ಇಂದಿನಿಂದ ಹಾಸನಾಂಬೆಯ ದರ್ಶನ ಭಾಗ್ಯ : ಕ್ಯೂ ನಿಂತ ಭಕ್ತರು
ಹಾಸನ: ವರ್ಷಕ್ಕೆ ಒಮ್ಮೆ ಬಾಗಿಲು ತೆಗೆಯುವ ದೇವಿ ಹಾಸನಾಂಬೆ. ಇದೀಗ ಮತ್ತೆ ಆ ದಿನ ಬಂದಿದೆ. ಹಾಸನಾಂಬೆಯ ಬಾಗಿಲು ತೆಗೆಯಲಾಗಿದೆ. ನಿನ್ನೆಯೇ ಹಾಸನಾಂಬೆಯ ಬಾಗಿಲು ತೆಗೆದಿದ್ದು, ಇಂದಿನಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ರಾತ್ರಿಯಿಂದಾನೇ ಭಕ್ತರು ದೇವಸ್ಥಾನದ ಬಳಿ ಕ್ಯೂ ನಿಂತಿದ್ದಾರೆ. ತಾಯಿಯ ದರ್ಶನ ಪಡೆಯಲು ಉತ್ಸುಕರಾಗಿದ್ದಾರೆ.
ಮೈಸೂರು ಸಂಸ್ಥಾನದ ಪ್ರಮೋದಾ ದೇವಿ ಅವರು ಕೂಡ ಇಂದು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಬೆಳಗ್ಗೆ 4 ಗಂಟೆಗೆ ದರ್ಶನ ಪಡೆದಿದ್ದಾರೆ. ಹಾಸನಾಂಬೆ ತಾಯಿಗೆ ಪ್ರಮೋದಾ ದೇವಿ ಅವರು ವಿಶೇಷ ಪೂಜೆ ಸಲ್ಲಿಸಿದರು. ತಾಯಿ ದರ್ಶನ ಪಡೆದು ಪುನೀತರಾದರು. ಪ್ರಮೋದಾ ದೇವಿ ಅವರನ್ನು ಕಂಡು ಭಕ್ತರು ಖುಷಿ ಪಟ್ಟರು.
ಮಧ್ಯರಾತ್ರಿಯಿಂದಾನೇ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಸರತಿ ಸಾಲಲ್ಲಿ ನಿಂತು ತಾಯಿಯ ದರ್ಶನ ಪಡೆದಿದ್ದಾರೆ. 10 ದಿನಗಳ ಕಾಲ ತಾಯಿಯ ದರ್ಶನಕ್ಕೆ ಅವಕಾಶ ಇರಲಿದೆ. ಇಂದಿನಿಂದ ಶುರುವಾಗಿರುವ ಹಾಸನಾಂಬೆಯ ದರ್ಶನ ನವೆಂಬರ್ 3ರವರೆಗೆ ನಡೆಯಲಿದೆ. ರಾತ್ರಿ 11 ಗಂಟೆಯವರೆಗೂ ತಾಯಿಯ ದರ್ಶನ ಭಾಗ್ಯ ಸಿಗಲಿದೆ. ಭಕ್ತರು ತಾಯಿಯ ದರ್ಶನವನ್ನು ಪಡೆದು ಪುನೀತರಾಗಬಹುದು.
ಹಾಸನಾಂಬೆಯ ದೇವಸ್ಥಾನದ ಗರ್ಭಗುಡಿಯ ಬಾಗಿಲು ವರ್ಷಕ್ಕೆ ಒಂದೇ ಸಲ ತೆಗೆಯುವುದು. ಹತ್ತು ದಿನ ಮಾತ್ರ ತೆಗೆದಿರುತ್ತದೆ. ಮೊದಲಿನಿಂದಾನೂ ಇದು ವಿಶಿಷ್ಠ ಸಂಪ್ರದಾಯವಾಗಿರುತ್ತದೆ. ಅಶ್ವಯುಜ ಮಾಸದ ಅಷ್ಟಮಿ ದಿನ ಬಾಗಿಲನ್ನು ಸ್ವಾಮೀಜಿ ಮತ್ತು ಹಿರಿಯರು ತೆಗೆಯುತ್ತಾರೆ. ಈ ವೇಳೆ ರಾಜಕಾರಣಿಗಳು ಕೂಡ ಇರುತ್ತಾರೆ. ಬಾಗಿಲ ತೆಗೆದಾಕ್ಷಣ ಕಳೆದ ವರ್ಷ ಹಚ್ಚಿದ ದೀಪ ಹಾಗೇ ಉರಿಯುತ್ತಿತ್ತು. ಇದನ್ನು ಕಂಡು ಭಕ್ತರು ಪುನೀತರಾಗಿದ್ದಾರೆ.