ಕಾರ್ಮಿಕ ಸಾವು : ಸಾಂತ್ವನ ಹೇಳಿ ಸಹಾಯ ಧನ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ಕುರುಕುಂಟಾ/ ಸೇಡಂ ಸೆ. 04 : ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕುರುಕುಂಟಾ ಮೂಲದ ಕಲ್ಲು ಗಣಿಗಾರಿಕೆ ಕಾರ್ಮಿಕನಾಗಿರುವ ರಾಜು ನಾಮವಾರ(40) ವ್ಯಕ್ತಿ ಕಳೆದೆರೆಡು ದಿನಗಳಿಂದ ಸಂಗಾವಿ ಕಾಗಿಣಾ ನದಿಯಲ್ಲಿ ಕಾಣೆಯಾಗಿದ್ದು, ಇಂದು ವ್ಯಕ್ತಿಯು ಪಾರ್ಥಿವ ಶರೀರವಾಗಿ ದೊರೆತಿದೆ.
ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಭೋವಿ ಸಮಾಜದ ಮುಖಂಡರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ರಾಜು ನಾಮವರರವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಮತ್ತು ಅವರ ಅಗಲಿಕೆಯ ನೋವು ಭರಿಸಲು ಅವರ ಕುಟುಂಬದ ಸದಸ್ಯರಿಗೆ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಶ್ರೀಗಳು ದುಖಃತಪ್ತ ಕುಟುಂಬದ ಒಡತಿ ಶ್ರೀಮತಿ ನರಸಮ್ಮ ರಾಜು ನಾಮವರ ಅವರಿಗೆ ಭಕ್ತರ ಸಹಕಾರ ಹಾಗೂ ಶ್ರೀಪೀಠದಿಂದ 50.000 ರೂಪಾಯಿಗಳನ್ನು ಸಹಾಯಧನ ನೀಡಿದರು. ದುಖಃತಪ್ತ ಕುಟುಂಬದ ಮಕ್ಕಳಾದ ಕುಮಾರ ಅರುಣಾ ರಾಜು ನಾಮವರ ಕುಮಾರಿ ಅಕ್ಷತಾ ರಾಜು ನಾಮವರ ಇವರನ್ನು ಶ್ರೀಪೀಠದ ಆಶ್ರಯಕ್ಕೆ ಒಪ್ಪಿಸಿದರೆ ಸಂಪೂರ್ಣ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳಲಾಗುವುದು ಎಂದು ಅಭಯಹಸ್ತ ನೀಡಿದರು.
ಈ ಸಂದರ್ಭದಲ್ಲಿ ಗುಂಡಪ್ಪ ಸಳುಂಕೆ, ರಾಮಯ್ಯ ಪೂಜಾರಿ, ವಿಠ್ಠಲ ನೆಲೋಗಿ, ಸಂಜು ನಗರಾಧ್ಯಕ್ಷ, ಯಲ್ಲಪ್ಪ ಪೂಜಾರಿ, ಗುಂಡಪ್ಪ ಬಿಜಾಪುರ, ವಿಜಯಕುಮಾರ ಗಿರಿಜಾಪುರ, ರಮೇಶ ನಾಮವರ, ಕಾಶಿನಾಥ ದೊಡ್ಡಮನಿ, ವಿಠಲ ಕಾಶಿ ಚಿತ್ತಾಪುರ, ರಾಮಸ್ವಾಮಿ ಕುರಕುಂಟಾ, ಭೀಮಶಂಕರ, ಶ್ರೀಹರಿ ಉಪಸ್ಥಿತಿಯಿದ್ದರು.