For the best experience, open
https://m.suddione.com
on your mobile browser.
Advertisement

ದರ್ಶನ್, ಪವಿತ್ರಾಗೌಡ ಸೇರಿದಂತೆ 7 ಮಂದಿಗೆ ಜಾಮೀನು ನೀಡಿದ ಕೋರ್ಟ್..!

04:10 PM Dec 13, 2024 IST | suddionenews
ದರ್ಶನ್  ಪವಿತ್ರಾಗೌಡ ಸೇರಿದಂತೆ 7 ಮಂದಿಗೆ ಜಾಮೀನು ನೀಡಿದ ಕೋರ್ಟ್
Advertisement

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ದರ್ಶನ್, ಪವಿತ್ರಾಗೌಡ ಸೇರಿದಂತೆ ಇಂದು ಏಳು ಮಂದಿಗೆ ಕೋರ್ಟ್ ಜಾಮೀನು ನೀಡಿದೆ. ಇದರಿಂದ ಪವಿತ್ರಾ ಗೌಡಗೆ ಜೈಲಿನಿಂದ ರಿಲೀಫ್ ಸಿಕ್ಕಂತೆ ಆಗಿದೆ. ನಟ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಈಗಾಗಲೇ ಮಧ್ಯಂತರ ಜಾಮೀನು ಪಡೆದಿದ್ದರು. ಈ ಮೂಲಕ ಇಂದು ರೆಗ್ಯುಲರ್ ಬೇಲ್ ಸಿಕ್ಕಿದ್ದು, ಖುಷಿಯಾಗಿದ್ದಾರೆ.

Advertisement

ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಏಳು ಮಂದಿಗೆ ಜಾಮೀನು ಮಂಜೂರು ಮಾಡಿದೆ. ದರ್ಶನ್, ಪವಿತ್ರಾ ಗೌಡ, ನಾಗರಾಜ್, ಲಕ್ಷ್ಮಣ್, ಅನುಕುಮಾರ್, ಜಗದೀಶ್ ಹಾಗೂ ಪ್ರದೂಶ್ ಗೆ ಜಾಮೀನು ಮಂಜೂರು ಮಾಡಿದೆ. ಈ ಹಿಂದೆಯೇ ಮೂವರಿಗೆ ಜಾಮೀನು ಮಂಜೂರಾಗಿತ್ತು. ಇಷ್ಟು ದಿನ ಜೈಲಿನಲ್ಲಿದ್ದವರೆಲ್ಲ ನಿರಾಳರಾಗಿದ್ದಾರೆ. ಪವಿತ್ರಾ ಗೌಡ ಬೇಲ್ ಗಾಗಿ ಸಾಕಷ್ಟು ಕಷ್ಟಪಟ್ಟಿದ್ದರು ಇದೀಗ ಜಾಮೀನು ಮಂಜೂರಾಗಿದೆ.

Advertisement

ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚುತ್ರದುರ್ಗದಿಂದ ಕರೆದುಕೊಂಡು ಬಂದು ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿತ್ತು. ಬಳಿಕ ಬೆಂಗಳೂರು ಪೊಲೀಸರು ಈ ಕೊಲೆಗೆ ಸಂಬಂಧಿಸಿದಂತೆ ಹದಿನೇಳು ಜನ ಆರೋಪಿಗಳನ್ನ ಬಂಧಿಸಲಾಗಿತ್ತು. ಕೇಸ್ ಹೈಕೋರ್ಟ್ ನಡೆಯುತ್ತಿತ್ತು. ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸುತ್ತಿದ್ದರು. ಇದೀಗ ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಇಂದು ಮಧ್ಯಾಹ್ನದ ವೇಳೆ ಆದೇಶ ಹೊರಡಿಸಿರುವ ಕಾರಣ, ಜಾಮೀನು ಸಿಕ್ಕ ಆರೋಪಿಗಳೆಲ್ಲ ನಾಳೆ ರಿಲೀಸ್ ಆಗುವ ಸಾಧ್ಯತೆ ಇದೆ. ಪವಿತ್ರಾ ಗೌಡ ಮತ್ತು ಕುಟುಂಬಸ್ಥರಂತು ಮಗಳು ಹೊರಗೆ ಬರುತ್ತಿರುವುದಕ್ಕೆ ಸಂತಸಗೊಂಡಿದ್ದಾರೆ.

Tags :
Advertisement