For the best experience, open
https://m.suddione.com
on your mobile browser.
Advertisement

ಶರಣಮೇಳದಲ್ಲಿ ಸಿಎಂ ಸಿದ್ದರಾಮಯ್ಯರಿಗೆ 'ದಾಸೋಹರತ್ನ' ಪ್ರಶಸ್ತಿ ಪ್ರದಾನ

02:27 PM Jan 14, 2024 IST | suddionenews
ಶರಣಮೇಳದಲ್ಲಿ ಸಿಎಂ ಸಿದ್ದರಾಮಯ್ಯರಿಗೆ  ದಾಸೋಹರತ್ನ  ಪ್ರಶಸ್ತಿ ಪ್ರದಾನ
Advertisement

ಸಿಎಂ ಸಿದ್ದರಾಮಯ್ಯ ಅವರು ಯೋಜನೆಗಳನ್ನು ತರುವಾಗ ಬಡವರು, ಮಧ್ಯಮವರ್ಗದವರನ್ನು ನೆನಪಲ್ಲಿಟ್ಟುಕೊಂಡೇ ತರುತ್ತಾರೆ ಎಂಬ ಮಾತಿದೆ. ಅದು ಸತ್ಯ ಕೂಡ ಆಗಿದೆ. ಹಾಗಾಗಿಯೇ ಹಸಿದ ಹೊಟ್ಟೆಗೆ ಅನ್ನ ನೀಡಲು ಇಂದಿರಾ ಕ್ಯಾಂಟಿನ್ ಯೋಜನೆ ತಂದರು, ಅನ್ನಭಾಗ್ಯ ಯೋಜನೆಯಡಿ ಎಷ್ಟೋ ಬಡವರಿಗೆ ಉಚಿತವಾಗಿ ಅಕ್ಕಿ ಸಿಗುವಂತೆ ಮಾಡಿದರು. ಇಂಥ ಮಹತ್ಕಾರ್ಯಗಳನ್ನು ಮಾಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು 'ದಾಸೋಹರತ್ನ' ಪ್ರಶಸ್ತಿ ಸಿಕ್ಕಿದೆ.

Advertisement

ಕೂಡಲಸಂಗಮದಲ್ಲಿ ಇಂದು 37ನೇ ಶರಣ ಮೇಳ ನಡೆದಿದೆ. ಈ ಮೇಳದಲ್ಲಿ ದಾಸೋಹರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪ್ರಶಸ್ತಿ ನೀಡಿ, ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಅವರು, ಕಾರ್ಯಕ್ರಮದಲ್ಲಿ ಮಾತನಾಡಿದರು.

'ದೇವರೇನಾದರೂ ಹಣೆಬರಹ ಬರೆಯುತ್ತಾನಾ..? ನರಕ, ಸ್ವರ್ಗ ಎಂಬುದಿಲ್ಲ. ಆ ಧರ್ಮ.. ಈ ಧರ್ಮ ಅಂತೆಲ್ಲ ಹೇಳುವುದಕ್ಕೆ ಹೋಗಬಾರದು. ಕೆಲವು ರಾಜಕೀಯ ವ್ಯಕ್ತಿಗಳು ದ್ವೇಷ ಮಾಡುತ್ತಿದ್ದಾರೆ, ಅದನ್ನು ಮಾಡಬಾರದು. ಸಮಾಜದಲ್ಲಿ ಇನ್ನೂ ಕೂಡ ಜಾತಿ ಎಂಬುದು ಹೋಗಿಲ್ಲ. ಅದನ್ನು ಹೋಗಲಾಡಿಸಬೇಕು. ಜಾತಿಯನ್ನು ಹೋಗಲಾಡಿಸುವುದು ಬಸವಾದಿ ಶರಣರಿಂದ ಮಾತ್ರ ಸಾಧ್ಯವಾಗಿದೆ. ನಮ್ಮ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ. ಬಸವಾದಿ ಶರಣರಿಂದ ಚಳುವಳಿಗಳು ಮುಂದುವರೆಯದ ಕಾರಣ ಜಾತಿ ವ್ಯವಸ್ಥೆ ಹಾಗೇ ಮುಂದುವರೆದಿದೆ ಎಂದಿದ್ದಾರೆ.

Advertisement

Tags :
Advertisement