ಡಾನಾ ಚಂಡಮಾರುತ ಎಫೆಕ್ಟ್ : ಹವಮಾನ ಇಲಾಖೆ ನೀಡಿದ ಎಚ್ಚರಿಕೆ ಏನು..?
ಎಲ್ಲೆಡೆ ಬೆಂಬಿಡದೆ ಮಳೆರಾಯ ಸುರಿಯುತ್ತಿದ್ದಾನೆ. ಕಳೆದ ಕೆಲವು ದಿನಗಳಿಂದ ವಿಶ್ರಾಂತಿಯನ್ನೇ ನೀಡುತ್ತಿಲ್ಲ. ಇದರಿಂದ ಜನರು ಕೂಡ ರೋಸೆದ್ದು ಹೋಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಹಾಗೂ ಒಡಿಶಾದಲ್ಲಿ ಶುರಿವಾಗಿರುವ ಚಂಡಮಾರುತದ ಪ್ರಭಾವವಾಗಿದೆ. ಚಂಡಮಾರುತ ತಗ್ಗುವ ತನಕವೂ ಈ ಮಳೆ ಕಡಿಮೆಯಾಗುವುದು ಅನುಮಾನವಾಗಿದೆ.
ಡಾನಾ ಚಂಡಮಾರುತದ ಬಗ್ಗೆ ಹವಮಾನ ಇಲಾಖೆ ಮಾಹಿತಿ ನೀಡಿದೆ. ಅಕ್ಟೋಬರ್ 22ಕ್ಕೆ ವಾಯುಭಾರ ಕುಸಿತ ಉಂಟಾಗಲಿದ್ದು, ಅಕ್ಟೋಬರ್ 23ರಂದು ಚಂಡಮಾರುತ ಸೃಷ್ಟಿಯಾಗಲಿದೆ. ಇದರಿಂದ ಹಲವು ರಾಜ್ಯಗಳ ಮೇಲೂ ಪ್ರಭಾವ ಬೀರಲಿದೆ. ಈ ಡಾನಾ ಚಂಡಮಾರುತ ಗಂಟೆಗೆ 15 ಕಿಲೋ ಮೀಟರ್ ವೇಗದಲ್ಲಿ ಹೊರ ಹೊಮ್ಮುತ್ತದೆ. ಆಗ್ನೇಯ ದಿಕ್ಕಿನಲ್ಲಿ ಗಂಟೆಗೆ 520 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸುತ್ತದೆ. ಈ ಚಂಡಮಾರುತ ಪಶ್ಚಿಮ ಬಂಗಾಳ ಹಾಗೂ ಒಡಿಶಾಗೆ ಹೊಡೆಯುತ್ತದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.
ಹವಮಾನ ಇಲಾಖೆ ಸದ್ಯಕ್ಕೆ ಈ ಎರಡು ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ವಾಯುಭಾರ ಕುಸೊತ, ಚಂಡಮಾರುತದ ಪ್ರಭಾವದಿಂದಾನೇ ಕರ್ನಾಟಕದಲ್ಲೂ ಒಂದೇ ಸಮನೆ ಮಳೆ ಸುರಿಯುತ್ತಿದೆ. ಹೀಗಿರುವಾಗ ಮತ್ತೆ ಚಂಡಮಾರುತದ ಪ್ರಭಾವ ಜೋರಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿರುವುದು ರಾಜ್ಯದ ಜನರಿಗೂ ಆತಂಕ ಉಂಟು ಮಾಡಿದೆ. ಮಳೆ ಜಾಸ್ತಿಯಾದರೆ ಸಿಲಿಕಾನ್ ಸಿಟಿ ಮಂದಿಗೆ ಹೆಚ್ಚು ತೊಂದರೆಯಾಗಲಿದೆ. ಒಂದಿಡಿ ರಾತ್ರಿ ಮಳೆ ಬಂದರೇನೆ ಬೆಂಗಳೂರು ನಗರ ತಡೆದುಕೊಳ್ಳುವುದಿಲ್ಲ. ಮಳೆ ನೀರು ರಸ್ತೆಯಲ್ಲೇ ನಿಲ್ಲುತ್ತದೆ, ಹೆಚ್ಚಾದರೆ ಮನೆಗಳಿಗೆ ನುಗ್ಗುತ್ತದೆ. ಹಿಂಗಿರುವ ಸಿಲಿಕಾನ್ ಸಿಟಿಗೆ ವಾರದಿಂದ ಒಂದೇ ಸಮನೆ ಬರುತ್ತಿರುವ ಮಳೆ, ಕೆಲವು ನಗರದಲ್ಲಿ ರಸ್ತೆಯಲ್ಲೆಲ್ಲಾ ಕೆರೆಯ ವಾತಾವರಣನ್ನೇ ಸೃಷ್ಟಿ ಮಾಡಿದೆ.