For the best experience, open
https://m.suddione.com
on your mobile browser.
Advertisement

ಮಂತ್ರಾಕ್ಷತೆಗೆ ಕಾಂಗ್ರೆಸ್ ಅನ್ನಭಾಗ್ಯದ ಅಕ್ಕಿ ಬಳಕೆ : ಪ್ರತಾಪ್ ಸಿಂಹ ಹೇಳಿದ್ದೇನು..?

01:27 PM Jan 09, 2024 IST | suddionenews
ಮಂತ್ರಾಕ್ಷತೆಗೆ ಕಾಂಗ್ರೆಸ್ ಅನ್ನಭಾಗ್ಯದ ಅಕ್ಕಿ ಬಳಕೆ   ಪ್ರತಾಪ್ ಸಿಂಹ ಹೇಳಿದ್ದೇನು
Advertisement

Advertisement

ಮೈಸೂರು : ಮಂತ್ರಾಕ್ಷತೆಗಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಬಳಸುತ್ತಿದ್ದಾರೆ ಎಂಬ ಕಾಂಗ್ರೆಸ್ಸಿಗರ ಹೇಳಿಕೆಯನ್ನು ನಾನು ಕೂಡ ಗಮನಿಸಿದ್ದೇನೆ‌. ಬಹಳ ನಗು ತರುವ ಹಾಗೂ ಸೋಜಿಗದ ಸಂಗತಿ ಎಮನದರೆ, ಮಂತ್ರಾಕ್ಷತೆ ಅಕ್ಕಿಯನ್ನು ಸ್ವೀಕರಿಸಲು ಮನಸ್ಸಿಲ್ಲದ ಕಾಂಗ್ರೆಸ್ ಕೈಗಳಿಗೆ, ಮಂತ್ರಾಕ್ಷತೆಗಾಗಿ ಅಕ್ಕಿಯನ್ನು ಕೊಡುವಷ್ಟು ಉದಾರವಾದ ಕೈಗಳಿವೆಯಾ..? ಅಕ್ಷತೆ, ಮಂತ್ರ, ಗೋತ್ರದಲ್ಲಿಯೇ ನಂಬಿಕೆಯಿಲ್ಲದ ಸಿದ್ದರಾಮಯ್ಯ ಅವರು ಮಂತ್ರಾಕ್ಷತೆಗಾಗಿ ಅಕ್ಕಿ ಕೊಡುತ್ತಾರೆಂದರೆ ರಾಜ್ಯದ ಜನ ಕೂಡ ನಂಬಲ್ಲ ಎಂದಿದ್ದಾರೆ.

Advertisement

ಸುಪ್ರೀಂಕೋರ್ಟ್ ತೀರ್ಪು ನೀಡಿದ ಮೇಲೆ ಅಲ್ಲಿ ರಾಮ ಮಂದಿರ ಕಟ್ಟಲಾಯಿತು. ಸರ್ಕಾರದ ಖರ್ಚಿನಲ್ಲಿ ನಿರ್ಮಾಣವಾಗುತ್ತಿರುವುದಲ್ಲ. ಜನರ ಭಾಗವಾಗಿದೆ. ಹೀಗಾಗಿ ಪ್ರತಿ ಮನೆ ಮನೆಗೆ ಹೋಗಿ ಅಕ್ಷತೆಯನ್ನು ಹಂಚುವ ಕಾರ್ಯ ನಡೆಯುತ್ತಿದೆ. ರಾಮ ಈ ದೇಶದ ಆದರ್ಶ, ನೈತಿಜತೆಯ ಪ್ರತೀಕ. ಗಾಂಧಿ ರಾಮರಾಜ್ಯವಾಗಬೇಕೆಂಬ ಕನಸು ಕಂಡಿದ್ದರು‌. ರಾಮ ರಾಜ್ಯ ಎಂದರೆ ಎಲ್ಲರಿಗೂ ನ್ಯಾಯವಾದಂತ, ಸಮಾನವಾದಂತ, ವ್ಯವಸ್ಥಿತವಾದಂತ ಆಡಳಿತ ಸಿಗಬೇಕು ಎಂಬುದು. ಅಂತಹ ಆಡಳಿತ ಈ ದೇಶದಲ್ಲಿ ಬರಬೇಕೆಂದು ಗಾಂಧೀಜಿ ಕನ್ಸು ಕಂಡಿದ್ದರು. ಅಂತಹ ಆದರ್ಶ ಪುರುಷ ಶ್ರೀರಾಮನ ಜನ್ಮಭೂಮಿಯಲ್ಲಿ ರಾಮಲಲ್ಲನಾ ಪ್ರತಿಷ್ಠಾಪನೆ ನಡೆಯುತ್ತಿದೆ. ಅದಕ್ಕಾಗಿ ಜನ ದೇಣಿಗೆ ನೀಡಿದ್ದಾರೆ. ಕಾಂಗ್ರೆಸ್ ನವರಿಗೆ ಅಲ್ಲಿ ಹೋಗುವುದಕ್ಕೆ ಮನಸ್ಸಿಲ್ಲ ಎಂದರೆ ಏನು ಹೇಳುವುದಕ್ಕೆ ಆಗಲ್ಲ. ಆದರೂ ಅವರಿಗೂ ಆಹ್ವಾನ ನೀಡಲಾಗಿದೆ. ಅವರು ರಾಮರಾಜ್ಯದಲ್ಲಿ ನಂಬಿಕೆ ಇಟ್ಟಿದ್ದಾರೋ, ರಾವಣ ರಾಜ್ಯದಲ್ಲಿ ನಂಬಿಕೆ ಇಟ್ಟಿದ್ದಾರೊ ಅದನ್ನು ಅವರೇ ತೀರ್ಮಾನ ಮಾಡಲಿ ಎಂದಿದ್ದಾರೆ.

ಐದು ಕೆಜಿ ಕೊಡುತ್ತಿರುವ ಅಕ್ಕಿ ಯಾರದ್ದು ಎಂಬುದು ಡಿಕೆ ಶಿವಕುಮಾರ್ ಅವರಿಗೆ ಚೆನ್ನಾಗಿನೆ ಗೊತ್ತಿದೆ ಎಂದು ಇದೇ ವೇಳೆ ಡಿಕೆ ಶಿವಕುಮಾರ್ ಅವರ ಅಕ್ಕಿನೂ ನಮ್ದೆ, ಅರಿಶಿನವವೂ ನಮ್ದೆ ಎಂಬ ಮಾತಿಗೆ ತಿರುಗೇಟು ನೀಡಿದ್ದಾರೆ.

Tags :
Advertisement