Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದತ್ತಪೀಠ ಘಟನೆಯ ಕೇಸ್ ರೀ ಒಪನ್ : ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಟಿ ರವಿ ಫುಲ್ ಗರಂ

05:27 PM Jan 04, 2024 IST | suddionenews
Advertisement

ಚಿಕ್ಕಮಗಳೂರು: 2017ರಲ್ಲಿ ದತ್ತಪೀಠದಲ್ಲಿ ಏನು ಘಟನೆ ನಡೆದಿತ್ತು. ಆ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಕೇಸನ್ನು ಬಿಜೆಪಿ ಸರ್ಕಾರ ವಾಪಾಸ್ ಪಡೆದಿತ್ತು. ಇದೀಗ ಆ ಕೇಸ್ ಗೆ ಸಂಬಂಧಿಸಿದಂತೆ ಕಾರ್ಯಕರ್ತರಿಗೆ ನೋಟೀಸ್ ಬಂದಿದೆ. ಈ ಸಂಬಂಧ ಸಿಟಿ ರವಿ ಮಾತನಾಡಿದ್ದು, ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ಹಿಂದೂಗಳನ್ನು ಜಾತಿ ಜಾತಿಯಾಗಿ ಒಡೆಯುವುದು, ಮುಸ್ಲಿಮರನ್ನು ಒಲೈಸಿಕೊಳ್ಳುವುದನ್ನು ಮಾಡುತ್ತಾ ಬರುತ್ತಿದೆ. ಸಂಘಟನೆಯನ್ನು ತುಳಿಯುವ ಉದ್ದೇಶದಿಂದ ಕೇಸನ್ನು ರೀಒಪನ್ ಮಾಡಲಾಗುತ್ತಿದೆ ಎಂದು ಸಿಟಿ ರವಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

Advertisement

 

ಯೋಜನಾ ಬದ್ಧವಾಗಿಯೇ ಸಂಘಟನೆಗಳನ್ನು ಮಣಿಸುತ್ತಾ ಇದ್ದಾರೆ. ನಾವೂ ಎಂದಿಗೂ ಎದೆ ಗುಂದುವುದಿಲ್ಲ. ಹೋರಾಟ ಮಾಡುತ್ತೇವೆ. ದತ್ತ ಪೀಠ ಹೋರಾಟಗಾರರ ಮೇಲಿನ ಕೇಸನ್ನು ರೀ ಓಪನ್ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ಈ ರೀತಿಯಾಗಿ ಕೇಸನ್ನು ಒಪನ್ ಮಾಡಿರುವುದು ಬಿಡಿಬಿಡಿ ಅಂತ ನನಗೆ ಅನ್ನಿಸ್ತಾ ಇಲ್ಲ. ಇವರು ಒಂದು ಯೋಜನೆ ಮಾಡಿದ್ದಾರೆ. ಆ ಯೋಜನೆಗೆ ಒಂದು ಸಂಸ್ಥೆಯನ್ನು ತೆಗೆದುಕೊಂಡು, ಆ ಮೂಲಕ ವರ್ಷಕ್ಕೆ 14-15 ಕೋಟಿ ಹಣ ನೀಡುತ್ತಿದ್ದಾರಂತೆ‌.

Advertisement

ಅವರ ಕೆಲಸ ಏನು ಎಂದರೆ ಸರ್ಕಾರದ ವಿರುದ್ಧ ಏನಾದರೂ ಕೆಲಸ ಬಂದರೆ ಅದನ್ನು ಡೈವರ್ಟ್ ಮಾಡುವುದು. ಹಿಂದೂ ಸಂಘಟನೆಗಳು ಕೆಲಸ ಮಾಡದಂತೆ ನೋಡಿಕೊಳ್ಳುವುದು. ಹಿಂದೂ ಸಂಘಟನೆಗಳನ್ನು ತಿಳಿಯುವುದಕ್ಕೆ ಈ ರೀತಿ ಒಂದು ಕ್ರಿಯೇಟ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಹಿಂದೆ ದಿನೇಶ್ ಅಮಿನ್ ಮಟ್ಟು ಅಂತ ಪತ್ರಕರ್ತರಿದ್ದಲ್ಲ ಅವರ ನೇತೃತ್ವದಲ್ಲಿಯೇ ಹರ್ಬಲ್ ನಕ್ಸಲರ ಆರ್ಗನೈಸರ್ ಮಾಡಿದ್ದಾರಂತೆ. ಅವರ ಕೆಲಸ ಸೋಷಿಯಲ್ ಮೀಡಿಯಾದಲ್ಲಿ ಯಾರು ಸಕ್ರೀಯವಾಗಿದ್ದಾರೆ. ಮೀಡಿಯಾದಲ್ಲಿ, ಸಾರ್ವಜನಿಕವಾಗಿ ಯಾರು ಸಕ್ರೀಯವಾಗಿದ್ದಾರೆ. ಅದನ್ನು ತುಳಿಯುವುದೇ ಅವರ ಕೆಲಸವಾಗಿದೆಯಂತೆ. ಇದನ್ನ ಕೇಳಿದ್ದೇವೆ. ನಾವೇನು ಹೆದರಿಕೊಂಡು ಕುಳಿತಿಲ್ಲ. ಎಲ್ಲವನ್ನು ಹೆದರಿಸುತ್ತೇವೆ ಎಂದಿದ್ದಾರೆ.

Advertisement
Tags :
Case reopencase reopenedChikamagaluruCongress governmentct raviDattapeeth incidentಕಾಂಗ್ರೆಸ್ ಸರ್ಕಾರಕೇಸ್ ರೀ ಒಪನ್ಚಿಕ್ಕಮಗಳೂರುದತ್ತಪೀಠ ಘಟನೆಫುಲ್ ಗರಂಸಿಟಿ ರವಿ
Advertisement
Next Article