ಬಳ್ಳಾರಿ ಬಾಣಂತಿಯರ ಸಾವು : ಫಾರ್ಮಾಸ್ಯುಟಿಕಲ್ ಕಂಪನಿಗಳನ್ನ ಕಂಟ್ರೋಲ್ ಮಾಡಲು ಆಗುತ್ತಿಲ್ಲ : ದಿನೇಶ್ ಗುಂಡೂರಾವ್..!
ಬೆಳಗಾವಿ: ಬಳ್ಳಾರಿಯ ಬಿಮ್ಸ್ ನಲ್ಲಿ ಬಾಣಂತಿಯರ ಸಾವು ಎಲ್ಲರನ್ನು ಆತಂಕಕ್ಕೆ ದೂಡಿದೆ. ಬಾಣಂತಿಯರ ಸಾವಿನಿಂದಾಗಿ ಈಗ ಗರ್ಭಿಣಿಯರು ಬಿಮ್ಸ್ ಗೆ ಅಡ್ಮಿಟ್ ಆಗುವುದಕ್ಕೆ ಭಯ ಪಡುತ್ತಿದ್ದಾರೆ. ಈ ಸಂಬಂಧ ಇಂದು ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯಾಗಿದೆ. ಈ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿದ್ದಾರೆ. ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಿದ್ದಾರೆ.
ನವೆಂಬರ್ 9, 10, 11 ಮೂರು ದಿನಗಳಲ್ಲಿ 34 ಸಿಸೇರಿಯನ್ ಶಸ್ತ್ರ ಚಿಕಿತ್ಸೆಗಳಾಗಿವೆ. ಶಸ್ತ್ರಚಿಕಿತ್ಸೆ ಬಳಿಕ ಏಳು ಮಂದಿ ಬಾಣಂತಿಯರಿಗೆ ತೊಂದರೆಯಾಗಿದೆ. ಇದರಲ್ಲಿ ಐವೆಉ ಮೃತಪಟ್ಟಿದ್ದಾರೆ. ಘಟನೆ ವರದಿಯಾದ ಬೆನ್ನಲ್ಲೇ ನುರಿತ ವೈದ್ಯರ ತಂಡವನ್ನು ರಚನೆ ಮಾಡಿ ತನಿಖೆ ನಡೆಸಲಾಗಿದೆ. ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಒಂದು ಹೊಸ ಬ್ಯಾಚ್ ಅನ್ನು ನವೆಂಬರ್ 9 ರಂದು ಬಳಸಲಾಗಿದೆ. ಇದರಿಂದ ತೊಂದರೆಯಾಗಬಹುದು ಎಂದು ವೈದ್ಯರ ತಂಡ ಹೆಚ್ಚು ಸಂಶಯವನ್ನು ವ್ಯಕ್ತಪಡಿಸಿದರು. ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಬಗ್ಗೆ 10 ತಿಂಗಳ ಹಿಂದೆಯೇ ಅನುಮಾನ ವ್ಯಕ್ತವಾಗಿತ್ತು. ಮಾರ್ಚ್ ನಿಂದ ಆಗಸ್ಟ್ ವರೆಗೂ ಈ ದ್ರಾವಣ ಬಳಸಲು ಅನುಮತಿ ನೀಡಿರಲಿಲ್ಲ.
ಪಶ್ಚಿಮ ಬಂಗಾಳದ ಕಂಪನಿ ಈ ದ್ರಾವಣ ಪೂರೈಕೆ ಮಾಡಿದೆ. ಕೇಂದ್ರ ಔಷಧ ಇಲಾಖೆ ವರದಿಯನ್ನು ಸಲ್ಲಿಸಿತ್ತು. ಹೀಗಾಗಿ ಆ ಔಷಧ ಬಳಕೆ ಮಾಡದಂತೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಮಗೆ ಫಾರ್ಮಾಸ್ಯುಟಿಕಲ್ ಕಂಪನಿಗಳನ್ನು ನಿಯಂತ್ರಣ ಮಾಡಲಯ ಸಾಧ್ಯವಾಗುತ್ತಿಲ್ಲ. ಉತ್ತರ ಭಾರತದಲ್ಲಿ ಡ್ರಗ್ ಫಾರ್ಮಾ ಕಂಪನಿಗಳು ಅತಿ ಹೆಚ್ಚಾಗಿವೆ. ಅನೇಕ ರೀತಿ ರಕ್ಷಣೆ ಫಾರ್ಮಾ ಕಂಪನಿಗಳಿಗೆ ಸಿಗುತ್ತಿದೆ. ಕಲೆವು ಕಂಪನಿಗಳು ವಿದೇಶಕ್ಕೆ ಒಂದು ರೀತಿಯ ಕ್ವಾಲಿಟಿ ನಮ್ಮ ದೇಶಕ್ಕೆ ಒಂದು ರೀತಿಯ ಕ್ವಾಲಿಟಿಯನ್ನು ಪೂರೈಕೆ ಮಾಡುತ್ತಿವೆ ಎಂದಿದ್ದಾರೆ.