For the best experience, open
https://m.suddione.com
on your mobile browser.
Advertisement

ಸುಳಿವು ಕೊಡದೆ ಮದುವೆಯಾದ ದೀಪಿಕಾ ದಾಸ್ : ನಟಿ ಕೈ ಹಿಡಿದ ಆ ವರ ಯಾರು..?

09:03 PM Mar 02, 2024 IST | suddionenews
ಸುಳಿವು ಕೊಡದೆ ಮದುವೆಯಾದ ದೀಪಿಕಾ ದಾಸ್   ನಟಿ ಕೈ ಹಿಡಿದ ಆ ವರ ಯಾರು
Advertisement

Advertisement
Advertisement

ಬಿಗ್ ಬಾಸ್ ಸೀಸನ್ 7 ಸ್ಪರ್ಧಿ, ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ನಟಿ ದೀಪಿಕಾ ದಾಸ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆಯಷ್ಟೇ ದೀಪಿಕಾ ದಾಸ್ ಮದುವೆಯಾಗಿದ್ದಾರೆ. ಆ ಫೋಟೋಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಕ್ಕೆ ಕಷ್ಟವಾಗಿತ್ತು. ಇತ್ತಿಚೆಗಷ್ಟೇ ನಮ್ರತಾ ಹಾಗೂ ಕಾರ್ತಿಕ್ ಮದುವೆಯಾದವರಂತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.‌ಹೀಗಾಗಿ ದೀಪಿಕಾರದ್ದು ಕೂಡ ಜಾಹೀರಾತೆ ಇರಬಹುದು ಎಂದೇ ಊಹಿಸಲಾಗಿತ್ತು. ಆದರೆ ಇಂದು ಮತ್ತೊಂದು ಫೋಟೋವನ್ನು ದೀಪಿಕಾ ಹಂವಿಕೊಂಡಿದ್ದಾರೆ. ಆ ಫೋಟೋದಲ್ಲಿ ವರನ ಹೆಸರು ಹಾಗೂ ಮದುವೆ ದಿನಾಂಕ ಇದ್ದು, ವೆಲ್ ಕಮ್ ಬೋರ್ಡ್ ಅದಾಗಿದೆ. ಹೀಗಾಗಿ ದೀಪಿಕಾ ದಾಸ್ ಮದುವೆಯಾಗಿರುವುದು ಪಕ್ಕಾ ಆಗಿದೆ.

Advertisement

ಆದರೆ ನಟಿ ಹಿಂಗ್ಯಾಕೆ ಗುಟ್ಟಾಗಿ ಮದುವೆಯಾದರೂ ಎಂಬುದೇ ಎಲ್ಲರಿಗೂ ಆಶ್ಚರ್ಯವಾಗಿದೆ. ಕುಟುಂಬಸ್ಥರು ಹಾಗೂ ಧರ್ಮೀಯರಿಗಷ್ಟೇ ಆಹ್ವಾನ ನೀಡಲಾಗಿದೆ. ಗೋವಾದಲ್ಲಿ ಅದ್ದೂರಿಯಾಗಿಯೇ ಮದುವೆಯಾಗಿದ್ದಾರೆ. ಮದುವೆಯ ಫೋಟೋಗಳು, ಅರಿಶಿನ ಶಾಸ್ತ್ರದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Advertisement
Advertisement

ಇನ್ನು ದೀಪಿಕಾ ದಾಸ್ ಮದುವೆಯಾಗಿರುವ ಹುಡುಗನ ಹೆಸರು ದೀಪಕ್. ಕರ್ನಾಟಕ ಮೂಲದವರೇ ದೀಪಕ್ ದುಬೈನಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಉದ್ಯಮಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ದೀಪಿಕಾ ದಾಸ್ ಮದುವೆಗೆ ಇನ್ನು ಯಾರೆಲ್ಲಾ ಹೋಗಿದ್ದರು, ಗುಟ್ಟಾಗಿ, ಖಾಸಗಿಯಾಗಿ ಮದುವೆಯಾಗಿದ್ದಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿದಿಲ್ಲ. ಫೋಟೋಗಳನ್ನು ಹಂಚಿಕೊಂಡಿರುವ ದೀಪಿಕಾ ದಾಸ್ ಮುಂದೊಂದು ದಿನ ಈ ಬಗ್ಗೆಯೂ ಮಾಹಿತಿ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಮದುವೆ ಫೋಟೋ ಜೊತೆಗೆ ಶೈನ್ ಶೆಟ್ಟಿಯ ಬಗ್ಗೆ ಟ್ರೋಲ್ ಕೂಡ ಹರಿದಾಡುತ್ತಿದೆ. ದೀಪಿಕಾರ ಕರಿಮಣಿ ಮಾಲೀಕ ನೀನಲ್ಲ ಅನ್ನೋ ಟ್ರೋಲ್ ಹರಿದಾಡುತ್ತಿದೆ.

Advertisement
Tags :
Advertisement