Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

JDS ಚಿಹ್ನೆಯಡಿ ಸ್ಪರ್ಧಿಸಲು ಡೆಡ್ಲೈನ್ : ಸಿಪಿ ಯೋಗೀಶ್ವರ್ ಕೊಟ್ಟ ಸೂಚನೆಯೇ ಬೇರೆ..!

02:52 PM Oct 21, 2024 IST | suddionenews
Advertisement

ಬೆಂಗಳೂರು, ಅಕ್ಟೋಬರ್. 21 : ಮೂರು ಕ್ಷೇತ್ರಗಳ ಉಪಚುನಾವಣೆಯ ವಿಚಾರದಲ್ಲಿ ಚನ್ನಪಟ್ಟಣ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅದರಲ್ಲೂ ಕಾಂಗ್ರೆಸ್ ಗೆ ಬಿಗ್ ಫೈಟ್ ಕೊಡಬೇಕಾದರೆ ಮೈತ್ರಿ ಪಕ್ಷದಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಹಾಕಲೇಬೇಕಾಗುತ್ತದೆ. ಆರಂಭದಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ಟಿಕೆಟ್ ಆಕಾಂಕ್ಷಿಯಾಗಿರುವ ಸಿ.ಪಿ. ಯೋಗೀಶ್ವರ್ ಅವರಿಗೇನೆ ಟಿಕೆಟ್ ನೀಡಲು ಕುಮಾರಸ್ವಾಮಿ ನಿರ್ಧಾರಿಸಿದ್ದಾರೆ.

Advertisement

ಸಿಪಿ ಯೋಗೀಶ್ವರ್ ಗೆ ಟಿಕೆಟ್ ನೀಡಬೇಕೆಂದರೆ ಒಂದು ಷರತ್ತನ್ನು ವಿಧಿಸಲಾಗಿದೆ. ಜೆಡಿಎಸ್ ಚಿಹ್ನೆಯ ಅಡಿಯಲ್ಲಿಯೇ ಸ್ಪರ್ಧಿಸಬೇಕಾಗಿದೆ. ಈ ಷರತ್ತನ್ನು ಒಪ್ಪಿ ಸ್ಪರ್ಧೆ ಮಾಡಲು, ಸಿಪಿ ಯೋಗೀಶ್ವರ್ ಗೆ ಸಮಯವನ್ನು ನೀಡಲಾಗಿದೆ. ಇಂದು ಸಂಜೆ ತನಕ ಸಮಯ ನೀಡಿದ್ದಾರೆ. ಸಂಜೆಯ ಒಳಗೆ ನಿರ್ಧಾರವನ್ನು ತಿಳಿಸಬೇಕು. ಒಂದು ವೇಳೆ ಸಿಪಿ ಯೋಗೀಶ್ವರ್ ಈ ಷರತ್ತನ್ನು ಒಪ್ಪದೆ ಹೋದರೆ ನಿಖಿಲ್ ಕುಮಾರಸ್ವಾಮಿಗೆ ಮತ್ತೆ ಟಿಕೆಟ್  ನೀಡಲಾಗುತ್ತದಾ ಎಂಬುದನ್ನು ನೋಡಬೇಕಿದೆ.

ಇದರ ನಡುವೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಬೇಕೆಂಬ ಷರತ್ತಿಗೆ ಸಿಪಿ ಯೋಗೀಶ್ವರ್ ಒಪ್ಪುವಂತೆ ಕಾಣುತ್ತಿಲ್ಲ. ಆ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದಾರೆ. ನಾನು ನನ್ನ ತಾಲೂಕಿನ ಜನರ ಜೊತೆಗೂ ಈ ಸಂಬಂಧ ಚರ್ಚೆ ಮಾಡಿದೆ. ಬಹಳ ಭಿನ್ನಾಭಿಪ್ರಾಯ ಕೇಳಿ ಬಂದಿದೆ. ನನ್ನ ಜನ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ‌ ಮಾಡುವುದು ಬೇಡ ಎನ್ನುತ್ತಿದ್ದಾರೆ. ಮೊದಲೇ ನನಗೆ ಪಕ್ಷಾಂತರಿ ಎನ್ನುತ್ತಾರೆ. ಹೀಗಾಗಿ ಬಿಜೆಪಿಯಿಂದಾನೇ ನಿಲ್ಲಿ ಎಂದು ಸಲಹೆ ನೀಡಿದ್ದಾರೆ ಎಂದು ಆಫರ್ ತಿರಸ್ಕರಿಸಿದ್ದಾರೆ.

Advertisement

Advertisement
Tags :
bengaluruchitradurgacp yogeshwardeadlinejdssuddionesuddione newsಉಪಚುನಾವಣೆಚನ್ನಪಟ್ಟಣಚಿತ್ರದುರ್ಗಬೆಂಗಳೂರುಸಿಪಿ ಯೋಗೀಶ್ವರ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article