Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಳ್ಳಾರಿ ಬಾಣಂತಿಯರ ಸಾವು: ಔಷಧ ಕಾರಣವಲ್ಲ ಎಂದ ಮಹಿಳಾ ಆಯೋಗ..!

02:05 PM Dec 14, 2024 IST | suddionenews
Advertisement

ಬಳ್ಳಾರಿ: ಕಳೆದ ಕೆಲವು ತಿಂಗಳಿನಿಂದ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ರಾಜ್ಯದಲ್ಲಿಯೇ ಸಂಚಲನ ಮೂಡಿಸಿತ್ತು. ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಕೂಡ ಮಾಡಿದ್ದರು. ಔಷಧಿಯನ್ನು ಪ್ರಯೋಗಾಲಯಕ್ಕೂ ಕಳುಹಿಸಲಾಗಿತ್ತು. ಈ ಸಂಬಂಧ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಬಳ್ಳಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆರಿಗೆ ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿ, ನೀರಿನ ಟ್ಯಾಂಕರ್ ಗಳ ಪರಿಶೀಲನೆ ನಡೆಸಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ನಾಗಲಕ್ಷ್ಮೀ ಚೌದರಿ, ಬಾಣಂತಿಯರ ಸಾವಿಗೆ ಕೇವಲ IV ರಿಂಗರ್ ಲ್ಯಾಕ್ಟೇಟ್ ದ್ರಾವಣ ಮಾತ್ರ ಕಾರಣವಲ್ಲ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿನ ಅಸ್ವಚ್ಛತೆ ಕೂಡ ಕಾರಣವಾಗಿರಬಹುದು. ಹೆರಿಗೆಯಾದ ಬಳಿಕ ನಂಜು, ಬ್ಯಾಕ್ಟೀರಿಯಾದಿಂದ ಇನ್ಫೆಕ್ಷನ್ ಆಗುವ ಸಾಧ್ಯತೆ ಇದೆ. ಹೀಗಾಗಿ ಶಸ್ತ್ರಚಿಕಿತ್ಸಾ ಕೊಠಡಿಯ ಗಾಳಿ, ಗೋಡೆ ಟೇಬಲ್ ಸೇರಿದಂತೆ ಇಡೀ ಹೆರಿಗೆಯ ಸ್ವ್ಯಾಬ್ ವರದಿ ಬೇಕಿದೆ. ಶಸ್ತ್ರಚಿಕಿತ್ಸಾ ಕೊಠಡಿಯಿಂದಾನು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಇನ್ನು ಬಾಣಂತಿಯರ ಸಾವಿನಿಂದ ಜನ ಆತಂಕಗೊಂಡಿದ್ದಾರೆ. ಹೀಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಶೇಕಡ 50 ರಷ್ಟು ಕುಸಿತವಾಗಿದೆ. ಯಾಕಂದ್ರೆ ಸಿಜೇರಿಯನ್ ಆದ ಬಳಿಕ ಬಾಣಂತಿಯರ ಸರಣಿ ಸಾವು ಸಾಮಾನ್ಯವಾಗಿಯೇ ಆತಂಕ ಹುಟ್ಟಿಸಿದೆ. ಅದರಲ್ಲೂ ಹೆರಿಗೆ ಸಮಯದಲ್ಲಿ ಆತಂಕ ಹೆಚ್ಚಾದರೇನೆ ಬಿಪಿ ಕಂಟ್ರೋಲ್ ಬರಲ್ಲ, ಕೂಲ್ ಆಗಿರಿ ಎಂಬ ಸಲಹೆ ನೀಡುತ್ತಾರೆ. ಇಂಥ ಸಂದರ್ಭದಲ್ಲಿ ಬಾಣಂತಿಯರ ಸಾವು ಹೆರಿಗೆಗೆಂದು ಹೊರಟ ಗರ್ಭಿಣಿಯರಿಗೆ ಸಹಜವಾಗಿಯೇ ಆತಂಕ ತರಿಸುತ್ತದೆ. ಆ ಆತಂಕದಿಂದಾನು ಸಮಸ್ಯೆಗಳಾಗಬಹುದು. ಹೀಗಾಗಿ ಸಾಕಷ್ಟು ಜನ ಬೇರೆ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ.

Advertisement

Advertisement
Tags :
bellarybengaluruchitradurgamedicinesuddionesuddione newsWomen's Commissionಔಷಧ ಕಾರಣಚಿತ್ರದುರ್ಗಬಳ್ಳಾರಿ ಬಾಣಂತಿಯರ ಸಾವುಬೆಂಗಳೂರುಮಹಿಳಾ ಆಯೋಗಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article