ಸೆಪ್ಟೆಂಬರ್ 12ರವರೆಗೆ ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ..!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯವಾಗಿತ್ತು. ಹೀಗಾಗಿ ಬಳ್ಳಾರಿ ಜೈಲಿನಿಂದಾನೇ ದರ್ಶನ್, ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಅವರ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಹದಿನೇಳು ಆರೋಪಿಗಳು ಕೂಡ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ 24ನೇ ಎಸಿಎಂಎಂ ಕೋರ್ಟಗ, ದರ್ಶನದ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 12ರವರೆಗೂ ವಿಸ್ತರಣೆ ಮಾಡಿದೆ.
ಕೋರ್ಟ್ ವಿಚಾರಣೆ ವೇಳೆ ದರ್ಶನ್ ಅವರು ತಮ್ಮ ಪರವಾದ ವಕೀಲರ ಬಗ್ಗೆ ಪರಿಚಯ ಮಾಡಿಕೊಟ್ಟರು. ಸಿ.ವಿ.ನಾಗೇಶ್ ಅವರು ನನ್ನ ವಕೀಲರು ಎಂದು ಹೇಳಿದರು. ಇಂದಿನ ಕೋರ್ಟ್ ವಿಚಾರಣೆಯಲ್ಲಿ ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಗಳನ್ನು ಸೀಲ್ ಕವರಿನಲ್ಲಿ ಪೊಲೀಸರು ನೀಡಿದರು. ಈ ವೇಳೆ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಹಾಜರಿದ್ದರು. ಪ್ರಕರಣದ ಸಾಕ್ಷಿಗಳಿರುವ ವಿಡಿಯೋ, ಆಡಿಯೋ ಡಿವೈಸಸ್, 60 ಒರಿಜಿನಲ್ ಡಿಜಿಟಲ್ ಸಾಕ್ಷಿಗಳ ಪ್ರತಿಯೂ ಸಲ್ಲಿಕೆಯಾಗಿದೆ.
ಈಗ ಚಾರ್ಜ್ ಶೀಟ್ ಸಲ್ಲಿಕೆಯ ಪ್ರತಿ ನೀಡಲಾಗುತ್ತದೆ. ಆದರೆ ಈ ಡಿಜಿಟಲ್ ಕಾಪಿ ಮಾಡಬೇಕಿರುವುದರಿಂದ ಕೆಲ ದಿನಗಳ ನಂತರ ಕಾಪಿ ನೀಡಲಾಗುತ್ತದೆ ಎಂದು ತಿಳಿಸಿದರು. ಜಡ್ಜ್ ಈ ಬಗ್ಗೆ ಪ್ರಸನ್ನ ಅವರನ್ನು ಪ್ರಶ್ನಿಸಿದರು. ಯಾವಾಗ ಕೊಡುತ್ತೀರಿ ಎಂದು ಕೇಳಿದಾಗ, ಕಾಪಿ ಮಾಡುವುದಕ್ಕೆ ಒಂದು ವಾರವಾಗುತ್ತದೆ. ಮೊದಲು ಪೇಪರ್ ಚಾರ್ಜ್ ಶೀಟ್ ನೀಡಿ. ಆಮೇಲೆ ಡಿಜಿಟಲ್ ದಾಖಲೆ ನೀಡಲಿ ಎಂದು ಸೂಚಿಸಿದರು. ಇನ್ನು ಆರೋಪಿ ಪರ ವಕೀಲರು ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ವರದಿಯನ್ನು ಇಂದೇ ನೀಡುವಂತೆ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಜಡ್ಜ್, ಆರೋಪಿಗಳಿಗೆ ಪರ್ಸನಲ್ ಆಗಿ ನೀಡಲು ಹೇಳ್ತೀನಿ ಎಂದರು.