Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿಪಿ ಯೋಗೀಶ್ವರ್ ಕಾಂಗ್ರೆಸ್ ಸೇರ್ಪಡೆ: ನಿಖಿಲ್, ಅಶೋಕ್ ಹೇಳಿದ್ದೇನು..?

04:55 PM Oct 23, 2024 IST | suddionenews
Advertisement

ಬೆಂಗಳೂರು: ಸಿಪಿ ಯೋಗೀಶ್ವರ್ ನೋಡ ನೋಡುತ್ತಿದ್ದಂತೆ ಮೈತ್ರಿಗೆ ದೊಡ್ಡ ಆಘಾತವನ್ನೇ ನೀಡಿದ್ದಾರೆ. ನಿನ್ನೆ ಸಂಜೆವರೆಗೂ ಕಾದಿದ್ದ ಯೋಗೀಶ್ವರ್ ದಿಢೀರನೇ ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್ ಚಿಹ್ನೆ ನೀಡಿ ಸ್ಪರ್ಧಿಸಲಿ ಎಂದಿದ್ದ ಕುಮಾರಣ್ಣನಿಗೂ ಇದು ಶಾಕಿಂಗ್ ವಿಚಾರವೇ ಸರಿ. ಸಿಪಿ ಯೋಗೀಶ್ವರ್ ಕಾಂಗ್ರೆಸ್ ಸೇರಿದ ಮೇಲೆ ಮೈತ್ರಿ ಪಕ್ಷದಿಂದ ನಿಲ್ಲೋರು ಯಾರೂ ಎಂಬ ಪ್ರಶ್ನೆ ಎದುರಾಗಿದೆ.

Advertisement

ಸಪಿ ಯೋಗೀಶ್ವರ್ ಕಾಂಗ್ರೆಸ್ ಸೇರಿದ್ದರ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ಯೋಗೀಶ್ವರ್ ಅವರು ರಾಜೀನಾಮೆ ಕೊಟ್ಟಿದ್ದರಲ್ಲಿ ಆಶ್ಚರ್ಯ ಪಡುವಂತದ್ದು ಏನು ಇಲ್ಲ. ಗಾಳಿಯಲ್ಲಿ ಗುಂಡು ಹೊಡೆಯುವಂತ ಆರೋಪವಲ್ಲ. ಯಾವಾಗ ತರಾತುರಿಯಲ್ಲಿ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದರೋ ಅವತ್ತೆ ಗೊತ್ತಿತ್ತು. ಇದರಲ್ಲಿ ಆಶ್ಚರ್ಯ ಏನು ಇಲ್ಲ. ಕಳೆದ ಎರಡು ತಿಂಗಳಿನಿಂದ ನನ್ನ ಹೆಸರು ಚಾಲ್ತಿಯಲ್ಲಿದೆ. ಜೆಡಿಎಸ್ ಕಾರ್ಯಕ್ರತ್ರು ಸಹ ನಿಖಿಲ್ ಗೆ ಟಿಕೆಟ್ ಕಿಟ್ಟರೆ ಕೆಲಸ ಮಾಡುತ್ತೇವೆ ಎಂದಿದ್ದರು‌. ಆದರೆ ಎಲ್ಲವೂ NDA ಕಡೆಯಿಂದ ಘೋಷಣೆಯಾಗಬೇಕು. ನಿನ್ನೆ ಕುಮಾರಣ್ಣ ಕೂಡ ಇದನ್ನೇ ಹೇಳಿದ್ದು, ತಾಳಿದವನು ಬಾಳಿಯಾನು ಅಂತ ಎಂದಿದ್ದಾರೆ.

ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಆರ್ ಅಶೋಕ್, ಕಾಂಗ್ರೆಸ್ ಗೆ ಈಗಾಗಲೇ ಹಲವು ನಾಯಕರು ಹೋಗಿ ಬಂದಿದ್ದಾರೆ. ಜಗದೀಶ್ ಶೆಟ್ಟರ್ ಕೂಡ ಕಾಂಗ್ರೆಸ್ ಸೇರಿಕೊಂಡರು. ಅಲ್ಲಿ ಅವರಿಗೆ ಯಾವುದೇ ಸ್ಥಾನ ಸಿಗಲಿಲ್ಲ. ವಾಪಸ್ ಬಂದರು. ಲಕ್ಷ್ಮಣ್ ಸವದಿ ಕೂಡ ಕಾಂಗ್ರೆಸ್ ಹೋಗಿದ್ದಾರೆ. ಅಲ್ಲಿ ಅವರಿಗೆ ಯಾವ ಸ್ಥಾನ ಸಿಕ್ಕಿದೆ. ಸಿಪಿ ಯೋಗೀಶ್ವರ್ ಕಥೆ ಕೂಡ ಹಾಗೆಯೇ ಆಗುತ್ತದೆ. ಅವರು ಕೂಡ ಕಾಂಗ್ರೆಸ್ ನಲ್ಲಿ ಲಾಸ್ಟ್ ಬೇಂಚ್ ನಲ್ಲೇ ಕೂರುತ್ತಾರೆ ಎಂದಿದ್ದಾರೆ.

Advertisement

Advertisement
Tags :
ashokbengaluruchitradurgacp yogeshwarjoins CongressNikhilsuddionesuddione newsಅಶೋಕ್ಕಾಂಗ್ರೆಸ್ ಸೇರ್ಪಡೆಚಿತ್ರದುರ್ಗನಿಖಿಲ್ಬೆಂಗಳೂರುಸಿಪಿ ಯೋಗೀಶ್ವರ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article