For the best experience, open
https://m.suddione.com
on your mobile browser.
Advertisement

ನನ್ನ ಮದುವೆಗೆ ದರ್ಶನ್ ಬರ್ತಾರೆ : ಜೈಲಿಗೆ ಹೋಗಿ ಆಹ್ವಾನ ಪತ್ರಿಕೆ ಕೊಟ್ಟ ತರುಣ್ ಸುಧೀರ್

09:12 PM Jul 19, 2024 IST | suddionenews
ನನ್ನ ಮದುವೆಗೆ ದರ್ಶನ್ ಬರ್ತಾರೆ   ಜೈಲಿಗೆ ಹೋಗಿ ಆಹ್ವಾನ ಪತ್ರಿಕೆ ಕೊಟ್ಟ ತರುಣ್ ಸುಧೀರ್
Advertisement

Advertisement
Advertisement

ಬೆಂಗಳೂರು: ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಮದುವೆಯಾಗುತ್ತಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ನಲ್ಲೆಲ್ಲಾ ಇದರದ್ದೇ‌ ಸುದ್ದಿ. ನಟಿ ಸೋನಲ್ ಜತೆಗೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಅವರ ತಾಯಿ ಮಾಲತಿ ಸುಧೀಂದ್ರ ಅವರು ಸೊಸೆಯ ಬಗ್ಗೆ ಎಲ್ಲಾ ಚಾನೆಲ್ ಗಳಲ್ಲೂ ಮಾತನಾಡಿದ್ದಾರೆ. ತರುಣ್ ಸುಧೀರ್ ಕೂಡ ಹೌದು ಎಂದು ಒಪ್ಪಿಕೊಂಡಿದ್ದಾರೆ. ಇದೀಗ ಮದುವೆ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿವೆ.

Advertisement
Advertisement

ಲಗ್ನಪತ್ರಿಕೆ ಹಂಚುವುದಕ್ಕೆ ಶುರು ಮಾಡಿರುವ ತರುಣ್ ಸುಧೀರ್,‌ಮೊದಲ ಪತ್ರಿಕೆಯನ್ನು ದರ್ಶನ್ ಅವರುಗೆ ನೀಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಪತ್ರಿಕೆ ಕೊಟ್ಟು ಬಂದಿದ್ದಾರೆ. ಈ ವೇಳೆ ಮಾತನಾಡಿದ ತರುಣ್ ಸುಧೀರ್, ನಟ ದರ್ಶನ್ ಅವರುಗೆ ಹುಷಾರು ಇರಲಿಲ್ಲ. ಈಗ ಚೆನ್ನಾಗಿದ್ದಾರೆ. ಈಗಿನ ವಾತಾವರಣದಿಂದ ಜ್ವರ ಬಂದಿತ್ತು. ಯಾವಾಗಲೂ ನನ್ನನ್ನು ನೋಡಿ ಹೇಗೆ ರಿಯಾಕ್ಟ್ ಮಾಡುತ್ತಿದ್ದರೋ ಅದೇ ರೀತಿ ಇವತ್ತು ರಿಯಾಕ್ಟ್ ಮಾಡಿದ್ದಾರೆ‌. ಅವರಿಗಿಂತ ಹೆಚ್ಚು ವೀಕ್ ಆಗಿಬಿಟ್ಟಿದ್ದೀವಿ ನಾವೂ. ಹುಷಾರಿಲ್ಲದರ ಬಗ್ಗೆ ಚರ್ಚೆ ಮಾಡಿದಾಗ, ಏನಿಲ್ಲ ಮಗನೇ ಆರಾಮವಾಗಿ ಇದ್ದೀನಿ ಅಂದಿದ್ದಾರೆ. ನನ್ನ ಮದುವೆ ಬಗ್ಗೆ ದರ್ಶನ್ ಅವರಿಗೆ ಮೊದಲೇ ಗೊತ್ತಿತ್ತು. ದರ್ಶನ್ ಅವರು ಇಲ್ಲದೆ ಮದುವೆ ಆಗುವ ಕೊರಗು ಇತ್ತು.

ನಿಗದಿತ ದಿನಾಂಕದಂದೇ ಮದುವೆ ಆಗುವುದಕ್ಕೆ ಹೇಳಿದರು. ಅಷ್ಟರೊಳಗೆ ನಾನು ಬರ್ತೀನಿ ಎಂದಿದ್ದಾರೆ. ಅವರು ಏನು ತಪ್ಪು ಮಾಡಿಲ್ಲ ಎಂಬ ನಂಬಿಕೆಯಲ್ಲಿ ನಾವೆಲ್ಲ ಇದ್ದೇವೆ. ಅದು ಹಾಗೇ ಆಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ದರ್ಶನ್ ಅವರು ನನ್ನ ಮದುವೆ ಅಷ್ಟರಲ್ಲಿ ರಿಲೀಸ್ ಆಗ್ತಾರೆ ಎಂದಿದ್ದಾರೆ.

Advertisement
Tags :
Advertisement