For the best experience, open
https://m.suddione.com
on your mobile browser.
Advertisement

ದರ್ಶನ್ ಗೆ ಷರತ್ತು ಬದ್ಧ ಜಾಮೀನು : ದಾಸನ ಪರ ವಕೀಲರು ಹೇಳಿದ್ದೇನು..?

03:42 PM Oct 30, 2024 IST | suddionenews
ದರ್ಶನ್ ಗೆ ಷರತ್ತು ಬದ್ಧ ಜಾಮೀನು   ದಾಸನ ಪರ ವಕೀಲರು ಹೇಳಿದ್ದೇನು
Advertisement

ಬೆಂಗಳೂರು: ನಟ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ ಉಲ್ಬಣಿಸಿದ್ದ ಕಾರಣ ಹೈಕೋರ್ಟ್ ಜಾಮೀನು ನೀಡಿದೆ. ಮದ್ಯಂತರ ಜಾಮೀನಿನಲ್ಲಿ ವೈದ್ಯಕೀಯ ಚಿಕಿತ್ಸೆಗೆಂದೆ ಈ ಆರು ವಾರಗಳನ್ನು ಮೀಸಲಿಡಬೇಕೆಂದು ತಿಳಿಸಿದೆ. ಈಗ ದರ್ಶನ್ ಪರ ವಕೀಲರಿಗೆ ಸವಾಲಿನ ಕೆಲಸವಾಗಿದೆ. ಮಧ್ಯಂತರ ಜಾಮೀನು ಸಿ್ಖಿದ್ದು, ರೆಗ್ಯುಲರ್ ಬೇಲ್ ತೆಗೆದುಕೊಳ್ಳಬೇಕಾಗಿದೆ.

Advertisement

ಇಂದು ಮಧ್ಯಂತರ ಬೇಲ್ ಸಿಕ್ಕಿರುವ ಬಗ್ಗೆ ದರ್ಶನ್ ಅವರ ಪರ ವಕೀಲ ಸುನೀಲ್ ಕುಮಾರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. 'ದರ್ಶನ್ ಅವರುಗೆ ಸ್ಪೈನಲ್ ಸಮಸ್ಯೆ ಇದೆ. ಹೀಗಾಗಿ ವೈದ್ಯಕೀಯ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಂಬಂಧ ಹೈಕೋರ್ಟ್ ಬೇಲ್ ನೀಡಿದೆ. ವೈದ್ಯಕೀಯ ಕಾರಣ ನೀಡಿ ಮಧ್ಯಂತರ ಜಾಮೀನಿಗೆ ಅರ್ಜಿ ಹಾಕಲಾಗಿತ್ತು. ಇದಕ್ಕೆ ಸಿವಿ ನಾಗೇಶ್ ಅವರು ವಾದ ಮಂಡಿಸಿದ್ದರು. ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಜೈಲು ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸೀಲ್ಡ್ ಕವರಿನಲ್ಲಿದ್ದ ವರದಿಗಳನ್ನು ಕೋರ್ಟ್ ಗೆ ನೀಡಿದ್ದರು‌. ಇವತ್ತಿಗೆ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಅದರಂತೆ ಇಂದು ಮಧ್ಯಂತರ ಜಾಮೀನು ನೀಡಿದೆ. ದರ್ಶನ್ ಅವರು ಆಸ್ಪತ್ರೆಗೆ ದಾಖಲಾದ ಒಂದು ವಾರದ ಒಳಗೆ ಎಲ್ಲಾ ದಾಖಲಾತಿಗಳನ್ನು ಕೋರ್ಟ್ ಗೆ ಸಲ್ಲಿಸಬೇಕು. ಪಾಸ್ ಪೋರ್ಟ್ ಕೂಡ ಕೊಡಿ ಎಂದು ನ್ಯಾಯಾಲಯ ಕೇಳಿದೆ.

ಇದರ ಜೊತೆಗೆ ಕೆಲ ಷರತ್ತುಗಳನ್ನು ವಿಧಿಸಿದೆ. ನ್ಯಾಯಾಲಯದ ಹೇಳಿಕೆಯಂತೆ ಎಲ್ಲವನ್ನು ನೀಡಲಾಗುವುದು. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವಾದ ಮಂಡೊಸಿದ್ದೇವೆ. ಆದರೆ ಈಗ ದರ್ಶನ್ ಅವರು ಅವರ ಕುಟುಂಬಸ್ಥರ ಜೊತೆಗೆ ಮಾತನಾಡಿ, ಯಾವ ಆಸ್ಪತ್ರೆ ಸೂಕ್ತವೋ ಅಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ. ನಾವೆಲ್ಲಾ ಷರತ್ತುಗಳನ್ನು ಪೂರೈಸಿದ ಮೇಲೆಯೇ ದರ್ಸನ್ ರಿಲೀಸ್ ಆಗ್ತಾರೆ ಎಂದಿದ್ದಾರೆ.

Tags :
Advertisement