್ಗೆ ಇದೀಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.

Advertisement
Advertisement

Advertisement

ಇಂದು ದೀಪಿಕಾ ದಾಸ್ ಹಾಗೂ ದೀಪಕ್ ಅದ್ದೂರಿ ಆರತಕ್ಷತಾ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಭಾಗಿಯಾಗಿ, ನವದಂಪತಿಗೆ ಶುಭ ಹಾರೈಸಿದ್ದಾರೆ. ಸ್ಯಾಂಡಲ್ ವುಡ್ ನ ಹಲವು ಕಲಾವಿದರು ಕೂಡ ಆಗಮಿಸಿದ್ದರು.

Advertisement
Advertisement

ಇನ್ನು ದೀಪಿಕಾ ದಾಸ್ ಎಲ್ಲಾ ಪ್ರಶ್ನೆಗಳಿಗೂ ತೆರೆ ಎಳೆದಿದ್ದಾರೆ. 'ನಾನು ಮದುವೆಯಾಗಿರುವ ಹುಡುಗ ಅಪ್ಪಟ ಕನ್ನಡದ ಹುಡುಗ, ಗೌಡ್ರ ಹುಡುಗ. ನಾನು ವಿದೇಶಿಗರನ್ನೆಲ್ಲಾ ನೋಡಲ್ಲ. ಇಲ್ಲೆ ಆರ್ ಆರ್ ನಗರದ ಹುಡುಗ. ಮದುವೆಯನ್ನ ಗುಟ್ಟಾಗಿ ಏನು ಆಗಿಲ್ಲ. ಮೂರ್ನಾಲ್ಕು ತಿಂಗಳ ತಯಾರಿ ಅದು. ನಾನು ದೀಪಕ್ ಹಲವು ವರ್ಷಗಳಿಂದ ಪರಿಚಯ ಇದ್ದೆವು. ಕಳೆದ ವರ್ಷ ಮದುವೆ ವಿಚಾರ ಅಂತ ಬಂದಾಗ, ಮೊದಲು ಒಂದು ವರ್ಷ ಡೇಟ್ ಮಾಡೊಣಾ. ಇಬ್ಬರಿಗೂ ಹೊಂದಾಣಿಕೆಯಾಗುತ್ತೆ ಎಂದರೆ ಮದುವೆಯಾಗೋಣಾ ಎಂದು ತೀರ್ಮಾನ ಮಾಡಿದೆವು. ಅದರಂತೆ ಇಬ್ಬರಿಗೂ ಹೊಂದಾಣಿಕೆ ಆಯ್ತು. ಮದುವೆ ಯಾಕೆ ತಡ ಮಾಡಬೇಕು ಅಂತ ಮದುವೆ ಆದೆವು' ಎಂದಿದ್ದಾರೆ.

Advertisement
Tags :
Advertisement