ದತ್ತಪೀಠ ಕೇಸ್ ರೀ ಓಪನ್.. ಅಷ್ಟಕ್ಕೂ 2017ರಲ್ಲಿ ಆಗಿದ್ದೇನು..? ಎ1 ಆರೋಪಿಯ ರಿಯಾಕ್ಷನ್ ಏನು..?
ದತ್ತಪೀಠ ಹೋರಾಟಗಾರರಿಗೆ ನೀಡಿದ ಸಮನ್ಸ್ ವಿಚಾರ ಕೂಡ ಸಾಕಷ್ಟು ಸದ್ದು ಮಾಡುತ್ತಾ ಇದೆ. ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ನೀಡಿರುವ ಸರ್ಕಾರ ಪೆಂಡಿಂಗ್ ಇರುವಂತ ಹಳೆಯ ಕೇಸ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸೂಚನೆ ನೀಡಲಾಗಿದೆ. ಗೃಹ ಇಲಾಖೆಯಿಂದ ಈ ಸೂಚನೆ ಬಂದಿದ್ದು, ಹಳೆ ಕೇಸ್ ಗಳನ್ನು ಕ್ಲಿಯರ್ ಮಾಡಿ ಎಂದು ಸೂಚನೆ ನೀಡಲಾಗಿತ್ತು.
2017ರಲ್ಲಿ ದತ್ತಪೀಠದಲ್ಲಿ ಆಗಿದ್ದೇನು..?
ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ವೇಳೆ ಗೋರಿಗಳು ಧ್ವಂಸವಾಗಿದ್ದವು. ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿದ್ದ ಗೋರಿಗಳು ದ್ವಂಸವಾಗಿದ್ದವು. 2017 ಡಿಸೆಂಬರ್ 3ರಂದು ನಡೆದ ಘಟನೆ ಇದಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ 14 ಜನ ಭಜರಂಗದಳ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಾಗಿತ್ತು. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಕೇಸದ ದಾಖಲು ಮಾಡಲಾಗಿತ್ತು. ಐಪಿಸಿ ಸೆಕ್ಷನ್ 143, 447, 427, 298, 504, 506, 114, 353 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಮೂರು ದಿನಗಳ ಕಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಯಾಗಿತ್ತು.
ಈ ಕೇಸಲ್ಲಿ ಎ1 ಆರೋಪಿಯಾಗಿದ್ದಂತ ತುಡ್ಕೂರು ಮಂಜು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಹಜವಾಗಿ ಹೋರಾಟ ಅಂತ ಬಂದಾಗ ಆಕ್ರೋಶಗೊಂಡ ಮಾಲಾಧಾರಿಗಳು ಅಲ್ಲಿಂದಂತ ಗೋರಿಗಳನ್ನು ಧ್ವಂಸ ಮಾಡಲಾಗಿತ್ತು. ಅದು ಪ್ರಕರಣ ಆಗಿತ್ತು. ಆಗ ಭಜರಂಗ ದಳದ ಜಿಲ್ಲಾ ಸಂಚಾಲಕನಾಗಿದ್ದೆ ನಾನು. ಆ ಕೇಸ್ ನಲ್ಲಿ ಎ1 ಮಾಡಿದ್ದರು. ನಾನು ಜೈಲಿಗೂ ಹೋಗಿ ಬಂದಿದೆ. ಜಾಮೀನು ಕೂಡ ತೆಗೆದುಕೊಂಡಿದ್ದೆ. ಬಿಜೆಪಿ ಸರ್ಕಾರ ಇದ್ದಾಗ ಆ ಕೇಸನ್ನು ಹಿಂಪಡೆದಿದೆ ಅಂತ ನಾವೂ ಭಾವಿಸಿದ್ದೆವು. ಆದರೆ ಈಗ ಸಮನ್ಸ್ ಜಾರಿಯಾಗಿದೆ. ಕೋರ್ಟ್ ಗೆ ಹಾಜರಾಗುತ್ತೀವಿ. ಆದರೆ ಹಳೆಯ ಕೇಸ್ ಗೆ ಈಗ ಮರುಜೀವ ತಂದಿರುವುದು ಆಶ್ಚರ್ಯವಾಗಿದೆ ಎಂದಿದ್ದಾರೆ.