Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದೇಶದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು : ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಪರ ಯಡಿಯೂರಪ್ಪ ಮತಯಾಚನೆ

08:16 PM Apr 16, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.16  : ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಿದರೆ, ನನ್ನನ್ನು ಗೆಲ್ಲಿಸಿದಂತೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮತಯಾಚನೆ ವೇಳೆ ತಿಳಿಸಿದ್ದಾರೆ.

Advertisement

 

ಚಿತ್ರದುರ್ಗ ನಗರದಲ್ಲಿ ನಡೆದ ಲಿಂಗಾಯತ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬಿಎಸ್ವೈ, ಮೈತ್ರಿ ಅಭ್ಯರ್ಥಯನ್ನು ಗೆಲ್ಲಿಸಿ ಕೊಟ್ಟರೆ "ಹಂಪಿ ಉತ್ಸವದ ರೀತಿಯಲ್ಲಿ ಮದಕರಿ ನಾಯಕರ ಉತ್ಸವ" ಮಾಡ್ತೀವಿ ಎಂದು ಮಾಜಿ ಸಿಎಂ ಬಿಎಸ್ವೈ ಭರವಸೆ ನೀಡಿದ್ದಾರೆ.

Advertisement

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿರುವ ಕೇಂದ್ರದ 5,300 ಕೋಟಿ ಹಣವನ್ನು ಇವತ್ತಲ್ಲ ನಾಳೆ ಬರುತ್ತದೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನವೊಲಿಸಿ 5,300 ಕೋಟಿ ತರುತ್ತೇನೆ. ನನಗೆ ಈಗ 82 ವರ್ಷ ಆಗಿದೆ. ನನಗೆ ದೇವರು ಶಕ್ತಿ ಕೊಟ್ರೆ,  ಇನ್ನೊಂದು ಲೋಕಸಭೆ ಚುನಾವಣೆ ಮಾಡ್ತೀನಿ.

ದೇಶದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ನಿಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಅಂತ ಹೇಳಲಿ, ಮೋದಿ ಮುಂದೆ ಕಾಂಗ್ರೆಸ್ ಪ್ರಧಾನಿ ಹೆಸರು ಹೇಳುವ ತಾಕತ್ ಇಲ್ಲ. ಜೊತೆಗೆ ಚುನಾವಣೆಗೂ ಮುನ್ನವೇ ನೀವು ಸೋಲು ಒಪ್ಪಿಕೊಂಡಿದ್ದೀರ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ರೈತರ ಕಿಸಾನ್ ಸಮ್ಮಾನ್ ಯೋಜನೆ ಯಾಕೆ ಬಂದ್ ಮಾಡಿದ್ರಿ ?. ಎಂದು ಪ್ರಶ್ನೆ ಹಾಕಿದರು. ಭಾಗ್ಯಲಕ್ಷ್ಮಿ ಯೋಜನೆ ಯಾಕೆ ನೀವು ಬಂದ್ ಮಾಡಿದ್ರಿ? ಸರ್ಕಾರದಲ್ಲಿ ಹಣ ಇಲ್ಲದೇ ಸರ್ಕಾರ ದಿವಾಳಿ ಆಗಿದೆ. ಈ ಸರ್ಕಾರ ರೈತ ವಿರೋಧಿ ಸರ್ಕಾರ ಅನ್ನೋದು ಖಚಿತಪಡಿಸಿಕೊಂಡಿದ್ದೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

Advertisement
Tags :
canvasseschitradurgacongress partyGovinda KarjolaYeddyurappaಕಾಂಗ್ರೆಸ್ ಪಕ್ಷಗೋವಿಂದ ಕಾರಜೋಳಚಿತ್ರದುರ್ಗಬಿ.ಎಸ್.ಯಡಿಯೂರಪ್ಪಬಿಎಸ್ವೈ ಮತಯಾಚನೆಯಡಿಯೂರಪ್ಪ ಮತಯಾಚನೆ
Advertisement
Next Article