Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಡಿಕೆಶಿಗೆ ಕೋರ್ಟ್ ರಿಲೀಫ್ ಕೊಟ್ಟಿಲ್ಲ.. ಇವರೇ ತೆಗೆದುಕೊಂಡಿದ್ದಾರೆ : ಕುಮಾರಸ್ವಾಮಿ

06:02 PM Nov 30, 2023 IST | suddionenews
Advertisement

 

Advertisement

ರಾಮನಗರ: ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಡಿಕೆಶಿಗೆ ಹೈಕೋರ್ಟ್ ರಿಲೀಫ್ ನೀಡಿಲ್ಲ. ಇವರೇ ತೆಗೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಗ್ಯಾರಂಟಿ ಕಾರ್ಯಕ್ರಮದ ಮೂಲಕ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದು ಬಿಡುತ್ತೀವಿ ಎಂದುಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಕೇಸ್ ಗಳನ್ನು ಮುಚ್ಚಿ ಹಾಕಬಹುದು ಎಂದು ಐದಾರು ತಿಂಗಳು ಮುಂದೂಡಿದ್ದಾರೆ. ಇದೆಲ್ಲಾ ತಂತ್ರಗಾರಿಕೆ ಅಷ್ಟೇ ಎಂದಿರುವ ಕುಮಾರಸ್ವಾಮಿ, ಇದೆ ವೇಳೆ ಸಿದ್ದರಾಮಯ್ಯ ವಿರುದ್ಧವೂ ಕಿಡಿಕಾರಿದ್ದಾರೆ. ಅವರು ದೊಡ್ಡ ವಕೀಲರು ಎಂಬುದು ನನಗೂ ಗೊತ್ತು. ಇವರೊಬ್ಬರೇ ಕಾನೂನು ತಿಳಿದುಕೊಂಡಿದ್ದಾರೆ. ಅದಕ್ಕೆ ಅರ್ಕಾವತಿ ಡಿನೋಟಿಫೈ ತೆಗೆದು ರಿಡೋ ಮಾಡಿದ್ರಿ. ಕೆಂಪಣ್ಣನ ಆಯೋಗ ಮಾಡಿ ಉಳಿದುಕೊಂಡ್ರಲ್ಲ. ಆ ರೀತಿಯ ವಕೀಲರು ಇವರು ಎಂದು ಕಿಡಿಕಾರಿದ್ದಾರೆ.

Advertisement

ಆ ವಕೀಲ ವೃತ್ತಿ ಮಾಡಿದ್ದರಲ್ಲಿ ಇಬ್ಬರು ಬುದ್ದಿವಂತರಿದ್ದಾರೆ. ಎಸಿಬಿ ರಚನೆ ಮಾಡಿ, ಇವರ ಮೇಲೆ‌ ಬಂದಂತ ಕೇಸ್ ಗಳನ್ನೆಲ್ಲಾ ಮುಚ್ಚಿ ಹಾಕಿಕೊಂಡಿದ್ದಾರೆ. ನಾನು ಸಿಎಂ ಆಗಿದ್ದಾಗ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಹೋರಾಟ ಮಾಡಿದ್ದೆ. ನನ್ನ ಮೇಲೆ ಇವರ ಸರ್ಕಾರದ 15 ಕೇಸ್ ಇತ್ತಲ್ಲ, ನಾನು ಆಗ ಈ ರೀತಿ ನಡೆದುಕೊಂಡಿದ್ದೀನಾ. ನಾನು ಎರಡನೇ ಬಾರಿಗೆ ಸಿಎಂ ಆಗಿದ್ದಾಗ ಕೇಸ್ ಮುಚ್ಚಿ ಹಾಕಿದ್ನಾ..? ಅವರಿಗೂ ನಮಗೂ ಇರುವುದು ವ್ಯತ್ಯಾಸ ಇಷ್ಟೇ. ಜನಸಾಮಾನ್ಯರಿಗೆ ಒಂದು ನ್ಯಾಯಾ.. ಇವರಿಗೆ ಒಂದು ನ್ಯಾಯಾನ ಎಂದು ಪ್ರಶ್ನೆ ಮಾಡಿದ್ದಾರೆ.

Advertisement
Tags :
bengalurufeaturedFormer Chief Minister HD kumaraswamyhd kumara swamysuddioneಎಚ್ ಡಿ ಕುಮಾರಸ್ವಾಮಿಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಕೋರ್ಟ್ಬೆಂಗಳೂರುರಿಲೀಫ್ಸುದ್ದಿಒನ್
Advertisement
Next Article