For the best experience, open
https://m.suddione.com
on your mobile browser.
Advertisement

ದರ್ಶನ್ ರಾಜಾತಿಥ್ಯ ಫೋಟೋ ರಿವಿಲ್ ಮಾಡಿದ್ದೇ ರಾಜ್ಯ ಸರ್ಕಾರ : ಜೋಶಿ ಹೇಳಿಕೆಗೆ ಡಿಕೆಶಿ ಹೇಳಿದ್ದೇನು..?

08:39 PM Sep 07, 2024 IST | suddionenews
ದರ್ಶನ್ ರಾಜಾತಿಥ್ಯ ಫೋಟೋ ರಿವಿಲ್ ಮಾಡಿದ್ದೇ ರಾಜ್ಯ ಸರ್ಕಾರ   ಜೋಶಿ ಹೇಳಿಕೆಗೆ ಡಿಕೆಶಿ ಹೇಳಿದ್ದೇನು
Advertisement

Advertisement
Advertisement

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಗಳ ಜೊತೆಗೆ ಕೂತು ಟೀ ಕುಡೊಯುತ್ತಾ, ಸಿಗರೇಟು ಸೇದುತ್ತಾ, ನಗುಮುಖದಲ್ಲಿದ್ದ ದರ್ಶನ್ ಅವರ ಫೋಟೋ ಒಂದು ವೈರಲ್ ಆಗಿತ್ತು. ಆ ಬಳಿಕವೇ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಹಾಕಿದ್ದು. ಇದೀಗ ಆ ಫೋಟೋವನ್ನು ರಿವಿಲ್ ಮಾಡಿದ್ದೆ ಕಾಂಗ್ರೆಸ್ ಸರ್ಕಾರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಚ್ಚರಿಯ ಹೇಳಿಕೆ ನೀಡಿದ್ದರು. ಇದೀಗ ಪ್ರಹ್ಲಾದ್ ಜೋಶಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ದರ್ಶನ್, ಮೂಡಾ ವಿಚಾರಗಳನ್ನು ಬಿಡಿ. ಈಗ ಮಹಾದಾಯಿ ವಿಚಾರದಲ್ಲಿ ಏನಾಗಿದೆ. ಮಹಾದಾಯಿ ಯೋಜನೆಗೆ ಅನುಮತಿ ಕೊಡಿಸ್ರಪ್ಪ ನೋಡೋಣಾ ಎಂದು ಬಿಜೆಪಿ ನಾಯಕರಿಗೆ ಸವಾಲು ಎಸೆದಿದ್ದಾರೆ.

Advertisement
Advertisement

ಗಣೇಶನ ಚತುರ್ಥಿ ದಿನವೇ ವಿಘ್ನ ನಿವಾರಣೆಯಾಗಲಿ. ಮಹಾದಾಯಿ ಯೋಜನೆ ಜಾರಿ ಮಾಡಲು ದುಡ್ಡು ಕೊಡಿಸ್ರಪ್ಪ. ಇಲ್ಲಿಂದಲೇ‌ ದೀರ್ಘದಂಡ ನಮಸ್ಕಾರ ಹಾಕುತ್ತೇನೆ. ಮೂಡಾ ಹಗರಣದಲ್ಲಿ ಮುಚ್ಚಿಡಲು ಏನಿದೆ..? ಜೋಶಿಯವರು ಇಂತಹ ಹೇಳಿಕೆ ನೀಡುವ ಬದಲು ರಾಜ್ಯಕ್ಕೆ ಕೇಂದ್ರದಿಂದ ಏನು ಆಗಬೇಕು ಎಂಬುದನ್ನು ಯೋಚಿಸಲಿ ಎಂದಿದ್ದಾರೆ.

ಇದೇ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಪ್ರತಿಕ್ರಿಯೆ ನೀಡಿದ್ದು, ವಿಷಯ ಡೈವರ್ಟ್ ಮಾಡೋದಾಗಿದ್ರೆ ನಿಮ್ಮ ನಾಯಕರ ಸಿಡಿನೆ ಇತ್ತಲ್ಲ. ಜೋಶಿ ಅವರು ರಾಜ್ಯದ ವಿಚಾರವಾಗಿ ಮಾತನಾಡಿದ್ದನ್ನು ನಾನು ಎಂದು ನೋಡಿಲ್ಲ. ಮಹಾದಾಯಿ ವಿಚಾರದಲ್ಲಿ ನಮಗೆ ಇನ್ನು ಅನುಮತಿಯೇ ಸಿಕ್ಕಿಲ್ಲ. ಆ ಬಗ್ಗೆ ಜೋಶಿ ಯಾವಾತ್ತಾದರೂ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

Advertisement
Tags :
Advertisement