ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ಕಾಂಗ್ರೆಸ್ : ಪೂರ್ಣಿಮಾ ಶ್ರೀನಿವಾಸ್ ಪತಿಗೂ ಟಿಕೆಟ್
ಬೆಂಗಳೂರು: ವಿಧಾನಪರಿಷತ್ ಖಾಲಿ ಇರುವ ಐದು ಸ್ಥಾನಗಳಿಗೆ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿದೆ. ಐದು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಈ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇತ್ತಿಚೆಗಷ್ಟೇ ಕಾಂಗ್ರೆಸ್ ಸೇರಿರುವ ಮಾಜಿ ಶಾಸಕಿ ಪೂರ್ಣಿಮಾ ಅವರ ಪತಿಗೂ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೀಗಿದೆ:
ರಾಮೋಜಿ ಗೌಡ : ಬೆಂಗಳೂರು ಪದವೀಧರ ಕ್ಷೇತ್ರ
ಮಾಜಿ ಎಂಎಲ್ಸಿ ಪುಟ್ಟಣ್ಣ : ಬೆಂಗಳೂರು ಶಿಕ್ಷಕರ ಕ್ಷೇತ್ರ
ಕೆ ಕೆ ಮಂಜುನಾಥ್ : ಸೌತ್ ವೆಸ್ಟ್ ಶಿಕ್ಷಕರ ಕ್ಷೇತ್ರ
ಡಿ ಟಿ ಶ್ರೀನಿವಾಸ್ : ಆಗ್ನೇಯ ಶಿಕ್ಷಕರ ಕ್ಷೇತ್ರ
ಡಾ. ಚಂದ್ರಶೇಖರ ಪಾಟೀಲ : ನೈರುತ್ಯ ಪದವೀಧರ ಕ್ಷೇತ್ರ
ಇದರ ನಡುವೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಯೂ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸುಧೀರ್ಘ ಚರ್ಚೆಯ ಬಳಿಕ 25 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷಗಾದಿ ನೀಡುವ ಯೋಚನೆ ಮಾಡಿದ್ದಾರೆ. ಜೊತೆಗೆ ಮೂವರು ಎಂಎಲ್ಸಿಗಳಿಗೂ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗಲಿದೆ ಎನ್ನಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಶಾಸಕರಾದ ಬಿ.ಜಿ.ಗೋವಿಂದಪ್ಪ ಹಾಗೂ ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿಯವರಿಗೂ ನಿಗಮ ಮಡಳಿಯಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಮುಂದಿನ ವಾರ ರಾಜ್ಯಕ್ಕೆ ಸುರ್ಜೇವಾಲ್ ಭೇಟಿ ನೀಡಲಿದ್ದಾರೆ. ಭೇಟಿ ಬಳಿಕ ಚರ್ಚೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಗೆದ್ದಂತ ಎಲ್ಲಾ ಶಾಸಕರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದಕ್ಕೆ ಸಾಧ್ಯವಿರುವುದಿಲ್ಲ. ಜೊತೆಗೆ ಈಗಾಗಲೇ ಸಂಪುಟ ಭರ್ತಿಯಾಗಿದೆ. ಹೀಗಾಗಿ ಶಾಸಕರನ್ನೆಲ್ಲಾ ಜೊತೆಯಲ್ಲಿಯೇ ಇಟ್ಟುಕೊಳ್ಳುವುದಕ್ಕಾಗಿ, ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಸುರ್ಜೇವಾಲ್ ಅವರು ರಾಜ್ಯಕ್ಕೆ ಬಂದ ಬಳಿಕ ಫೈನಲ್ ಪಟ್ಟಿ ರಿಲೀಸ್ ಆಗಲಿದೆ.