Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು : ಕಾರಣವೇನು ಗೊತ್ತಾ..?

03:07 PM Dec 04, 2023 IST | suddionenews
Advertisement

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸಾಮಾಜಿಕ ಹೋರಾಟಗಾರ ಸಿ ಎಸ್ ಸಿದ್ದರಾಜು ಎಂಬುವವರು ದೂರು ದಾಖಲಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಆಸ್ತಿ ಕುರಿತು ಪೂರ್ಣ ಮಾಹಿತಿ ನೀಡದ ಆರೋಪದ ಮೇಲೆ ಲೋಕಾಯುಕ್ತಕ್ಕೆ ದೂರು ದಾಖಲು ಮಾಡಲಾಗಿದೆ.

Advertisement

 

2004, 2013, 2018ರ ಚುನಾವಣೆಯನ್ನು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅದರಲ್ಲಿ 2004ರ ವಿಧಾನಾಭಾ ಚುನಾವಣೆಯಲ್ಲಿ ಕೇತಗಾನಹಳ್ಳಿಯಲ್ಲಿ 24 ಎಕರೆ ಜಮೀನು ಇರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. 2008 ಹಾಗೂ 2013ರಲ್ಲಿ ಜೆಪಿ ನಗರದ ಮನೆಯನ್ನು ಖರೀದಿ ಮಾಡಿದ್ದಾಗಿ ಉಲ್ಲೇಖಿಸಿದ್ದಾರೆ. 2023ಕ್ಕೆ ಅದೇ ಮನೆಯನ್ನು 1995ರಲ್ಲಿ ಖರೀದಿಸಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ.

Advertisement

ಅನಿತಾ ಕುಮಾರಸ್ವಾಮಿ ಅವರು ಕುಪೇಂದ್ರ ರೆಡ್ಡಿಯವರಿಂದ 9 ಕೋಟಿ 50 ಲಕ್ಷ ಸಾಲ ಪಡೆದಿರುವುದಾಗಿ ಹೇಳಿದ್ದಾರೆ. ಆದರೆ ಇದೇ ಕುಪೇಂದ್ರ ರೆಡ್ಡಿ, 2022ರಲ್ಲಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಚೆನ್ನಾಂಬಿಕ ಫಿಲ್ಮ್ ಸಂಸ್ಥೆಗೆ 4 ಕೋಟಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಆಸ್ತಿಯ ವಿಚಾರದಲ್ಲಿ ತಮ್ಮ ಚಿಕ್ಕಮ್ಮ ಸಾವಿತ್ರಮ್ಮರವರಿಂದ ದಾನ ಪಡೆದಿರುವುದಾಗಿ ತಿಳಿಸಿದ್ದಾರೆ‌. ಸಾವಿತ್ರಮ್ಮರಿಗೆ ಕುಮಾರಸ್ವಾಮಿ ಬೇನಾಮಿಯಾಗಿದ್ದಾರಾ..? ತಾಯಿಯ ಸಹೋದರಿಯ ಆದಾಯದ ಮೂಲ ಯಾವುದು ಎಂದು ಪ್ರಶ್ನಿಸಿದ್ದಾರೆ. ಈ ರೀತಿ ಪೂರ್ಣ ಪ್ರಮಾಣದ ಮಾಹಿತಿಯನ್ನು ನೀಡದೆ ವಂಚಿಸಿದ್ದಾರೆಂದು ಆರೋಪದಲ್ಲಿ ತಿಳಿಸಲಾಗಿದೆ.

Advertisement
Tags :
bangalorecomplaintDo you know the reasonH D KumaraswamyKumaraswamyLokayuktaಕುಮಾರಸ್ವಾಮಿಬೆಂಗಳೂರುಲೋಕಾಯುಕ್ತಕ್ಕೆ ದೂರು
Advertisement
Next Article