ಸೈಕ್ಲೋನ್ ಎಫೆಕ್ಟ್: ರಾಜ್ಯಾದ್ಯಂತ 5 ದಿನಗಳ ಕಾಲ ಮಳೆ..!
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಮಳೆಯ ಅಬ್ಬರ ಶುರುವಾಗಿದೆ. ಆರಂಭದಲ್ಲಿಯೇ ಉತ್ತಮ ಮಳೆಯಾಗುವ ಭರವಸೆ ನೀಡಿದೆ. ಇದೀಗ ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತವಾಗಿದ್ದು, ಮುಂದಿನ ಐದು ದಿನದಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಮುಂದಿನ48 ಗಂಟೆಯಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ. ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ರೂಪುಗೊಂಡ ಪರಿಣಾಮ ಸೈಕ್ಲೋನ್ ಸೃಷ್ಠಿಯಾಗಿದೆ. ನಾಳೆ ರಿಮಲ್ ಹೆಸರಿನ ಸೈಕ್ಲೋನ್ ಸೃಷ್ಟಿಯಾಗಲಿದೆ. ಬಂಗಾಳ ಕೊಲ್ಲಿಯಲ್ಲಿ ಉತ್ತರಾಭಿಮುಖವಾಗಿ ಚಲಿಸಲಿದೆ. ಮೇ 26ಕ್ಕೆ ಪಶ್ಚಿಮ ಬಂಗಾಳ ಅಥವಾ ಬಾಂಗ್ಲಾದೇಶದ ಬಳಿ ಸೈಕ್ಲೋನ್ ಭೂ ಸ್ಪರ್ಶ ಮಾಡಲಿದೆ. ಸೈಕ್ಲೋನ್ ಪರಿಣಾಮವಾಗಿ ಪಶ್ಚಿಮ ಬಂಗಾಳ, ಒರಿಸ್ಸಾ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಈ ಸೈಕ್ಲೋನ್ ನಿಂದಾಗಿ ಮುಂಗಾರು ತೀವ್ರವಾಗುವ ಸಾಧ್ಯತೆಯೂ ಇದೆ. ಕರ್ನಾಟಕದ ಬಳ್ಳಾರಿ, ಬೆಳಗಾವಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಚೆನ್ನಾಗಿಯೇ ಸುರಿಯುತ್ತಿದೆ. ನಿನ್ನೆಯಷ್ಟೇ ಕೊಂಚ ವಿಶ್ರಾಂತಿ ನೀಡಿರುವ ವರುಣರಾಯ, ಇಂದು ಮತ್ತೆ ಅಬ್ಬರಿಸುವ ಲಕ್ಷಣ ತೋರಿಸುತ್ತಿದ್ದಾನೆ. ಜೋರು ಬಿಸಿಲಿನ ಅನುಭವವಾಗುತ್ತಿದ್ದು, ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಮಳೆ ಬರುವ ಸೂಚನೆ ಇದೆ. ಹಿರಗೆ ಹೋಗವ ಬೈಕ್ ಸವಾರರು, ಕೆಲಸಗಾರರು ಮುನ್ನೆಚ್ಚರಿಕೆಯಾಗಿ ಕೊಡೆ, ರೈನ್ ಕೋಟ್ ಕೊಂಡೊಯ್ದರೆ ಉತ್ತಮ.