Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದರ್ಶನ್ ಕಸ್ಟಡಿ ಅಂತ್ಯ : ಜೈಲಾ..? ಬೇಲಾ..? ಲಾಯರ್ ಹೇಳಿದ್ದೇನು..?

02:08 PM Jun 20, 2024 IST | suddionenews
Advertisement

 

Advertisement

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಕಳೆದ ಕೆಲ ದಿನಗಳಿಂದ ಜೈಲಿನಲ್ಲಿದ್ದುಕೊಂಡು ಮುದ್ದೆ ಮುರಿಯುತ್ತಿದ್ದಾರೆ. ಅವರ ಗ್ಯಾಂಗ್ ಕೂಡ ಅಲ್ಲಿಯೇ ಇದೆ. ಅಶ್ಲೀಲ ಮೆಸೇಜ್ ಕಳುಹಿಸಿದ್ದವನನ್ನ ಚಿತ್ರ ವಿಚಿತ್ರವಾಗಿ ಕೊಂದಿದ್ದಾರೆ. ಈ ಕೇಸನ್ನು ರಾಜ್ಯ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸದ್ಯ ಒಬ್ಬೊಬ್ಬರನ್ನೇ ಬಂಧಿಸಿ, ತನಿಖೆ ನಡೆಸುತ್ತಿದೆ. ದರ್ಶನ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಆದರೆ ಪೊಲೀಸರು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

 

Advertisement

ಈ ಬಗ್ಗೆ ದರ್ಶನ್ ವಕೀಲರಾದ ಅನಿಲ್ ಬಾಬು ಮಾತನಾಡಿ, ಕೋರ್ಟ್ ನಿರ್ದೇಶನದ ಪ್ರಕಾರ ಇಂದು ಸಂಜೆ 5 ಗಂಟೆಯ ಒಳಗೆ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಬೇಕು. ನಮ್ಮ ಪ್ರಕಾರ ಇವತ್ತು ಮಧ್ಯಾಹ್ಬ ಹಾಜರು ಮಾಡಿಯೇ ಮಾಡುತ್ತಾರೆ. ಅವರು ಇನ್ನು ಕಸ್ಟಡಿಗೆ ಕೇಳುತ್ತಾರೋ..? ಇಲ್ಲವೋ ಅನ್ನುವುದರ ಬಗ್ಗೆ ನನಗೂ ಗೊತ್ತಿಲ್ಲ. ಮಧ್ಯಾಹ್ನ ಪೊಲೀಸ್ ಅಧಿಕಾರಿಗಳ ನಿರ್ಧಾರವನ್ನು ನೋಡಿ ನಾವೂ ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ. ಬಹುತೇಕ ತನಿಖೆ ಮುಗಿದಿರಬಹುದು. ಈಗ ಬೇಲ್ ಹಾಕಬೇಕೋ..? ಬೇಡವೋ ಅನ್ನೋದನ್ನ ನಿರ್ಧಾರ ಮಾಡಿಲ್ಲ.

ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಚರ್ಚೆ ಮಾಡಿ ಬೇಲ್ ಗೆ ಅರ್ಜಿ ಹಾಕುತ್ತೇವೆ. ಇದಕ್ಕೆ ಒಂದು ವಾರಗಳ ಸಮಯ ಬೇಕಾಗುತ್ತದೆ. ದರ್ಶನ್ ಜೊತೆಗೆ ಮಾತುಕತೆ ಮಾಡಿಕೊಂಡು ಬಂದಿದ್ದೇನೆ. ಅವರ ಆರೋಗ್ಯ ಚೆನ್ನಾಗಿದೆ. ಡಿಎನ್‌ಎ ಟೆಸ್ಟ್ ಗೆ ಕೋರ್ಟ್ ಅನುಮತಿ ಬೇಕು. ಸ್ಯಾಂಪಲ್ ಪಡೆಯಲು ಬೇಕಾಗುತ್ತದೆ. ಆದರೆ ಪೊಲೀಸರು ತಗೊಂಡಿದ್ದಾರಾ ಇಲ್ವಾ ಎಂಬುದು ಗೊತ್ತಿಲ್ಲ. ಅದೆಲ್ಲಾ ಚಾರ್ಜ್ ಶೀಟ್ ನಲ್ಲಿ ಇರುತ್ತದೆ ಎಂದಿದ್ದಾರೆ.

Advertisement
Tags :
bailbengaluruchitradurgacustodydarshanEndJaillawyersuddionesuddione newsಅಂತ್ಯಕಸ್ಟಡಿಚಿತ್ರದುರ್ಗಜೈಲಾದರ್ಶನ್ಬೆಂಗಳೂರುಬೇಲಾಲಾಯರ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article