For the best experience, open
https://m.suddione.com
on your mobile browser.
Advertisement

ದರ್ಶನ್, ರಾಕ್ಲೈನ್, ಅಭಿಷೇಕ್, ಚಿಕ್ಕಣ್ಣ, ಪ್ರಜ್ವಲ್ ದೇವರಾಜ್ ಗೆ ನೊಟೀಸ್ ಸಾಧ್ಯತೆ: ಕಾರಣವೇನು ಗೊತ್ತ..?

01:17 PM Jan 08, 2024 IST | suddionenews
ದರ್ಶನ್  ರಾಕ್ಲೈನ್  ಅಭಿಷೇಕ್  ಚಿಕ್ಕಣ್ಣ  ಪ್ರಜ್ವಲ್ ದೇವರಾಜ್ ಗೆ ನೊಟೀಸ್ ಸಾಧ್ಯತೆ  ಕಾರಣವೇನು ಗೊತ್ತ
Advertisement

Advertisement
Advertisement

Advertisement

ಬೆಂಗಳೂರು: ದರ್ಶನ್, ರಾಕ್ಲೈನ್ ವೆಂಕಟೇಶ್, ಚಿಕ್ಕಣ್ಣ, ಪ್ರಜ್ವಲ್ ದೇವರಾಜು ಅವರಿಗೆ ಸುಬ್ರಮಣ್ಯನಗರ ಪೊಲೀಸರು ನೋಟೀಸ್ ಜಾರಿ ಮಾಡುವುದಕ್ಕೆ ಮುಂದಾಗಿದ್ದಾರೆ. ಅದಕ್ಕೆ ಕಾರಣ ಜೆಟ್ ಲ್ಯಾಗ್ ನಲ್ಲಿ ಮುಂಜಾನೆವರೆಗೂ ಪಾರ್ಟಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನೋಟೀಸ್ ಜಾರಿ ಮಾಡುವ ಸಾಧ್ಯತೆ ಇದೆ.

Advertisement
Advertisement

ಇದಲ್ಲದೆ ಐದು ಜನ ಪೊಲೀಸರಿಗೂ ನೋಟೀಸ್ ನೀಡಲು ನಿರ್ಧರಿಸಲಾಗಿದೆ. ಮಧ್ಯರಾತ್ರಿ 3.15ರ ತನಕ ಜೆಟ್ ಲ್ಯಾಗ್ ನಲ್ಲಿ ಪಾರ್ಟಿ ಮಾಡಲಾಗಿದೆ. ಈ ಪಾರ್ಟಿಯಲ್ಲಿ ಸೆಲೆಬ್ರೆಟಿಗಳು ಭಾಗಿಯಾಗಿದ್ದರು ಎನ್ನಲಾಗಿದ್ದು, ಅದರಲ್ಲಿ ಟಾಪ್ ಟೆನ್ ಸೆಲೆಬ್ರೆಟಿಗಳಿಗೆ ನೋಟೀಸ್ ನೀಡುವ ನಿರ್ಧಾರ ಮಾಡಲಾಗಿದೆ. ಸೆಲೆಬ್ರೆಟಿಗಳಿಗೆ ನೋಟೀಸ್ ನೀಡಿ ಹೇಳಿಕೆ ಪಡೆಯಲಾಗುವುದು ಎಂದು, ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾಹಿತಿ ನೀಡಿದ್ದಾರೆ.

ಮಧ್ಯರಾತ್ರಿಯಾಗಿದ್ದರು ಪೊಲೀಸರು ಯಾಕೆ ಅಲ್ಲಿ ಹೋಗಿ ಪರಿಶೀಲನೆ ಮಾಡಿಲ್ಲ ಎಂಬ ಕಾರಣಕ್ಕೆ ಐದು ಜನ ಪೊಲೀಸರಿಗೆ ನೋಟೀಸ್ ನೀಡಲಾಗುತ್ತದೆ ಎಂದಿದ್ದಾರೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಠಾಣಾಧಿಕಾರಿ, ಒಬ್ಬ ಸಬ್ ಇನ್ಸ್ಪೆಕ್ಟರ್ ಹಾಗೂ ನಾಲ್ವರು ಕಾನ್ಸ್ ಟೇಬಲ್ ಗಳಿಗೆ ನೋಟೀಸ್ ಕಳುಹಿಸಲಾಗಿದೆ.

Advertisement
Tags :
Advertisement