Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಇಡಿ ಬಂಧನದ ಭೀತಿಯಿಂದ ನಾಪತ್ತೆಯಾಗಿದ್ದ ದದ್ದಲ್ ವಿಧಾನಸೌಧದಲ್ಲಿ ದಿಢೀರ್ ಪತ್ತೆ..!

06:06 PM Jul 15, 2024 IST | suddionenews
Advertisement

ಬೆಂಗಳೂರು: ವಾಲ್ಮೀಕಿ ನಿಗಮದ ಅಭಿವೃದ್ಧಿ ಹಗರಣದಲ್ಲಿ ಶಾಸಕ ಬಸನಗೌಡ ದದ್ದಲ್ ಅವರ ಹೆಸರು ಕೇಳಿ ಬಂದಿದೆ. ಈಗಾಗಲೇ ಅಧಿಕಾರಿಗಳು ಅವರ ಮನೆ, ಕಚೇರಿಯನ್ನೆಲ್ಲಾ ಜಾಲಾಡಿದ್ದಾರೆ. ಇದರ ನಡುವೆ ಇಡಿ ಅಧಿಕಾರಿಗಳು ದದ್ದಲ್ ಅವರನ್ನು ವಶಕ್ಕೆ ಪಡೆದು, ಇನ್ನಷ್ಟು ವಿಚಾರಣೆ ನಡೆಸುವುದಕ್ಕೆ ತಯಾರಿ ನಡೆಸಿದ್ದರು. ಆದರೆ ಶಾಸಕ ದದ್ದಲ್ ಅಂದಿನಿಂದಲೂ ಇಡಿ ಅಧಿಕಾರಿಗಳಿಗೆ ಸಿಗದಂತೆ ನಾಪತ್ತೆಯಾಗಿದ್ದರು. ಇದೀಗ ವಿಧಾನಸೌಧದಲ್ಲಿ ಪತ್ತೆಯಾಗಿದ್ದಾರೆ.

Advertisement

ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭವಾಗಿದೆ. ಎಲ್ಲಾ ಶಾಸಕರು, ಸಚಿವರು ಈ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ಇಡಿ ಬಂಧನದ ಭೀತಿಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಶಾಸಕ ಬಸನಗೌಡ ದದ್ದಲ್ ಅವರು ಕಾಣಿಸಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಕಾಣಿಸಿಕೊಂಡ ದದ್ದಲ್ ಅವರು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ.

ಇನ್ನು ಇದೇ ವೇಳೆ ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ. ನಾನು ಎರಡು ದಿನ ಊರಿಗೆ ಹೋಗಿದ್ದೆ. ಇವತ್ತು ಕಲಾಪಕ್ಕೆ ಬಂದಿದ್ದೇನೆ. ಯಾವುದೇ ಇಡಿ ನೋಟೀಸ್ ನನಗೆ ತಲುಪಿಲ್ಲ. ಯಾವುದೇ ರೀತಿಯ ತನಿಖೆಗೂ ನಾನು ಸಹಕರಿಸುತ್ತೇನೆ. ಇವತ್ತು ಬಂದಿರುವುದು ಅಧಿವೇಶನಕ್ಕಾಗಿ ಎಂದಿದ್ದಾರೆ.

Advertisement

ವಾಲ್ಮೀಕಿ ಅಭಿವೃದ್ಧಿ ನಿಗಮದ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದದ್ದಲ್ ಅವರಿಗಾಗಿಯೂ ಇಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು‌. ಮಳೆಗಾಲದ ಅಧಿವೇಶನದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಹಗರಣಗಳ ವಿಚಾರವನ್ನೇ ಇಟ್ಟುಕೊಂಡು ವಾಗ್ದಾಳಿ ನಡೆಸಿದ್ದಾರೆ.

Advertisement
Tags :
bengaluruchitradurgaDaddalED arrestsuddionesuddione newsvidhana soudhaಇಡಿ ಬಂಧನಚಿತ್ರದುರ್ಗದದ್ದಲ್ದಿಢೀರ್ ಪತ್ತೆನಾಪತ್ತೆಬೆಂಗಳೂರುವಿಧಾನಸೌಧಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article