For the best experience, open
https://m.suddione.com
on your mobile browser.
Advertisement

ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ : ಉಳಿದವರು ಯಾವ್ಯಾವ ಕಡೆಗೆ ಶಿಫ್ಟ್ ಆದ್ರೂ..?

07:36 PM Aug 27, 2024 IST | suddionenews
ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್   ಉಳಿದವರು ಯಾವ್ಯಾವ ಕಡೆಗೆ ಶಿಫ್ಟ್ ಆದ್ರೂ
Advertisement

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್ ಅಂಡ್ ಗ್ಯಾಂಗ್ ನ ಒಂದು ಫೋಟೋ ಇತ್ತಿಚೆಗೆ ವೈರಲ್ ಆಗಿತ್ತು. ದರ್ಶನ್ ರೌಡಿಶೀಟರ್ ಗಳ ಜೊತೆಗೆ ಕೂತು ಸಿಗರೇಟು ಸೇದುತ್ತಿದ್ದಂತ ಫೋಟೋ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಜೈಲಿನ ಅವಸ್ಥೆ ಬಗ್ಗೆ ಚರ್ಚೆಯಾಗುವುದಕ್ಕೆ ಶುರುವಾಗಿತ್ತು. ಹಣ ಇದ್ದವರಿಗೆ ಎಲ್ಲಾ ಸೌಲಭ್ಯಗಳು ಸುಲಭ ಎಂಬುದು ಮತ್ತೆ ಪ್ರೂವ್ ಆಗಿತ್ತು. ಇದೀಗ ಈ ಬಗ್ಗೆ ಸಾಕಷ್ಟು ಚರ್ಚೆಗಳು ಬೆಳಕಿಗೆ ಬಂದ ಬೆನ್ನಲ್ಲೇ ದರ್ಶನ್ ಅವರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.

Advertisement
Advertisement

ಸಿಎಂ ಸಿದ್ದರಾಮಯ್ಯ ಅವರು ಕೂಡ ಬೆಳಗ್ಗೆಯೇ ಈ ಬಗ್ಗೆ ಮಾಹಿತಿ ನೀಡಿದ್ದರು. ದರ್ಶನ್ ಅವರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಿ ಎಂದೇ ಹೇಳಿದ್ದರು. ಇದೀಗ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇನ್ನುಳಿದ ಆರೋಪಿಗಳನ್ನು ಒಂದೊಂದು ಜೈಲಿಗೆ ಕಳುಹಿಸಿದ್ದಾರೆ.

ಅದರಲ್ಲಿ ಪವನ್, ರಾಘವೇಂದ್ರ, ನಂದೀಶ್ ಅವರನ್ನು ಮೈಸೂರು ಜೈಲಿಗೆ. ಜಗದೀಶ್ ಶಿವಮೊಗ್ಗ ಜೈಲು, ಧನರಾಜು ಧಾರವಾಡ ಜೈಲು, ವಿನಯ್ ವಿಜಯಪುರ ಜೈಲು, ನಾಗರಾಜು ಕಲಬುರಗಿ ಜೈಲು, ಲಕ್ಷ್ಮಣ ಶಿವಮೊಗ್ಗ ಜೈಲು, ಪ್ರದೂಶ್ ಬೆಳಗಾವಿ ಜೈಲು ಸೇರಿದ್ದಾರೆ. ಇನ್ನು ಪವಿತ್ರಾ ಗೌಡ ಜೊತೆಗೆ ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರದಲ್ಲಿಯೇ ಇದ್ದಾರೆ. ರವಿ, ಕಾರ್ತಿಕ್, ನಿಖಿಲ್, ಕೇಶವಮೂರ್ತಿ ಈ ಮೊದಲೇ ತುಮಕೂರು ಜೈಲಿಗೆ ಶಿಫ್ಟ್ ಆಗಿದ್ದಾರೆ. ದರ್ಶನ್ ಅವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡುತ್ತಾರೆ ಎನ್ನಲಾಗಿತ್ತು. ಆದರೀಗ ಬಳ್ಳಾರಿ ಜೈಲಿಗೆ ಕಳುಹಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಮಾಡಿದ್ದ ಗ್ಯಾಂಗ್ ಈಗ ಧಿಕ್ಕಪಾಲಾಗಿದ್ದಾರೆ.

Advertisement
Advertisement

Advertisement
Tags :
Advertisement