ದರ್ಶನ್ ಬಟ್ಟೆಯನ್ನು FSL ಗೆ ಕಳುಹಿಸಿದ್ದ ಪೊಲೀಸರು : ವರದಿಯಲ್ಲಿ ದೃಢವಾಯ್ತು ಸತ್ಯಸಂಗತಿ..!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದೆ. ದರ್ಶನ್ ಜೈಲು ಪಾಲಾಗಿ ಹತ್ತಿರತ್ತಿರ ಎರಡು ತಿಂಗಳ ಮೇಲಾಗುತ್ತಿದೆ. ಈಗಲೇ ಹೊರಗೆ ಬರುವ ಸೂಚನೆಯೇ ಕಾಣಿಸುತ್ತಿಲ್ಲ. ಯಾಕಂದ್ರೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ತನಕ ಜಾಮೀನು ಸಿಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಹೀಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿ ಎಂದೇ ದರ್ಶನ್ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಪೊಲೀಸರು ಮಾತ್ರ ಎಲ್ಲಾ ಆಯಾದಲ್ಲೂ ಹುಡುಕಾಡಿ, ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ.
ಪಟ್ಟಣಗೆರೆ ಶೆಡ್ ನಲ್ಲೊಯೇ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿತ್ತು. ರಕ್ತ ಬರುವಂತೆ ಹೊಡೆದಿದ್ದರು. ಅಂದು ದರ್ಶನ್ ಅವರು ಹಾಕಿದ್ದ ಪ್ಯಾಂಟ್ ಮತ್ತು ಶರ್ಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅದನ್ನು ಎಫ್ಎಸ್ಎಲ್ ವರದಿಗೆಂದು ಕಳುಹಿಸಿದ್ದರು. ಇದೀಗ ಅದರ ವರದಿ ಬಂದಿದ್ದು, ದರ್ಶನ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ.
ಎಫ್ಎಸ್ಎಲ್ ವರದಿಯಲ್ಲಿ ದರ್ಶನ್ ಹಾಕಿದ್ದ ಶರ್ಟ್ ಮತ್ತು ಪ್ಯಾಂಟ್ ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಆ ರಕ್ತದ ಕಲೆಯ ಮಾದರಿ ರೇಣುಕಾಸ್ವಾಮಿ ರಕ್ತವನ್ನು ಹೋಲುತ್ತಿದೆ. ಹೀಗಾಗಿ ಕೊಲೆಯ ವಿಚಾರದಲ್ಲಿ ದರ್ಶನ್ ಅವರು ಭಾಗಿಯಾಗಿದ್ದಾರೆ ಎಂಬುದನ್ನು ಈ ರಕ್ತದ ಕಲೆಗಳು ಸೂಚನೆ ನೀಡುತ್ತಿವೆ. ಪೊಲೀಸರು ಸಲ್ಲಿಕೆ ಮಾಡಬೇಕಾದ ದೋಷಾರೋಪ ಪಟ್ಟಿಯಲ್ಲಿ ಬಟ್ಟೆಯಲ್ಲಿ ರಕ್ತದ ಮಾದರಿ ಪತ್ತೆಯಾಗಿದ್ದನ್ನು ಉಲ್ಲೇಖ ಮಾಡಲಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಇನ್ನು ಸಮಯ ಇರುವ ಕಾರಣ, ಸರಿಯಾಗಿ ತನಿಖೆ ನಡೆಸಿ, ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ.