ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ : ಲೋಕಾಯುಕ್ತದಲ್ಲಿ ದಾಖಲಾಯ್ತು ದೂರು
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರವಾಗಿರುವ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿಶೇಷ ಅಧಿಕಾರಿ ಬಿ ಹೆಚ್ ನಿಶ್ಚಲ್ ಅವರ ಮೇಲೆ ಕೋಟ್ಯಾಂತರ ರೂಪಾಯಿ ಹಗರಣದ ಆರೋಪ ಕೇಳಿ ಬಂದಿದೆ.
ಬಿ ಹೆಚ್ ನಿಶ್ಚಲ್ ಅವರು ಕಾರ್ಯನಿರ್ವಹಿಸುತ್ತಿದ್ದ ಇಲಾಖೆಯಲ್ಲಿಯೇ ಎಸ್ ಸಿ ಪದ್ಮರಾಜು ಎಂಬುವವರು ಕರ್ತವ್ಯ ನಿರ್ವಹಿಸುತ್ತಿದ್ದರು. ಹಗರಣಗಳ ವಿಚಾರವಾಗಿ ದಾಖಲೆ ಸಮೇತ ದೂರು ನೀಡಲಾಗಿದೆ. ರಾಜ್ಯಪಾಲರು ಹಾಗೂ ಲೋಕಾಯುಕ್ತರಿಗೆ ಈ ಸಂಬಂಧ ದೂರು ನೀಡಲಾಗಿದೆ. ಈ ದೂರಿನಲ್ಲಿ ಸಚಿವೆ ಹಾಗೂ ಅವರ ಸಹೋದರನ ಹೆಸರು ಸಹ ಕೇಳಿ ಬಂದಿದೆ.
ದೂರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹಾಗುಹ ಅವರ ಸಹೋದರ ಎಂಎಲ್ಸಿ ಹಟ್ಟಿಹೊಳಿ ಅವರ ಹೆಸರನ್ನು ಸೇರಿಸಲಾಗಿದೆ. ಸಚಿವೆ ಹಾಗೂ ಸಹೋದರನ ಹೆಸರೇಳಿಕೊಂಡು ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಸಚಿವರು ಹೇಳಿದ್ದಾರೆಂದು ಕೋಟ್ಯಾಂತರ ಹಣ ಲೂಟಿ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು ಬಿ ಹೆಚ್ ನಿಶ್ಚಲ್ ವಿರುದ್ಧ ಹತ್ತಾರು ಪ್ರಕರಣಗಳನ್ನು ಉಲ್ಲೇಖ ಮಾಡಲಾಗಿದೆ.