For the best experience, open
https://m.suddione.com
on your mobile browser.
Advertisement

ದರ್ಶನ್ ಜಾಮೀನು ಅರ್ಜಿ ಸೆ.30ಕ್ಕೆ ಮುಂದೂಡಿಕೆ..!

05:14 PM Sep 27, 2024 IST | suddionenews
ದರ್ಶನ್ ಜಾಮೀನು ಅರ್ಜಿ ಸೆ 30ಕ್ಕೆ ಮುಂದೂಡಿಕೆ
Advertisement

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಇಂದು ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಕೋರ್ಟ್ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಸೆಪ್ಟೆಂಬರ್ 30ಕ್ಕೆ ಅಂದ್ರೆ ಮುಂದಿನ ಸೋಮವಾರಕ್ಕೆ ಅರ್ಜಿ ವಿಚಾರಣೆ ನಡೆಯಲಿದೆ.

Advertisement
Advertisement

ಇಂದು ವಿಚಾರಣೆಯನ್ನು ನಡೆಸಿದ ಕೋರ್ಟ್, ಸೆಪ್ಟೆಂಬರ್30ಕ್ಕೆ ಮುಂದೂಡಿಕೆ ಮಾಡಿದೆ‌. ದರ್ಶನ್ ಪರವಾದ ವಕೀಲರು ವಾದ ಮಾಡುವುದಕ್ಕೆ ಕಾಲಾವಕಾಶ ಕೋರಿದ ಹಿನ್ನೆಲೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ. ಸರ್ಕಾರಿ ವಕೀಲರಾದ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪಣೆ ಸಲ್ಲಿಸುವುದಕ್ಕೆ ತಡ ಮಾಡುತ್ತಿದ್ದಾರೆ. ಈ ವಿಚಾರವನ್ನು ದರ್ಶನ್ ಪರ ವಕೀಲರು ಕೋರ್ಟ್ ನಲ್ಲಿ ವಾದ ಮಾಡಿದ್ದರು. ಆದರೆ ಈಗ ದರ್ಶನ್ ಪರ ವಕೀಲರೇ ಸಮಯ ತೆಗೆದುಕೊಂಡಿದ್ದಾರೆ. ಅದಕ್ಕೆ ಕಾರಣ ದರ್ಶನ್ ಪರ ವಾದ ಮಂಡಿಸಲು ಹಿರಿಯ ವಕೀಲರು ಬರಬೇಕಾಗಿತ್ತು. ಹೀಗಾಗಿ ವಾದ ಮಂಡಿಸಲು ಸಮಯ ಕಾಲಾವಕಾಶ ಪಡೆದಿದ್ದಾರೆ‌.

ದರ್ಶನ್ ಪರ ವಕೀಲರಾದ ನಾಗೇಶ್ ಅವರು, ವಾದ ಮಂಡಿಸಲು ಬರಬೇಕಿತ್ತು. ಆದರೆ ಅವರು ಬಂದಿಲ್ಲದ ಕಾರಣಕ್ಕೆ ಕಾಲಾವಕಾಶ ಕೇಳಿದರು. ಇದೆ ವೇಳೆ ಸರ್ಕಾರಿ ವಕೀಲರಾದ ಪ್ರಸನ್ನ ಅವರು ಪ್ರತಿವಾದ ಮಂಡಿಸಿದರು. ಇಷ್ಟು ದಿನ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ತಕರಾರು ತೆಗೆದಿದ್ದರು. ಆದರೆ ಈಗ ಆಕ್ಷೇಪಣೆಯನ್ನು ಸಲ್ಲಿಸಿದ್ದೇವೆ. ಆದರೂ ಕಾಲವಕಾಶ ಕೇಳುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದರು. ಆದರೆ ದರ್ಶನ್ ಪರ ವಕೀಲರು ವಾದ ಮಂಡಿಸಲು ಸಮಯ ಕೇಳಿದ್ದರಿಂದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ. ಸೆಪ್ಟೆಂಬರ್30ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

Advertisement
Advertisement

Advertisement
Tags :
Advertisement