For the best experience, open
https://m.suddione.com
on your mobile browser.
Advertisement

ಯಶಸ್ವಿ ಕಾರ್ಯಾಚರಣೆ ಸುಖಾಂತ್ಯಕ್ಕೆ ಕ್ಷಣಗಣನೆ : 12 ದಿನಗಳ ನಂತರ ಹೊರಬರಲಿರುವ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು

07:26 AM Nov 23, 2023 IST | suddionenews
ಯಶಸ್ವಿ ಕಾರ್ಯಾಚರಣೆ ಸುಖಾಂತ್ಯಕ್ಕೆ ಕ್ಷಣಗಣನೆ   12 ದಿನಗಳ ನಂತರ ಹೊರಬರಲಿರುವ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು
Advertisement

ಸುದ್ದಿಒನ್, ನವದೆಹಲಿ, ನವೆಂಬರ್.23 : ಉತ್ತರಾಖಂಡ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗವೊಂದು ಕುಸಿದು 12 ದಿನಗಳು ಕಳೆದಿವೆ. ಅದರಲ್ಲಿ ಜೀವಂತವಾಗಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಅಧಿಕಾರಿಗಳು ವಿಶೇಷ ಕಾರ್ಯಾಚರಣೆಗೆ ನಡೆಸಿದ್ದು ಬಹುತೇಕ ಯಶಸ್ವಿಯಾಗಿದ್ದು ಪೂರ್ಣಗೊಳ್ಳಲು ಕ್ಷಣಗಣನೆ ಶುರುವಾಗಿದೆ.

Advertisement
Advertisement

ಇಂದು (ಗುರುವಾರ) ಬೆಳಿಗ್ಗೆ 8 ಗಂಟೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.  ಸುರಂಗದಿಂದ ಹೊರಬರುವ ಅವರಿಗೆ ವೈದ್ಯಕೀಯ ನೆರವು ನೀಡಲು ಈಗಾಗಲೇ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್‌ಗಳನ್ನು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Advertisement

Advertisement
Advertisement

ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ಬುಧವಾರ ವೇಗ ಪಡೆದುಕೊಂಡಿದೆ. ಸುರಂಗದ ಕುಸಿದ ಪ್ರದೇಶದಲ್ಲಿ ರಾಶಿ ರಾಶಿ ಬಿದ್ದಿದ್ದ ಕಲ್ಲುಮಣ್ಣುಗಳಿಂದ ಅಮೆರಿಕದ ಕೊರೆಯುವ ಯಂತ್ರ ಕೊರೆಯಲು ಆರಂಭಿಸಿತು. ಬುಧವಾರ ಮಧ್ಯಾಹ್ನದ ವೇಳೆಗೆ 45 ಮೀಟರ್‌ ಕೊರೆದಿದೆ. ಪ್ರತಿ 6 ಮೀಟರ್ ಉದ್ದ ಮತ್ತು 800 ಎಂಎಂ ವ್ಯಾಸದ ಇನ್ನೂ ಎರಡು ಉಕ್ಕಿನ ಪೈಪ್‌ಗಳನ್ನು ಸುರಂಗಕ್ಕೆ ಕಳುಹಿಸಲು ಸುಮಾರು 12 ಮೀಟರ್‌ಗಳಷ್ಟು ಅವಶೇಷಗಳನ್ನು ಅಗೆಯಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ, ಉತ್ತರ ಕಾಶಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳನ್ನು ಅಲರ್ಟ್ ಮಾಡಲಾಗಿದೆ.  ಅವರಲ್ಲದೆ, ಸಂತ್ರಸ್ತ ಕಾರ್ಮಿಕರಿಗೆ ಏಮ್ಸ್ ಮತ್ತು ಋಷಿಕೇಶ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಆದರೆ ಅವಶೇಷಗಳ ಇನ್ನೊಂದು ಬದಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ತಲುಪಲು ಒಟ್ಟು 57 ಮೀಟರ್ ಕೊರೆಯಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಉತ್ತರಾಖಂಡದ ಸುರಂಗದ ರಕ್ಷಣೆಗಾಗಿ 21 ರಕ್ಷಣಾ ಸಿಬ್ಬಂದಿ ಆಮ್ಲಜನಕದ ಮಾಸ್ಕ್ ಗಳೊಂದಿಗೆ ಸುರಂಗವನ್ನು ಪ್ರವೇಶಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನವೆಂಬರ್ 12 ರಂದು ಸಿಲ್ಕ್ಯಾರಾ ಸುರಂಗ ಹಠಾತ್ತನೆ ಕುಸಿದಿತ್ತು. ಈ ಘಟನೆಯಿಂದಾಗಿ 41 ಕಾರ್ಮಿಕರು ಅಲ್ಲಿ ಸಿಲುಕಿಕೊಂಡಿದ್ದಾರೆ.  ಉತ್ತರ ಕಾಶಿ ಜಿಲ್ಲೆಯ ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಉತ್ತರ ಕಾಶಿ ಸುರಂಗದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಂದ ಕಾಲಕಾಲಕ್ಕೆ ಮಾಹಿತಿಯನ್ನು ಪಡೆಯುತ್ತಿದ್ದಾರೆ.

Advertisement
Tags :
Advertisement