For the best experience, open
https://m.suddione.com
on your mobile browser.
Advertisement

ಡಿಸೆಂಬರ್ 29 ಹಾಗೂ 30 ರಂದು ಲಿಂಗಸೂಗೂರಿನಲ್ಲಿ ವೈಜ್ಞಾನಿಕ ಸಮ್ಮೇಳನ ಹಾಗೂ ವೈಚಾರಿಕ ದಿನಾಚರಣೆ

04:12 PM Dec 22, 2023 IST | suddionenews
ಡಿಸೆಂಬರ್ 29 ಹಾಗೂ 30 ರಂದು ಲಿಂಗಸೂಗೂರಿನಲ್ಲಿ ವೈಜ್ಞಾನಿಕ ಸಮ್ಮೇಳನ ಹಾಗೂ ವೈಚಾರಿಕ ದಿನಾಚರಣೆ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಡಿ. 22 :  ಡಿಸೆಂಬರ್ 29 ಹಾಗೂ 30 ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಕಾಲೇಜು ಮೈದಾನದಲ್ಲಿ ಸತೀಶ್ ಜಾರಕಿಹೊಳಿಯವರ ಸರ್ವಾಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ ಹಾಗೂ ರಾಷ್ಟ್ರಕವಿ ಕುವೆಂಪು ದಿನಾಚರಣೆ, ವೈಚಾರಿಕ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷದ ನಾಗರಾಜ್ ಸಂಗಮ್ ತಿಳಿಸಿದ್ದಾರೆ.

Advertisement

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕಳೆದ ಮೂರು ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು ಪ್ರತಿ ವರ್ಷ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಆಯೋಜಿಸುತ್ತ ಬಂದಿದೆ.

Advertisement

ಡಿ29 ಶುಕ್ರವಾರ ಬೆಳಗ್ಗೆ 10ಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಜಸ್ಟೀಸ್ ನಾಗಮೋಹನ್‍ದಾಸ್ ಸಮ್ಮೇಳನಾಧ್ಯಕ್ಷರ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದಡಾ.ಶರಣ ಪ್ರಕಾಶ್ ಪಾಟೀಲ್ ಕಲ್ಯಾಣಸಿರಿ ಸ್ಮರಣ ಸಂಚಿಕೆಯನ್ನು, ವಿಜ್ಞಾನ ಮತ್ತುತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್.ಬೋಸರಾಜು ವಿಜ್ಞಾನಸಿರಿ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸುವರು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ್‍ಖರ್ಗೆ ವಿಜ್ಞಾನಗ್ರಾಮಕ್ಕೆ ಚಾಲನೆ ನೀಡುವರು.

ಕನ್ನಡ ಮತ್ತು ಸಂಸ್ಕøತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿಯವರು ನೂತನ ವರ್ಷದ ಕ್ಯಾಲೆಂಡರ್ ಲೋಕಾರ್ಪಣೆ ಮಾಡುವರು, ರಾಯಚೂರು ಲೋಕಸಭಾಕ್ಷೇತ್ರದ ಸಂಸದರಾದರಾಜಾಅಮರೇಶ್ವರ ನಾಯಕ 2024 ರ ದಿನಚರಿಯನ್ನು, ಲಿಂಗಸುಗೂರು ವಿಧಾನಸಭಾಕ್ಷೇತ್ರದ ಶಾಸಕರಾದ ಮಾನಪ್ಪ ಡಿ.ವಜ್ಜಲ್ ಕೃಷಿಸುದ್ದಿ ಮಾಸ ಪತ್ರಿಕೆ ಬಿಡುಗಡೆಗೊಳಿಸುವರು, ವಿಧಾನ ಪರಿಷತ್ತು ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ ವಿಜ್ಞಾನ ವಸ್ತು ಪ್ರದರ್ಶನಉದ್ಘಾಟಿಸುವರು, ಖ್ಯಾತ ವಿಜ್ಞಾನಿ ಡಾ.ಎ.ಎಸ್.ಕಿರಣ್‍ಕುಮಾರ್ ವಿಜ್ಞಾನ ಗ್ರಾಮದ ಮುನ್ನೋಟ ಬಿಡುಗಡೆಗೊಳಿಸುವರು. ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಮಳಿಗೆಗಳನ್ನು ಉದ್ಘಾಟಿಸುವರು.

ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಜೀವಮಾನ ಸಾಧನ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಇದನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್, ಸಾಹಿತಿ ಹಾಗೂ ಪ್ರಗತಿಪರ ಚಿಂತಕರಾದ ಬಿ.ಟಿ.ಲಲಿತಾ ನಾಯಕ್ ಅಂತರಾಷ್ಟ್ರೀಯಕೌಶಲ್ಯತರಬೇತುದಾರರಾದ ಚೇತನ್‍ರಾಮ್, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ, ಆಕಾಯಿ ಪದ್ಮಾಶಾಲಿ, ಪ್ರಗತಿ ಪರಚಿಂತಕರಾದ ಮಾನಸಯ್ಯ ರವರಿಗೆ ಪ್ರಧಾನ ಮಾಡಲಾಗುವುದು.

ವಿಶಿಷ್ಟ ಸೇವಾ ಪ್ರಶಸ್ತಿಯನ್ನು ಜಗದೀಶ್ ಚಿಕ್ಕನಾಯಕನಹಳ್ಳಿ, ರಕ್ಷಿತಾ ಬಾಗಲಕೋಟೆ, ಸುಧಾ ಬೆಂಗಳೂರು, ಜಿ.ಸಿ.ಕಿರಣ್‍ಕುಮಾರ್ ಬೆಂಗಳೂರು, ಬಸಮ್ಮತೆಗ್ಗಿನಮನಿ ಲಿಂಗಸುಗೂರು, ಮಂಜುನಾಥತುಮಕೂರು, ನವೀನ್‍ತುಮಕೂರು, ಎನ್.ಲಕ್ಷ್ಮೀದೇವಿ ಕೂಡ್ಲಿಗಿ, ಜಯಪ್ರಸಾದ್ ಹಾಸನ, ಗೋಪಾಲ ಪತ್ರಕರ್ತರು ಹಾಸನ.ಇವರಿಗೆ ಹಾಗೂ ವಿಶೇಷವಾಗಿ ವಿಜ್ಞಾನ ಗ್ರಾಮಕ್ಕೆ 10 ಎಕರೆಜಾಗವನ್ನುದಾನವಾಗಿ ನೀಡಿರುವಆರ್.ರವಿ ಬಿಳಿಶಿವಾಲೆ ಇವರನ್ನು ಅಭಿನಂದಿಸಲಾಗುತ್ತದೆ.

ಸಮ್ಮೇಳನಾಧ್ಯಕ್ಷರಾದ ಸತೀಶ್ ಜಾರಕಿಹೊಳಿಯವರಿಗೆ ಇದೇ ಸಂದರ್ಭದಲ್ಲಿ ನಾಗರೀಕ ಸನ್ಮಾನವನ್ನು ಆಯೋಜಿಸಲಾಗಿದೆ.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದಡಾ.ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಲಿದ್ದು ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾಧಿಕಾರಿಗಳಾದ ಎಲ್.ಚಂದ್ರಶೇಖರ್ ನಾಯಕ್, ರೂಪ್ಸಾಅಧ್ಯಕ್ಷರಾದ ಲೇಪಾಕ್ಷಿ, ರಾಯಚೂರು ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷರಾದರಂಗಣ್ಣ ಅಳ್ಕುಂಡಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಕೆ.ನಾಗೇಶ್, ರಾಯಚೂರುಜಿಲ್ಲಾ ಸರ್ಕಾರಿ ನೌಕರರ ಸಂಘದಅಧ್ಯಕ್ಷರಾದ ಭೀಮಣ್ಣ ನಾಯಕ್, ಕೆ.ಎಸ್.ಪಿ.ಎಸ್.ಟಿ.ಎರಾಯಚೂರು ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ರೆಡ್ಡಿ ಭಾಗವಹಿಸಲಿದ್ದಾರೆ.

ಮೊದಲ ದಿನ ವಿವಿಧ ವಿಷಯಗಳ ಕುರಿತು ಮಹತ್ವಪೂರ್ಣವಾದ ಗೋಷ್ಠಿಗಳನ್ನು ಆಯೋಜಿಸಿದ್ದು ಪ್ರಮುಖವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಅಧ್ಯಕ್ಷರಾದ ಡಾ.ಸಿ.ಸೋಮಶೇಖರ್, ನೀವೃತ್ತ ಪೋಲೀಸ್‍ಅಧಿಕಾರಿಎಸ್.ಕೆ.ಉಮೇಶ್ ಸಾಹಿತಿ ಮಂಜುನಾಥಅದ್ದೆ, ಬಿ.ಟಿ.ಲಲಿತಾ ನಾಯಕ್, ವೈ.ಎನ್. ಶಂಕರೇಗೌಡ ಮೊದಲಾದವರು ಭಾಗವಹಿಸಲಿದ್ದಾರೆ. ಇದೇ ದಿನ ಸಂಜೆ ಸಾಂಸ್ಕøತಿಕ ಸೌರಭಕಾರ್ಯಕ್ರಮ ಆಯೋಜಿಸಿದ್ದು ಮಂಜುನಾಥಯು.ಎಂ .ಕಲಾಅಕಾಡೆಮಿ ಇವರು ಸಂಗೀತಾಕಾರ್ಯಕ್ರಮ ನಡೆಸುವರು ವಿಕಾಸ ಆರ್ ರಚಿಸಿದ ಮೌರ್ಯನಿರ್ದೇಶನದ ಬುದ್ದನ ಬೆಳಕು ನಾಟಕ ಪ್ರದರ್ಶನ ಆಯೋಜಿಸಿದೆ.

ರಾಜ್ಯ ಮಟ್ಟದ ಹೆಚ್.ಎನ್.ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ರಾಜ್ಯದ ಚಿತ್ರದುರ್ಗ ಜಿಲ್ಲೆಯ ಗಣೇಶ್‍ರವನ್ನು ಸಾಮಾಜಿಕ ಸೇವೆಗಾಗಿ ಆಯ್ಕೆಯಾಗಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಸಮ್ಮೇಳನವು ಅನೇಕ ಮಹತ್ವಗಳಿಗೆ ಸಾಕ್ಷಿಯಾಗಲಿದೆ. ಸಮ್ಮೇಳನದಲ್ಲಿ ವಿಜ್ಞಾನ , ಮಾಹಿತಿ ಮತ್ತುತಂತ್ರಜ್ಞಾನ ಇಲಾಖೆ ವತಿಯಿಂದ ವಸ್ತು ಪ್ರದರ್ಶನ ಏರ್ಪಡಿಸಿದೆ
ಪತ್ರಿಕಾ ಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಲೋಕೇಶ್ ಪದಾಧಿಕಾರಿಗಳಾದ ಡಾ.ಗುರುನಾಥ್, ಡಾ.ಗುರುನಾಥ್, ನಿವೃತ್ತ ಪ್ರಾಚಾರ್ಯರಾದ ಜ್ಞಾನಮೂರ್ತಿ ಖಜಾಂಚಿ ಪಿ.ಎ.ಬಸವರಾಜ್, ಎಂ.ರಂಗಪ್ಪ, ದಯಾನಂದ್ ಪಾಟೀಲ್ ಇತರರಿದ್ದರು.

Tags :
Advertisement