ದೇಶದಲ್ಲಿ ಸಂಭವಿಸಿದ ಗಂಡಾಂತರ ಹಾಗೂ ರಾಜ್ಯ ರಾಜಕಾರಣದ ಬಗ್ಗೆ ಕೋಡಿ ಶ್ರೀ ಭವಿಷ್ಯ..!
ಬೆಳಗಾವಿ: ದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ಅವಾಂತರವೂ ಸೃಷ್ಟಿಯಾಗಿದೆ. ಸಾವು ನೋವುಗಳು ಸಂಭವಿಸಿವೆ. ಇಂದು ಕೇರಳದ ವಯನಾಡಿನಲ್ಲಿ ಆದ ಭೂಕಂಪದಿಂದ ಮಕ್ಕಳು, ವೃದ್ದರು ಸೇರಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಈ ಸಂಬಂಧ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿರುವ ಕೋಡೊಮಠದ ಡಾ.ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಅವರು ಮಾತನಾಡಿದ್ದಾರೆ.
ಕಳೆದ ತಿಂಗಳಷ್ಟೇ ದೇಶಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದಿದ್ದರು. ಈಗ ಮತ್ತೆ ಮಾತನಾಡಿ, ಮಳೆ ಆಗುತ್ತೆ, ಗುಡ್ಡ ಕುಸಿಯುತ್ತೆ. ಜನ ಸಾಯುತ್ತಾರೆ. ರೋಗ ರುಜಿನಗಳು ಹೆಚ್ಚಾಗುತ್ತವೆ ಎಂದು ಹೇಳಿದ್ದ. ನನ್ನ ಪ್ರಕಾರ ಅಮಾವಾಸ್ಯೆವರೆಗೂ ಮಳೆ ಇರುತ್ತದೆ. ಬಳಿಕ ಬೇರೆ ಭಾಗಕ್ಕೆ ಹೋಗುತ್ತದೆ. ಇದು ಕ್ರೋಧಿನಾಮ ಸಂವಸ್ತರ. ಕ್ರೋಧ ಎಂದರೆ ಒಳ್ಳೆಯದು ಹಾಗೂ ಕೆಟ್ಟದು ಎರಡು ಇರುತ್ತದೆ ಎಂದಿದ್ದಾರೆ.
ಇದೇ ವೇಳೆ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿ, ಸದ್ಯ ಈಗ ಏನು ತೊಂದರೆ ಕಾಣಿಸುತ್ತಿಲ್ಲ ಎಂದಿದ್ದಾರೆ. ಜೊತೆಗೆ ಬೇಡ ಹಾಗೂ ಸಂನ್ಯಾಸಿಯ ಕಥೆಯನ್ನು ಹೇಳಿದ್ದಾರೆ. ಒಬ್ಬ ಸಂನ್ಯಾಸಿ ತಪಸ್ಸಿಗೆ ಕುಳಿತಿದ್ದನಂತೆ. ಅದೇ ವೇಳೆ ಒಬ್ಬ ಬೇಡ ಜಿಂಕೆಯನ್ನು ಅಟ್ಟಿಸಿಕೊಂಡು ಬಂದನಂತೆ. ಏನ್ ಸ್ವಾಮಿ ಇಲ್ಲಿ ಒಂದು ಜಿಂಕೆ ಓಡಿ ಹೋಯಿತೇ ಎಂದು ಕೇಳಿದನಂತೆ ಸನ್ಯಾಸಿ ಉಭಯ ಸಂಕಟಕ್ಕೆ ಸಿಲುಕಿದ್ದರಂತೆ. ಹೌದು ಎಂದರೆ ಜಿಂಕೆಯನ್ನು ಕೊಲ್ಲುವಂತೆ ಮಾಡಿದ ಪಾಪ ಸುತ್ತಿಕೊಳ್ಳುತ್ತದೆ. ಇಲ್ಲ ಎಂದರೆ ಸುಳ್ಳಾಡಿದ ಪಾಪ ಬರುತ್ತದೆ ಎಂದು 'ಯಾವುದು ನೋಡಿತೋ ಅದು ಮಾತನಾಡಲ್ಲ. ಯಾವುದು ಮಾತನಾಡುತ್ತದೆಯೋ ಅದು ನೋಡಿಲ್ಲ' ಎಂದನಂತೆ. ಕಣ್ಣು ನೋಡುತ್ತೆ ಆದ್ರೆ ಮಾತನಾಡಲ್ಲ.. ಬಾಯಿ ಮಾತನಾಡುತ್ತೆ ಆದ್ರೆ ನೋಡಲ್ಲ ಎಂಬುದನ್ನು ಹೇಳಿದ್ದಾರೆ.