Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಇಂದು ದರ್ಶನ್ ಅರ್ಜಿ ವಿಚಾರಣೆ : ಮನೆ ಊಟದ ವಿಚಾರಕ್ಕೆ ಕೋರ್ಟ್ ಹೇಳಿದ್ದೇನು..?

06:27 PM Jul 25, 2024 IST | suddionenews
Advertisement

ಬೆಂಗಳೂರು: ನಟ ದರ್ಶನ್ ಅವರಿಗೆ ಇಂದು ಕೂಡ ಹಿನ್ನಡೆಯಾಗಿದೆ. ಕೋರ್ಟ್ ದರ್ಶನ್ ಅವರ ಮನವಿಯನ್ನು ತಿರಸ್ಕಾರ ಮಾಡಿದೆ. ಮನೆಯ ಊಟ, ಹಾಸಿಗೆ ಯಾವುದಕ್ಕೂ ಅನುಮತಿ ನೀಡಿಲ್ಲ. ಮನೆ ಊಟ, ಹಾಸಿಗೆ ನೀಡುವ ಬಗ್ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

Advertisement

ಜೈಲೂಟದಿಂದ ದರ್ಶನ್ ಅವರಿಗೆ ಅತಿಸಾರ ಬೇಧಿ, ವಾಂತಿ ಆಗಿದೆ ಎಂದು ಕೋರ್ಟ್ ನಲ್ಲಿ ಮನೆಯ ಊಟ ಹಾಗೂ ಹಾಸಿಗೆಗಾಗಿ ಅನುಮತಿ ಕೋರಿದ್ದರು. ಇಂದು 24ನೇ ಎಸಿಎಂಎಂ ಕೋರ್ಟ್ ನಲ್ಲಿ ಈ ಸಂಬಂಧ ಅರ್ಜಿ ವಿಚಾರಣೆ ನಡೆದಿತ್ತು. ಜೈಲಿನ ಅಧಿನಿಯಮ ಪ್ರಶ್ನಿಸಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಪೊಲೀಸರ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು. ಜೈಲೂಟದಿಂದ ದರ್ಶನ್ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಶೂಟಿಂಗ್ ಸಮಯದಲ್ಲಿ ಆದಂತ ಗಾಯದ ನೋವಿನ ಬಗ್ಗೆ ಮಾತ್ರ ವೈದ್ಯರು ಸಲಹೆ ನೀಡಿದ್ದಾರೆ. ಜೈಲಿನ ನಿಯಾಮಾವಳಿಯಲ್ಲಿ ಮನೆಯೂಟಕ್ಕೆ ಅವಕಾಶವಿಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ್ದರು.

ಎರಡು ಕಡೆಯಲ್ಲಿ ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವನಾಥ್ ಸಿ.ಗೌಡರ್, ಆದೇಶ ನೀಡಿದ್ದಾರೆ. ಕೊಲೆ ಆರೋಪಿಗಳಿಗೆ ಮನೆಯ ಊಟ, ಬಟ್ಟೆ ಪಡೆಯುವ ಅವಕಾಶವಿಲ್ಲ. ಜೈಲು ನಿಯಾಮಾವಳಿ 728ರಲ್ಲಿ ಮನೆಯ ಊಟ, ಬಟ್ಟೆ ಪಡೆಯುವ ಅವಕಾಶವಿಲ್ಲ. ಹೀಗಾಗಿ ದರ್ಶನ್ ಕೊಲೆ ಆರೋಪಿ ಆಗಿರುವ ಕಾರಣ ಈ ಅವಕಾಶವನ್ನು ಕೊಡಲಾಗುವುದಿಲ್ಲ ಎಂದು ಆದೇಶ ನೀಡಿದ್ದಾರೆ.

Advertisement

ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಜುಲೈ 29ಕ್ಕೆ ನಿಗದಿಯಾಗಿದೆ. ದರ್ಶನ್ ಗೆ ಮನೆಯ ಊಟದ ವ್ಯವಸ್ಥೆಯ ಸೌಲಭ್ಯ ಬೇಕಿದ್ದರೆ ಹೈಕೋರ್ಟ್ ಮೊರೆ ಹೋಗಬೇಕಿದೆ. ಅವರ ಪರ ವಕೀಲರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Advertisement
Tags :
application hearingbengaluruchitradurgaCourtdarshanhome mealssuddionesuddione newsಅರ್ಜಿ ವಿಚಾರಣೆಕೋರ್ಟ್ಚಿತ್ರದುರ್ಗದರ್ಶನ್ಬೆಂಗಳೂರುಮನೆ ಊಟಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article