For the best experience, open
https://m.suddione.com
on your mobile browser.
Advertisement

ಫೆಂಗಲ್ ಚಂಡಮಾರುತ: ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಇನ್ನು ಮೂರು ದಿನ ಮಳೆ..!

05:09 PM Dec 02, 2024 IST | suddionenews
ಫೆಂಗಲ್ ಚಂಡಮಾರುತ  ಶಿವಮೊಗ್ಗ  ಚಿಕ್ಕಮಗಳೂರು ಸೇರಿದಂತೆ ಇನ್ನು ಮೂರು ದಿನ ಮಳೆ
Advertisement

ಬೆಂಗಳೂರು: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ಶುರುವಾಗಿರುವ ಕಾರಣ ಅದರ ಎಫೆಕ್ಟ್ ಕರ್ನಾಟಕದ ಮೇಲೂ ಬಿದ್ದಿದೆ. ಇದರ ಪರಿಣಾಮ ಚಳಿಯ ಸಮಯದಲ್ಲಿ ಜಿಟಿಜಿಟಿ ಮಳೆಯೂ ಸೇರಿಕೊಂಡು ಜನ ಹೊರಗೆ ಹೋಗುವುದಕ್ಕೇನೆ ಸಂಕಷ್ಟ ಪಡುವಂತೆ ಆಗಿದೆ. ಬೆಂಗಳೂರಿನ ಜನಕ್ಕಂತು ನಾವೂ ಸಿಲಿಕಾನ್ ಸಿಟಿಯಲ್ಲಿಯೇ ಇದ್ದೀವಾ ಅಥವಾ ಊಟಿಯಲ್ಲೇನಾದರೂ ಇದ್ದೀವಾ ಎಂಬ ಫೀಲ್ ನಲ್ಲಿದ್ದಾರೆ. ಮುಂದಿನ ಮೂರು ದಿನಗಳ ಕಾಲ ಇದೇ ಥರದ ವಾತಾವರಣ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ಕಳೆದ ಎರಡು ದಿನದಿಂದ ವಿಪರೀತ ಚಳಿ, ಸಣ್ಣ ಹನಿಯಿಂದ ಬೇಸತ್ತ ಜನಕ್ಕೆ ಇನ್ನು ಮೂರು ದಿನ ಹಿಂಗೇನಾ ಎಂಬುದನ್ನು ಕೇಳಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ರಾಜ್ಯದ ಕೆಲ ಜಿಲ್ಲೆಗಳಿಗೆ ಬಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ ಹವಮಾನ ಇಲಾಖೆ. ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಕೋಲಾರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಇಂದು ಬೆಳಗ್ಗೆಯಿಂದಾನೇ ಸಿಲಿಕಾನ್ ಸಿಟಿಯಲ್ಲಿ ಮಳೆ ಜೋರಾಗಿದೆ. ಎಲ್ಲೆಡೆ ಮಳೆಯಲಿ ಜೊತೆಯಲಿ ಅಂತ ಜನ ಓಡಾಟ ನಡೆಸಿದ್ದಾರೆ.

ಇನ್ನು ಹಲವೆಡೆ ಈ ಮಳೆಯಿಂದಾಗಿ ರಾಗಿ ಬೆಳೆ ಹಾಳಾಗಿದೆ. ಈಗ ರಾಗಿ ಕೊಯ್ಲು ಮಾಡುವ ಸಮಯ. ಹೀಗೆ ಮಳೆ ಬಂದರೆ ಒಣಗಿದ ರಾಗಿಯ ಮೇಲೆ ಬಿದ್ದು ಕಪ್ಪಾಗುತ್ತದೆ. ನೆಲ ಕಚ್ಚಿ ಕೈಗೆ ಸಿಗಬೇಕಾದ ಬೆಳೆಯೂ ಸಿಗಲ್ಲ. ಹಾಗೇ ಗುಣಮಟ್ಟ ಹಾಳಾಗಿ ಮಾರುಕಟ್ಟೆಯಲ್ಲೂ ಕೇಳುವವರಿಲ್ಲದಂತೆ ಆಗುತ್ತದೆ. ಹೀಗಾಗಿ ರೈತನಿಗೆ ಈಗ ಶುರುವಾಗಿರುವ ಚಂಡಮಾರುತ ಎಫೆಕ್ಟ್ ಸಂಕಷ್ಟ ತಂದೊಡ್ಡಿದೆ.

Advertisement

Tags :
Advertisement