For the best experience, open
https://m.suddione.com
on your mobile browser.
Advertisement

ತೆಂಗಿನಕಾಯಿ ದರ ಏರಿಕೆ : ರೈತರಲ್ಲಿ ಮೂಡಿದ ಮಂದಹಾಸ..!

09:35 PM Sep 25, 2024 IST | suddionenews
ತೆಂಗಿನಕಾಯಿ ದರ ಏರಿಕೆ   ರೈತರಲ್ಲಿ ಮೂಡಿದ ಮಂದಹಾಸ
Advertisement

ಚಾಮರಾಜನಗರ: ತಾವೂ ಬೆಳೆದ ಬೆಲೆಗೆ ಉತ್ತಮ ಬೆಲೆ ಬಂದರೆ ರೈತರಿಗೆ ಅದಕ್ಕಿಂತ ಮತ್ತೊಂದು ಖುಷಿ ಇಲ್ಲ. ಎಷ್ಟೋ ಸಲ ನಷ್ಟವಾದರೂ ಬೆಳೆ ಬೆಳೆಯೋದನ್ನು ಮಾತ್ರ ಬಿಡುವುದಿಲ್ಲ. ಒಳ್ಳೆ ಬೆಲೆ ಬಂದರೆ ಸಾಲಸೋಲ ಮಾಡುವುದು ತಪ್ಪುತ್ತೆ ಎಂಬುದೇ ಸಂತಸದ ಸುದ್ದಿ. ಇದೀಗ ತೆಂಗು ಬೆಳೆಗಾರರಿಗೆ ಈಗ ಸಂತಸದ ಸುದ್ದಿ ಸಿಕ್ಕಿದೆ. ತೆಂಗಿನ ಬೆಲೆಯಲ್ಲಿ ಏರಿಕೆ ಕಂಡಿದೆ.

Advertisement
Advertisement

ಕಳೆದ ತಿಂಗಳಷ್ಟೇ ತೆಂಗಿನ ಬೆಲೆ 25 ರೂಪಾಗಿ ಇತ್ತು. ಇದೀಗ ತೆಂಗಿನ ಬೆಲೆ 50 ರೂಪಾತಿ ಆಗಿದೆ. ಎಳನೀರಿಗೆ ಬೇಡಿಕೆ ಇದ್ದ ಕಾರಣ ಬಹುತೇಕ ಮಂದಿ ತೆಂಗಿನಕಾಯಿಗಿಂತ ಎಳನೀರನ್ನೇ ಕಿತ್ತು ಮಾರಾಟ ಮಾಡುತ್ತಿದ್ದರು. ಹೀಗಾಗಿ ಇಳುವರಿ ಕುಂಠಿತವಾಗಿತ್ತು. ಇದಿಒಗ ತೆಂಗಿನಕಾಯಿಗೂ ಬೆಲೆ ಬಂದಿದೆ. ಜೊತೆಗೆ ಕೊಬ್ಬರಿ ಎಣ್ಣೆ ಹಾಗೂ ಕೊಬ್ಬರಿ ಪುಡಿಯ ದರವೂ ಏರಿಕೆಯಾಗಿದೆ‌. ಹೀಗಾಗಿ ತೆಂಗಿನಕಾಯಿ ದರವೂ ಹೆಚ್ಚಳವಾಗಿದೆ. ಇದಿ ರೈತರಿಗೆ ಖುಷಿಯೋ ಖುಷಿ.

ತೆಂಗಿನ ಬೆಳೆಗೆ ಆಗಾಗ ನುಸಿರೋಗ ಬಾಧಿಸುತ್ತಲೇ ಇರುತ್ತದೆ. ಅಲ್ಲದೇ ಕಟಾವಿಗೆ ಬಂದ ಸಂದರ್ಭದಲ್ಲಿ ಸಾಕಷ್ಟು ಖರ್ಚನ್ನು ಬೇಡುತ್ತದೆ. ಈ ನಡುವೆ ತಿಂಗಳೊಳಗೆ ತೆಂಗಿನಕಾಯಿ ಬೆಲೆ ದಾಖಲೆ ಬರೆದಿದೆ. ತೆರೆದ ಮಾರುಕಟ್ಟೆಯಲ್ಲಿ ಕೆ.ಜಿ.ತೆಂಗಿನಕಾಯಿ ಸದ್ಯ 50 ರೂ. ಇದ್ದು, ಇನ್ನು ಏರಿಕೆ ಕಾಣುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತೆಂಗಿನಕಾಯಿಯನ್ನು ಎಣ್ಣೆಯಲ್ಲದೇ ಪೌಡರ್‌ ಉದ್ದೇಶಕ್ಕೂ ಹೆಚ್ಚು ಬಳಸಲಾಗುತ್ತದೆ. ಜಿಲ್ಲೆಯ ತೆಂಗಿನಕಾಯಿ ರಾಜ್ಯದ ತುಮಕೂರು, ತಿಪಟೂರಿಗಲ್ಲದೇ ಹೊರರಾಜ್ಯಗಳಿಗೂ ಸಾಗಣೆಯಾಗುತ್ತದೆ. ಈಗ ತೆಂಗು ಬೆಳೆಗಾರರಿಗೆ ಸಮಾಧಾನ ತಂದಿದೆ. ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಉತ್ತಮ ಫಸಲು ಬರುವ ನಿರೀಕ್ಷೆಯೂ ರೈತರಲ್ಲಿದೆ.

Advertisement

Advertisement
Tags :
Advertisement