ವಿಜಯಪುರ ಹೆಸರು ಬದಲಾಯಿಸಲು ಕಾಂಗ್ರೆಸ್ ತೀರ್ಮಾನ : ಬಸವಣ್ಣನವರ ಹೆಸರಿಡಲು ಚಿಂತನೆ..!
ವಿಜಯಪುರ: ಈ ಮೊದಲೇ ಒಮ್ಮೆ ಹೆಸರು ಬದಲಾಯಿಸಲಾಗಿದ್ದ ವಿಜಯಪುರ ಜಿಲ್ಲೆಯ ಹೆಸರನ್ನು ಮತ್ತೊಮ್ಮೆ ಬದಲಾಯಿಸುವುದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಬಿಜಾಪುರವನ್ನು ಕಾಂಗ್ರೆಸ್ ಸರ್ಕಾರವೇ ಈ ಹಿಂದೆ ವಿಜಯಪುರ ಎಂದು ಬದಲಾವಣೆ ಮಾಡಲಾಗಿತ್ತು. ಇದೀಗ ಮತ್ತೆ ವಿಜಯಪುರ ಹೆಸರನ್ನು ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ.
ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಬಸವಣ್ಣನವರ ಹೆಸರನ್ನು, ವಿಜಯಪುರಕ್ಕೆ ಇಡಲು ನಿರ್ಧಾರ ಮಾಡಲಾಗಿದೆ. ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ಬಗ್ಗೆ ಜಿಲ್ಲಾಧಿಕಾರಿ ಟಿ ಭೂಬ್ಲನ್ ತಿಳಿಸಿದ್ದಾರೆ. ಜಿಲ್ಲೆಗೆ ಬಸವೇಶ್ವರ ಜಿಲ್ಲೆ ಎಂದು ಮರುನಾಮಕರಣ ಮಾಡಲು ನಿರ್ಧಾರ ಮಾಡಿದ್ದು, ಅಧಿಸೂಚನೆಯಲ್ಲಿ ಅದನ್ನೇ ಹೊರಡಿಸಿದೆ.
ಬಸವೇಶ್ವರ ಜಿಲ್ಲೆ ಎಂದು ಹೆಸರಿಡಲು ಜನಪ್ರತಿನಿಧಿಗಳು, ಗಣ್ಯರು, ಎನ್ ಜಿ ಒ ಗಳು, ಸಾರ್ವಜನಿಕರಿಗೂ ಅಭಿಪ್ರಾಯ ತಿಳಿಸುವಂತೆ ಕೇಳಿದೆ. ಹದಿನೈದು ದಿನದ ಒಳಗೆ ತಮ್ಮ ಅಭಿಪ್ರಾಯ ತಿಳಿಸಲು ಸೂಚನೆ ನೀಡಲಾಗಿದೆ. ಆದರೆ ಇದರ ನಡುವೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹೆಸರನ್ನು ಮತ್ತೆ ಮತ್ತೆ ಬದಲಾಯಿಸುವ ಅವಶ್ಯಕತೆ ಇಲ್ಲ. ಮೊದಲು ಅಭಿವೃದ್ಧಿಯ ಕಡೆಗೆ ಗಮನ ಹರಿಸಿ ಎಂದು ಹಲವರು ಸಲಹೆಯನ್ನು ನೀಡುತ್ತಿದ್ದಾರೆ.