ಚಾರ್ಜ್ ಶೀಟ್ ಮಾಹಿತಿ ಪ್ರಸಾರಕ್ಕೆ ನಿರ್ಬಂಧಕೋರಿ ಕೋರ್ಟ್ ಮೊರೆ ಹೋದ ದರ್ಶನ್..!
ಬೆಂಗಳೂರು: ನಟ ದರ್ಶನ್ ಅಂಡ್ ಗ್ಯಾಂಗ್ ಮಾಡಿದ ಕ್ರೌರ್ಯ ಕಡಿಮೆ ಏನು ಅಲ್ಲ. ರೇಣುಕಾಸ್ವಾಮಿಯನ್ನ ಕರೆತಂದು ಕ್ರೂರವಾಗಿ ಕೊಂದಿದ್ದಾರೆ. ಅದರ ಇಂಚಿಂಚು ಮಾಹಿತಿಯನ್ನು ಪೊಲೀಸರು ತಮ್ಮ ಚಾರ್ಜ್ ಶೀಟ್ ಮೂಲಕ ಬಿಚ್ಚಿಟ್ಟಿದ್ದಾರೆ. ಸಾವಿರಾರು ಪುಟಗಳಷ್ಟು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರ ಮಾಹಿತಿ ಕೂಡ ಮಾಧ್ಯಮದವರಿಗೆ ಸಿಗುತ್ತಾ ಇದೆ. ಇದೀಗ ಇದೇ ವಿಚಾರಕ್ಕೆ ನಟ ದರ್ಶನ್ ಕೋರ್ಟ್ ಮೊರೆ ಹೋಗಿದ್ದಾರೆ.
ಮಾಧ್ಯಮದಲ್ಲಿ ಚಾರ್ಜ್ ಶೀಟ್ ಮಾಹಿತಿ ಇಂಚಿಂಚು ಪ್ರಸಾರವಾಗುತ್ತಿದೆ. ಇದರ ನಡುವೆ ದರ್ಶನ್ ಅವರ ಕ್ರೌರ್ಯವನ್ನು ತೋರಿಸಲಾಗುತ್ತಿದೆ. ದರ್ಶನ್ ಸೇರಿದಂತೆ 17 ಮಂದಿ ತೋರಿದ ಕ್ರೌರ್ಯವೂ ಚಾರ್ಜ್ ಶೀಟ್ ನಲ್ಲಿದೆ. ಅದನ್ನು ಯಥಾವತ್ತಾಗಿ ಮಾಧ್ಯಮಗಳು ಪ್ರಸಾರ ಮಾಡುತ್ತಿರುವುದಕ್ಕೆ ನಿರ್ಬಂಧ ಹೇರುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ ಈ ಸಂಬಂಧ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ನಲ್ಲಿರುವ ಮಾಹಿತಿಯನ್ನು ಬಹಿರಂಗ ಒಡಿಸದೆ, ಗೌಪ್ಯವಾಗಿಡುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ದರ್ಶನ್ ಅವರು ಇರುವ ಸೆಲ್ ಗೆ ಟಿವಿಯನ್ನು ನೀಡಲಾಗಿತ್ತು. ಟಿವಿಯಲ್ಲಿ ರೇಣುಕಾಸ್ವಾಮಿ ಕೊಲೆ ಅಪ್ಡೇಟ್ ಅನ್ನು ಗಮನಿಸಿದ್ದರು. ಇದಾದ ಮೇಲೆಯೇ ದರ್ಶನ್, ಚಾರ್ಜ್ ಶೀಟ್ ಮಾಹಿತಿಯ ಗೌಪ್ಯತೆ ಕಾಪಾಡಲು ಮನವಿ ಸಲ್ಲಿಸುವ ನಿರ್ಧಾರಕ್ಕೆ ಬಂದರು. ದರ್ಶನ್ ಅವರ ನ್ಯಾಯಾಂಗ ಬಂಧನವೂ ಇಂದಿಗೆ ಅಂತ್ಯವಾಗಿದೆ. ಕೋರ್ಟ್ ಮುಂದೆ ಇಂದು ಹಾಜರಾಗುವ ದರ್ಶನ್ ಅವರಿಗೆ ನ್ಯಾಯಾಧೀಶರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೊ ಎಂಬ ಆತಂಕವೂ ಇದೆ. ಇಲ್ಲಿ ಜಾಮೀನು ಸಿಗದೆ ಹೋದರು ಸುಪ್ರೀಂ ಕೋರ್ಟ್ ಗೆ ಹೋಗುವ ಸಾಧ್ಯತೆ ಇದೆ.