For the best experience, open
https://m.suddione.com
on your mobile browser.
Advertisement

ಮೈಸೂರು ಪಾದಯಾತ್ರೆಗೂ ಮುನ್ನ ಬಿಜೆಪಿ ನಾಯಕರಿಂದ ಬೆಳೆ ಹಾನಿ ಪರಿಶೀಲನೆ..!

02:27 PM Jul 29, 2024 IST | suddionenews
ಮೈಸೂರು ಪಾದಯಾತ್ರೆಗೂ ಮುನ್ನ ಬಿಜೆಪಿ ನಾಯಕರಿಂದ ಬೆಳೆ ಹಾನಿ ಪರಿಶೀಲನೆ
Advertisement

Advertisement

ಬೆಂಗಳೂರು: ಮೂಡಾ ಹಗರಣವನ್ನು ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆಗಸ್ಟ್ 3ರಂದು ಮೈಸೂರಿಗೆ ಪಾದಯಾತ್ರೆ ನಡೆಸಲು ಸಜ್ಜಾಗಿದ್ದಾರೆ. ವಾಲ್ಮೀಕಿ ಹಗರಣ, ಮೂಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ನಾಯಕರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಹೋರಾಟ ಚುನಾವಣಾ ಲಾಭಕ್ಕಾಗಿ ಅಲ್ಲ. ಬದಲಿಗೆ ಅಹಿಂದ ವರ್ಗಕ್ಕೆ ಆದ ಅನ್ಯಾಯ, ದ್ರೋಹದ ವಿರುದ್ಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಇನ್ನು ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಹಲವೆಡೆ ಗುಡ್ಡ ಕುಸಿತದಿಂದಾಗಿ ಪ್ರಾಣ ಹಾನಿಯಾಗಿದೆ. ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. ಬೆಳೆ ಹಾನಿಯಾಗಿದೆ. ಹೀಗಾಗಿ ಬಿಜೆಪಿ ನಾಯಕರು ಮೈಸೂರಿಗೆ ಪಾದಯಾತ್ರೆ ಕೈಗೊಳ್ಳುವುದಕ್ಕೂ ಮೊದಲು ಬೆಳೆಹಾನಿ ಸರ್ವೆ ನಡೆಸಲಿದ್ದಾರೆ.

Advertisement

ತಂಡಗಳಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಆರಗ ಜ್ಞಾನೇಂದ್ರ, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಮಾಜಿ ಸಚಿವ ಬಿ.ಶ್ರೀರಾಮುಲು, ಛಲವಾದಿ ನಾರಾಯಣಸ್ವಾಮಿ, ಅರವಿಂದ್ ಬೆಲ್ಲದ್ ನೇತೃತ್ವದಲ್ಲಿ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ದಕ್ಷಿಣ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗೆ ಆರ್ ಅಶೋಕ್ ತಂಡ ಭೇಟಿ ನೀಡಲಿದೆ. ಶಿವಮೊಗ್ಗ ಜಿಲ್ಲೆಗೆ ಅರಗ ಜ್ಞಾನೇಂದ್ರ ತಂಡ ಭೇಟಿ ನೀಡಲಿದೆ. ಕೊಡಗು ಮತ್ತು ಉಡುಪಿ ಜಿಲ್ಲೆಗಳಿಗೆ ಅಶ್ವತ್ಥ್ ನಾರಾಯಣ್ ಅವರ ತಂಡ ಭೇಟಿ ನೀಎಇ ಪರಿಶೀಲನೆ ನಡೆಸಲಿದೆ‌. ರಾಯಚೂರು ಮತ್ತು ಯಾದಗಿರಿಗೆ ಛಲವಾ್ಇ ನಾರಾಯಣಸ್ವಾಮಿ ತಂಡ ಹಾಗೂ ಬಾಗಲಕೋಟೆ ಹಾಗೂ ವಿಜಯಪುರಕ್ಕೆ ಬೆಲ್ಲದ್ ತಂಡ, ಕೊಪ್ಪಳ, ಬಳ್ಳಾರಿ, ರಾಯಚೂರಿಗೆ ಶ್ರೀರಾಮುಲು ತಂಡ ಭೇಟಿ ನೀಡಲಿದೆ.

Tags :
Advertisement